ಕನ್ನಡಪ್ರಭ ವಾರ್ತೆ ಕಂಪ್ಲಿ
ಪಟ್ಟಣದ ಪಂಪ್ ಹೌಸ್‌ನ ಆವರಣದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಪುರಸಭೆ ಬಜೆಟ್ ಅನ್ನು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್ ಬುಧವಾರ ಮಂಡಿಸಿದರು.2025-26ನೇ ಸಾಲಿನ ಆಯವ್ಯಯದಲ್ಲಿ ಮನೆ ತೆರಿಗೆ, ನೀರಿನ ಶುಲ್ಕ, ಬಾಡಿಗೆಗಳು, ಮಾರುಕಟ್ಟೆಗಳು, ಕಟ್ಟಡ ಕಾಯಿದೆ ಯೋಜನೆಗೆ ಸಂಬಂಧಿಸಿದೆ ಶುಲ್ಕ, ಅಭಿವೃದ್ಧಿ ಶುಲ್ಕ ಮತ್ತು ಇತರೆ, ವ್ಯಾಪಾರ ಪರವಾನಿಗೆ ಶುಲ್ಕ, ರಾಜ್ಯ ಹಣಕಾಸು ಆಯೋಗದ ವೇತನ ಅನುದಾನ, ರಾಜ್ಯ ಹಣಕಾಸು ಆಯೋಗದ ನಿರ್ಭಂಧಿತ ಅನುದಾನ, ಸರ್ಕಾರದಿಂದ ನಿರೀಕ್ಷಿಸಲಾದ ಅನುದಾನಗಳಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ಸಂಸತ್ ಹಾಗೂ ವಿಧಾನಸಭೆ ಸದಸ್ಯರ ಪ್ರದೇಶ ಅಭಿವೃದ್ಧಿ ಅನುದಾನ, ಪ್ರಕೃತಿ ವಿಕೋಪ ಪರಿಹಾರ ನಿಧಿ, ಕೆಕೆಆರ್ ಡಿಬಿ ಮತ್ತು ಇತರೆ ಅಭಿವೃದ್ಧಿ ಅನುದಾನಗಳು, ನಗರೋತ್ತಾನ ಯೋಜನೆಯಡಿ ಅನುದಾನ, ನೀರು ಸರಬರಾಜು ಯೋಜನೆ ಕೆಯುಐಡಿಎಫ್ಸಿ, ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣ ಅಭಿವೃದ್ಧಿ, ಸ್ವಚ್ಛ ಭಾರತ ಯೋಜನೆ ಅಡಿ ಅನುದಾನ, ಗಣಿಬಾದಿದ ಪ್ರದೇಶ ಅಭಿವೃದ್ಧಿ ಅನುದಾನ, ವಿದ್ಯುತ್ ಬಿಲ್ ಪಾವತಿ ಸಂಬಂಧಿಸಿದ ಅನುದಾನ, 16ನೇ ಹಣಕಾಸು ಆಯೋಗದ ಅನುದಾನ ಇತರೆ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳು ಸೇರಿ ಒಟ್ಟಾರೆ ₹ 68.18 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಸಾಮಾನ್ಯ ಆಡಳಿತ ಹಾಗೂ ಸಿಬ್ಬಂದಿ ವೇತನ ಖರ್ಚು, ಸಾರ್ವಜನಿಕ ವಿದ್ಯುತ್ ಮತ್ತು ಬೀದಿ ದೀಪಗಳ, ಸಾರ್ವಜನಿಕ ಆರೋಗ್ಯಕ್ಕಾಗಿ, ನೀರು ಸರಬರಾಜು ನಿರ್ವಹಣೆ, ನೈರ್ಮಲ್ಯ ಹಾಗೂ ಘನ ತ್ಯಾಜ್ಯ ವಸ್ತು ನಿರ್ವಹಣೆ, ಕಟ್ಟಡಗಳು ಹಾಗೂ ಇತರೆ ಸ್ಥಿರಾಸ್ತಿಗಳ ನಿರ್ಮಾಣ, ರಸ್ತೆ ಬದಿಯ ಚರಂಡಿಗಳ ನಿರ್ಮಾಣ, ಪಟ್ಟಣದ ರಸ್ತೆಗಳ ಅಭಿವೃದ್ಧಿಗಾಗಿ, ಒಳಚರಂಡಿ ಹಾಗೂ ನೀರು ಸರಬರಾಜು ಯೋಜನೆ ಖರ್ಚು, ಕಚೇರಿ ಉಪಕರಣಗಳು, ವಾಹನ ಹಾಗೂ ಲಘು ವಾಹನ ಮತ್ತು ಯಂತ್ರೋಪಕರಣ ಖರೀದಿ, ಪಟ್ಟಣದ ವೃತ್ತಗಳ ನಿರ್ಮಾಣ, ಸೋಮಪ್ಪ ಕೆರೆ ಅಭಿವೃದ್ಧಿ, ತರಕಾರಿ ಮಾರುಕಟ್ಟೆ ಅಭಿವೃದ್ಧಿ ಇತರೆ ಖರ್ಚುಗಳು ಸೇರಿ ಒಟ್ಟಾರೆ ₹67.52 ಕೋಟಿ ಖರ್ಚು ಅಂದಾಜಿಸಲಾಗಿದ್ದು, ₹65.97 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.ಪುರಸಭೆ ಸಿಬ್ಬಂದಿಯಿಂದ ಸರಿಯಾದ ರೀತಿಯಲ್ಲಿ ತೆರಿಗೆ ವಸೂಲಾತಿ ಆಗದೆ ಪುರಸಭೆ ಆದಾಯ ಇಳಿಕೆ ಕಂಡಿದೆ ಎಂದು ಪುರಸಭೆ ಸದಸ್ಯ ವಿ.ಎಲ್. ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪುರಸಭೆಯಲ್ಲಿ ಕುಂದು ಕೊರತೆಗಳಿರುವುದು ನಿಜ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ತೆರಿಗೆ ವಸೂಲಾತಿಯನ್ನು ಸಮರ್ಪಕವಾಗಿ ಮಾಡಬೇಕು. ಇನ್ನು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಸೇವೆ ಸಲ್ಲಿಸಲು ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಶಾಂತಲಾ, ನಾಗಮ್ಮ, ಸುಮಾ, ಎಸ್.ಎಂ. ನಾಗರಾಜ, ಟಿ.ವಿ. ಸುದರ್ಶನ್ ರೆಡ್ಡಿ, ಪಿ.ಮೌಲ, ಉಡುದಮ್ಮ, ಲಡ್ಡು ಹೊನ್ನೂರ್ ವಲಿ, ಸಿ.ಆರ್. ಹನುಮಂತ, ಆಂಜನೇಯಲು, ವೀರಾಂಜಿನೆಯಲು, ರಾಮಾಂಜಿನಿ ಹೇಮಾವತಿ ಪೂರ್ಣ ಚಂದ್ರ, ನಾಮ ನಿರ್ದೇಶನ ಸದಸ್ಯರಾದ ಡಿ.ಮೌನೇಶ್, ಗದಿಗಿ ವಿರೂಪಾಕ್ಷೀ, ಕೆ.ಕೃಷ್ಣ, ಕೋಟೇಶ್, ಗೋಪಾಲ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.