ಮಾ.೩ರಂದು ಸಮಗ್ರ ಕೃಷಿ ಜಾಗೃತಿ ಅಭಿಯಾನ: ಟ್ರಸ್ಟ್ ಅಧ್ಯಕ್ಷ ಜೋಗೀಗೌಡ

KannadaprabhaNewsNetwork |  
Published : Feb 21, 2025, 11:46 PM IST
ಮಾ.೩ರಂದು ಸಮಗ್ರ ಕೃಷಿ ಜಾಗೃತಿ ಅಭಿಯಾನ | Kannada Prabha

ಸಾರಾಂಶ

ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ವತಿಯಿಂದ ಮಾ. ೩ರಂದು ಕೆ.ವಿ.ಎಸ್. ಶತಮಾನೋತ್ಸವ ಭವನದಲ್ಲಿ ಸಮಗ್ರ ಕೃಷಿ ಜಾಗ್ರತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ವತಿಯಿಂದ ಮಾ. ೩ರಂದು ಕೆ.ವಿ.ಎಸ್. ಶತಮಾನೋತ್ಸವ ಭವನದಲ್ಲಿ ಸಮಗ್ರ ಕೃಷಿ ಜಾಗ್ರತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೋಗೀಗೌಡ ತಿಳಿಸಿದರು.

ಅಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಜೋಗೀಗೌಡ ಅಧ್ಯಕ್ಷತೆ ವಹಿಸುವರು. ವಕೀಲ ಡಾ. ಯಮದೂರು ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್. ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್. ರೂಪಶ್ರೀ, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೃಷ್ಣೇಗೌಡ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಬೆಳಗ್ಗೆ ೧೦.೩೦ಕ್ಕೆ ಸ್ವದೇಶಿ ಜಾಗರಣ ಮಂಚ್ ಸಂಘಟನಾ ಕಾರ್ಯದರ್ಶಿ ಕೆ. ಜಗದೀಶ್ ಅವರು ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಕುರಿತು ಉಪನ್ಯಾಸ ನೀಡುವರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಅಪ್ಪಾಜಿ ಉಪಸ್ಥಿತರಿರುವರು ಎಂದರು.

ಬೆಳಗ್ಗೆ ೧೧ ಗಂಟೆಗೆ ನೈಸರ್ಗಿಕ ಹಾಗೂ ಪಾರಂಪರಿಕ ಕೃಷಿ ಕುರಿತು ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್‌ಗೌಡ ಉಪನ್ಯಾಸ ನೀಡುವರು. ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ, ಕೆ.ಬಿ. ಶಿವಕುಮಾರ್ ಭಾಗವಹಿಸುವರು ಎಂದು ಹೇಳಿದರು.

ಮಧ್ಯಾಹ್ನ ೧೨ ಗಂಟೆಗೆ ಸಮಗ್ರ ಕೃಷಿ ಹಾಗೂ ಮಣ್ಣು ಪುನರ್ ಚೇತನದ ಮಹತ್ವ ಕುರಿತು ಮೈಕ್ರೋಭಿ ಫೌಂಡೇಷನ್ ಅಧ್ಯಕ್ಷ ಕೆ.ಆರ್. ಹುಲ್ಲುನಾಚೇಗೌಡ ಉಪನ್ಯಾಸ ನೀಡುವರು. ಮನ್‌ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ ಭಾಗವಹಿಸುವರು. ಮಧ್ಯಾಹ್ನ ೧ ಗಂಟೆಗೆ ಸಾವಯವ ಆಹಾರ ಧಾನ್ಯಗಳು ದೇಶ ವಿದೇಶದಲ್ಲಿ ಬೇಡಿಕೆ ಕುರಿತು ಪರಿಸರವಾದಿ ಪ್ರೊ. ಕುಮಾರಸ್ವಾಮಿ ಅವರು ಉಪನ್ಯಾಸ ನೀಡುವರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಭಾಗವಹಿಸುವರು ಎಂದು ತಿಳಿಸಿದರು.

ಮಧ್ಯಾಹ್ನ ೨.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸಮಾರೋಪ ಭಾಷಣ ಮಾಡುವರು. ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪಿ. ರವಿಕುಮಾರ್ ಅವರು ನಾಲ್ಕು ಮಂದಿ ಸಾಧಕ ರೈತರನ್ನು ಸನ್ಮಾನಿಸುವರು. ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ. ಶೇಖರ್ ಅಧ್ಯಕ್ಷತೆ ವಹಿಸುವರು ಎಂದರು.

ಒಕ್ಕಲಿಗ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸ್ವದೇಶಿ ಜಾಗರಣ ಮಂಚ್‌ನ ಮಹಿಳಾ ಪ್ರಮುಖ್ ಟಿ.ಆರ್. ರಶ್ಮಿ, ರಾಜ್ಯ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಡಾ. ಸದಾನಂದ, ರೇಷ್ಮೆ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಿವಲಿಂಗಯ್ಯ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಟ್ರಸ್ಟ್‌ನ ವಿನಯ್‌ಕುಮಾರ್, ರಾಧಾಕೃಷ್ಣ, ಯಮದೂರು ಸಿದ್ದರಾಜು ಇತರರು ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!