ಗುಂಡ್ಲುಪೇಟೆ ಲ್ಯಾಂಪ್ ಸೊಸೈಟಿಯಲ್ಲಿ ನಡೆದ ಟಿಎಪಿಸಿಎಂಎಸ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಟಿಎಪಿಎಂಸಿಎಸ್ ಅಧ್ಯಕ್ಷ ಆಲತ್ತೂರು ಜಯರಾಂ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘಕ್ಕೆ ಸೇರಿದ ಪಟ್ಟಣದ ಆಸ್ತಿಯ ವಿಚಾರ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂದ ತೀರ್ಪು ಬಂದ ಬಳಿಕ ಟಿಎಪಿಸಿಎಂಎಸ್ ಜಾಗಕ್ಕೆ ಸುತ್ತು ಗೋಡೆ ಹಾಕಲು ಕ್ರಮ ಎಂದು ಟಿಎಪಿಸಿಎಂಎಸ್ ಅಧ್ಯಕ್ಷರೂ ಆದ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ಆಲತ್ತೂರು ಜಯರಾಂ ಘೋಷಿಸಿದರು.ಪಟ್ಟಣದ ಲ್ಯಾಂಪ್ ಸೊಸೈಟಿಯಲ್ಲಿ ೨೦೨೪-೨೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಟಿಎಪಿಸಿಎಂಎಸ್‌ಗೆ ಸೇರಿದ ಜಾಗದ ವಿಷಯ ನ್ಯಾಯಾಲಯದಲ್ಲಿ ಬಗೆಹರಿಯಲಿದೆ ಅಲ್ಲಿಯ ತನಕ ಕಾಯಬೇಕಾದ ಅನಿವಾರ್ಯ ಇದೆ ಎಂದರು. ಈ ಸಾಲಿನಲ್ಲಿ ವಾರ್ಷಿಕ ೨೦ ಲಕ್ಷ ಲಾಭದಲ್ಲಿದೆ. ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದ ಅನುದಾನ ೨೦ ಲಕ್ಷ ತಂದಿದ್ದೇನೆ. ಆ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಲು ಆಡಳಿತ ಮಂಡಳಿಯು ತೀರ್ಮಾನಿಸಿದೆ ಎಂದರು.
ವಾರ್ಷಿಕ ಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಚಾಮುಲ್ ನಿರ್ದೇಶಕರೂ ಆದ ಟಿಎಪಿಎಸಿಎಂಎಸ್ ನಿರ್ದೇಶಕ ಎಂ.ಪಿ.ಸುನೀಲ್, ಟಿಎಪಿಸಿಎಂಎಸ್ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ಟಿಎಪಿಸಿಎಂಎಸ್ ನಿರ್ದೇಶಕರಾದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ,ಅಂಕಹಳ್ಳಿ ರಾಜಶೇಖರ್,ನಾಗಪ್ಪ,ಬರಗಿ ವೆಂಕಟರಾಜು, ಮೀಸೆ ಬಸಪ್ಪ, ಸಿದ್ದಯ್ಯನಪುರ ಸೋಮಶೇಖರ್, ಮಂಗಳಮ್ಮ, ಗೋಕುಲ ಶೆಟ್ಟಿ, ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಾಹಕರೂ ಆದ ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ್,ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಹಂಗಳ ಮಹದೇವಪ್ಪ,ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಗಂಗಪ್ಪ,ಎಚ್.ಎಂ.ಮಹೇಶ್,ಮುಖಂಡರಾದ ಆಲತ್ತೂರು ರಾಮಕೃಷ್ಣೇಗೌಡ,ಎಲಚಟ್ಟಿಬಸಪ್ಪ ಸೇರಿದಂತೆ ನೂರಾರು ಮಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.