ಕಲ್ಪತರು ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Sep 20, 2025, 01:00 AM IST
19ಎಚ್ಎಸ್ಎನ್12 : ಹಳೇಬೀಡು- ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಲ್ಪತರು ಪದವಿ ಪೂರ್ವ ಕಾಲೇಜು ಸತತ ಮೂರನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. | Kannada Prabha

ಸಾರಾಂಶ

ಬಾಲಕರ ಸಮಗ್ರ- ಬಾಲಕರ ವಿಭಾಗದಲ್ಲಿ ಖೋ ಖೋ, ವಾಲಿಬಾಲ್, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ರಿಲೇ ೪೦೦ ಮೀ ಮತು ೪೦೦೦ಮೀ, ೩೦೦೦ ಮೀಟರ್ ಓಟದಲ್ಲಿ ಪ್ರಥಮ. ೧೫೦೦ ಮೀ, ೮೦೦ ಮೀಟರ್ ಪ್ರಥಮ. ಬಾಲಕರ ಒಟ್ಟು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲಕ- ಬಾಲಕಿಯರ ಒಟ್ಟು ಸಮಗ್ರ-ಬಾಲಕಿಯರ ವಿಭಾಗದಲ್ಲಿ ೩೦೦೦ ಓಟ ಪ್ರಥಮ, ೧೫೦೦ ಮೀಟರ್‌ ದ್ವಿತೀಯ, ೪೦೦ಮೀ ರಿಲೇ ಪ್ರಥಮ, ಥ್ರೋಬಾಲ್, ಖೋಖೋ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕ ಮತ್ತು ಬಾಲಕಿಯರ ಒಟ್ಟು ಸಮಗ್ರ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ಸರ್ಕಾರಿ ಕೆಪಿಎಸ್ ಶಾಲಾ ಆವರಣದಲ್ಲಿ ಪದವಿಪೂರ್ವ ಕಾಲೇಜುಗಳ ಶಿಕ್ಷಣ ಇಲಾಖೆ ಹಾಗೂ ಎಸ್.ಜಿ.ಆರ್‌ ಪದವಿ ಕಾಲೇಜು ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಹಳೇಬೀಡಿನ ಕಲ್ಪತರು ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.

ಬಾಲಕರ ಸಮಗ್ರ- ಬಾಲಕರ ವಿಭಾಗದಲ್ಲಿ ಖೋ ಖೋ, ವಾಲಿಬಾಲ್, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ರಿಲೇ ೪೦೦ ಮೀ ಮತು ೪೦೦೦ಮೀ, ೩೦೦೦ ಮೀಟರ್ ಓಟದಲ್ಲಿ ಪ್ರಥಮ. ೧೫೦೦ ಮೀ, ೮೦೦ ಮೀಟರ್ ಪ್ರಥಮ. ಬಾಲಕರ ಒಟ್ಟು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲಕ- ಬಾಲಕಿಯರ ಒಟ್ಟು ಸಮಗ್ರ-ಬಾಲಕಿಯರ ವಿಭಾಗದಲ್ಲಿ ೩೦೦೦ ಓಟ ಪ್ರಥಮ, ೧೫೦೦ ಮೀಟರ್‌ ದ್ವಿತೀಯ, ೪೦೦ಮೀ ರಿಲೇ ಪ್ರಥಮ, ಥ್ರೋಬಾಲ್, ಖೋಖೋ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕ ಮತ್ತು ಬಾಲಕಿಯರ ಒಟ್ಟು ಸಮಗ್ರ ಪಡೆದುಕೊಂಡಿದೆ.

ಮಿಂಚಿನ ಓಟಗಾರ ರೋಹಿತ್ - ೩೦೦೦ ಮೀಟರ್ ಓಟದಲ್ಲಿ, ೧೫೦೦ ಮೀಟರ್, ೮೦೦ ಮೀಟರ್, ರಿಲೇ ಪ್ರಥಮ ಸ್ಥಾನ ಗಳಿಸಿ ಇಡೀ ಕ್ರೀಡಾಕೂಟದಲ್ಲಿ ವೇಗದ ಓಟಗಾರ ಎಂಬ ಕೀರ್ತಿಗೆ ಪಾತ್ರರಾಗುವುದರ ಜೊತೆಗೆ ಬಾಲಕರ ವೈಯಕ್ತಿಕ ಸಮಗ್ರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

ಸತತ ೧೩ ವರ್ಷಗಳಿಂದ ಖೋಖೋ ಪ್ರಶಸ್ತಿ - ಕಲ್ಪತರು ಪದವಿ ಪೂರ್ವ ಕಾಲೇಜು ಪ್ರಾರಂಭದಿಂದ ಇಂದಿನ ಕ್ರೀಡಾಕೂಟದವರೆಗೂ ಖೋ ಖೋ ಪಂದ್ಯಾವಳಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನವನ್ನೇ ಗಳಿಸುವ ಮೂಲಕ ತಾಲೂಕಿನಲ್ಲಿ ಐತಿಹಾಸಿಕ ಗೆಲುವನ್ನು ಕ್ರೀಡಾಕೂಟದಲ್ಲಿ ಸಾಧಿಸಿ ಪ್ರಶಸ್ತಿ ಈ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ.ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹುಲ್ಲಳ್ಳಿ ಸುರೇಶ ಕ್ರೀಡಾಕೂಟಕ್ಕೆ ಆಗಮಿಸಿ ಶುಭ ಕೋರಿ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡಾಪಟುಗಳು ಉತ್ತಮ ಸಾಧನೆಯನ್ನು ಮಾಡಿ ತಾಲೂಕು ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಅದನ್ನು ಬಳಸಿಕೊಂಡು ಉತ್ತಮ ಕ್ರೀಡಪಟುಗಳಾಗಿ ಹೆಸರು ಮತ್ತು ಕೀರ್ತಿ ತರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ಉಪಾಧ್ಯಕ್ಷೆ ಸುಮಾ ವೆಂಕಟೇಶ್, ಅಭಿವೃದ್ದಿ ಅಧ್ಯಕ್ಷ ಸೋಮಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲ ವಿನುತಾ, ಗ್ರಾಪಂ ಸದಸ್ಯರಾದ ಮೋಹನ್, ಪ್ರೇಮಣ್ಣ ಮುಖಂಡರಾದ ಚೇತನ್, ರಂಜಿತ್ ಈಶ್ವರ್, ಪ್ರಸನ್ನ, ಶಿವನಾಗ, ಹಾಜರಿದ್ದರು

ಮಾಜಿ ಶಾಸಕ ಲಿಂಗೇಶ್ ಕೆ ಎಸ್‌ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಹಾಗೆ ಸತತ ೧೩ ವರ್ಷಗಳ ಕಾಲ ಖೋಖೋ ಕ್ರೀಡೆಯಲ್ಲಿ ಭಾಗವಹಿಸಿ ನಿರಂತರವಾಗಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ದಾಖಲೆ ಸೃಷ್ಟಿಸಿದ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಎಂದು ತಿಳಿಸಿದರು. ಇದೇ ವೇಳೆ ರೋಹಿತ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ- ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಇದಕ್ಕೆ ಮಾರ್ಗದರ್ಶಕರಾಗಿ ಪ್ರತಿದಿನ ಬೆಳಗ್ಗೆ ಆರು ಗಂಟೆಯಿಂದ ಜೊತೆಯಲ್ಲಿಯೇ ಇದ್ದು ನನ್ನ ಯಶಸ್ಸಿಗೆ ಕಾರಣರಾದ ಪ್ರಾಂಶುಪಾಲ ಡಾ.ಎಂ ಸಿ ಕುಮಾರ್ ಮತ್ತು ಉಪನ್ಯಾಸಕ ತಂಡದವರಿಗೆ ಅಭಿನಂದನೆ ಸಲ್ಲಿಸಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ