ಜೆಎಸ್ಎಸ್ ಕಾಲೇಜಿಗೆ ಮೂರು ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

KannadaprabhaNewsNetwork | Published : Nov 17, 2024 1:15 AM

ಸಾರಾಂಶ

70 ಕೆಜಿ ವಿಭಾಗದಲ್ಲಿ ವಿ. ಅನೀಷ್ ಅರಸ್- ಚಿನ್ನದ ಪದಕ ಹಾಗೂ ಬ್ರಿಜೇಶ್- ಬೆಳ್ಳಿಯ ಪದಕವನ್ನು ಪಡೆಯುವುದರ ಜೊತೆಗೆ 60 ಕೆಜಿ ವಿಭಾಗದಲ್ಲಿ ಡಿ.ಬಿ. ಮಾದೇಶ- ಬೆಳ್ಳಿಯ ಪದಕ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷರ ವಿಭಾಗದಲ್ಲಿ ಯೋಗ, ಕಿಕ್ ಬಾಕ್ಸಿಂಗ್ ಹಾಗೂ ಕುಸ್ತಿ ಪಂದ್ಯಾವಳಿಗಳಲ್ಲಿ ಕಾಲೇಜಿನ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದ್ದಾರೆ.

ವಿಶೇಷವಾಗಿ ಯೋಗ ವಿಭಾಗದಲ್ಲಿ ಎಸ್. ಶರತ್- ಚಿನ್ನದ ಪದಕ ಹಾಗೂ ಡಿ.ಎಂ. ಸಂದೇಶ್- ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಕಿಕ್ ಬಾಕ್ಸಿಂಗ್ ಸ್ಪರ್ಧೆಯ 93 ಕೆಜಿ ವಿಭಾಗಗಳಲ್ಲಿ ಡಿ.ಎಸ್. ಆಕಾಶ್- ಚಿನ್ನದ ಪದಕ, ಆರ್. ನಿತಿನ್- ಬೆಳ್ಳಿ ಪದಕ ಪಡೆದರೆ, 65 ಕೆ ಜಿ ವಿಭಾಗದಲ್ಲಿ ದೀಕ್ಷಿತ್ ಗೌಡ- ಚಿನ್ನದ ಪದಕ, ಸಿ. ಕಿರಣ್ - ಬೆಳ್ಳಿಯ ಪದಕ ಪಡೆದಿದ್ದಾರೆ.

70 ಕೆಜಿ ವಿಭಾಗದಲ್ಲಿ ವಿ. ಅನೀಷ್ ಅರಸ್- ಚಿನ್ನದ ಪದಕ ಹಾಗೂ ಬ್ರಿಜೇಶ್- ಬೆಳ್ಳಿಯ ಪದಕವನ್ನು ಪಡೆಯುವುದರ ಜೊತೆಗೆ 60 ಕೆಜಿ ವಿಭಾಗದಲ್ಲಿ ಡಿ.ಬಿ. ಮಾದೇಶ- ಬೆಳ್ಳಿಯ ಪದಕ ಪಡೆದಿದ್ದಾರೆ.

ಕುಸ್ತಿ ಸ್ಪರ್ಧೆಯ 93 ಕೆ.ಜಿ. ವಿಭಾಗದಲ್ಲಿ ಆರ್. ನಿತಿನ್- ಚಿನ್ನದ ಪದಕ, 65 ಕೆಜಿ ವಿಭಾಗದಲ್ಲಿ ಎಂ. ದೀಕ್ಷಿತ್ ಗೌಡ, 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, 60 ಕೆಜಿ ವಿಭಾಗದಲ್ಲಿ ಎಂ. ವಿನಯಕುಮಾರ್- ಬೆಳ್ಳಿಯ ಪದಕ, ಎಂ. ಗಣೇಶ್- ಕಂಚಿನ ಪದಕ ಹಾಗೂ 65 ಕೆಜಿ ವಿಭಾಗದಲ್ಲಿ ಡಿ.ಬಿ. ಮಾದೇಶ- ಕಂಚಿನ ಪದಕ, 58 ಕೆಜಿ ವಿಭಾಗದಲ್ಲಿ ಕಿರಣ್ - ಕಂಚಿನ ಪದಕ ಹಾಗೂ 70 ಕೆ.ಜಿ. ವಿಭಾಗದಲ್ಲಿ ಎಸ್. ಶರತ್ ಕುಮಾರ್ -ಕಂಚಿನ ಪದಕ ಪಡೆಯುವುದರೊಂದಿಗೆ ಮೂರು ವಿಭಾಗಗಳಿಗೆ ನಡೆದ ಪಂದ್ಯಗಳಲ್ಲಿ ಅನುಕ್ರಮವಾಗಿ ಯೋಗ, ಕಿಕ್ ಬಾಕ್ಸಿಂಗ್ ಮತ್ತು ಕುಸ್ತಿ ಪಂದ್ಯಾವಳಿಗಳಲ್ಲಿ ಸಮಗ್ರ ಪ್ರಶಸ್ತಿಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ವಿಜೇತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸಿ. ಎಸ್. ಹೊನ್ನೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಂ. ವಿಕ್ರಂ, ಐಕ್ಯೂಎಸಿ ಸಂಚಾಲಕ ಡಾ.ಬಿ.ಕೆ. ಕೆಂಡಗಣ್ಣಸ್ವಾಮಿ ಹಾಗೂ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಅಭಿನಂದಿಸಿದರು.

Share this article