ಕನ್ನಡಪ್ರಭ ವಾರ್ತೆ, ತರೀಕೆರೆ
40 ಮಂದಿ ವಿದ್ಯಾರ್ಥಿಗಳ ಪ್ರವಾಸ ಸಮಯದಲ್ಲಿ ಕಡೂರಿನ ಸಸ್ಯ ಕ್ಷೇತ್ರ, ಚಿಕ್ಕಮಗಳೂರಿನ ಪವಿತ್ರ ವನ, ಕೆಮ್ಮಣ್ಣಗುಂಡಿ ಗಿರಿಧಾಮ, ಅಯ್ಯನ ಕೆರೆ ವೀಕ್ಷಣೆ, ಅಮೃತಾಪುರ ದೇವಾಲಯ, ಮಲ್ಲೇನಹಳ್ಳಿ ಶ್ರೀ ದೇವಿರಮ್ಮ ದೇವಾಲಯ, ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳ ಪರಿಚಯ ಮಾಡಿಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಪರಿಸರದ ಬಗ್ಗೆ ಪ್ರಬಂಧ ಸ್ಪರ್ಧೆ, ಮುಂತಾದ ಸ್ಪರ್ಧೆ ನಡೆಸಿ ಇವುಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗವುದು ಎಂದು ಹೇಳಿದರು.
ಚಿಣ್ಣರ ವನದರ್ಶನ ಪ್ರವಾಸದಲ್ಲಿ ಭದ್ರ ಅಭಯಾರಣ್ಯ ತಣಿಗೆಬೈಲು ವಲಯದ ಉಪ ವಲಯಾರಣ್ಯಾಧಿಕಾರಿ ಚಂದ್ರಪ್ಪ, , ಸಿಬ್ಬಂದಿ ಹಾಗೂ ಶ್ರೀ ಚೌಡೇಶ್ವರಿ ಪ್ರೌಢಶಾಲಾ ಶಿಕ್ಷಕರಾದ ನಾಗರಾಜ ನಾಯ್ಕ, ಓಂಕಾರಯ್ಯ, ದೊಡ್ಡಮಲ್ಲಯ್ಯ, ಸಿದ್ದೇಶ್, ಪಾರ್ವತಮ್ಮ ಹಾಜರಿದ್ದರು. 27ಕೆಟಿಆರ್.ಕೆ.5ಃಭದ್ರಾ ಹುಲಿ ಸಂರಕ್ಷಿತ ಚಿಕ್ಕಮಗಳೂರು ವಿಭಾಗದ ತಣಿಗೆಬೈಲು ವಲಯಾರಣ್ಯ ವತಿಯಿಂದ ಶ್ರೀ ಚೌಡೇಶ್ವರಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಚಿಣ್ಣರ ವನದರ್ಶನ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ.