12,59,871 ಗಣತಿ ನಮೂನೆಗಳ ಗಣಕೀಕರಣ: ಜಿಲ್ಲಾಧಿಕಾರಿ

KannadaprabhaNewsNetwork |  
Published : Jul 27, 2026, 02:00 AM IST
ಕ್ಯಾಪ್ಷನ26ಕೆಡಿವಿಜಿ33 ಜಿ.ಎಂ.ಗಂಗಾಧರ ಸ್ವಾಮಿ | Kannada Prabha

ಸಾರಾಂಶ

ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

- ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಜಾರಿ: ಜಿ.ಎಂ. ಗಂಗಾಧರ ಸ್ವಾಮಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 12,59,871 ನಮೂನೆಗಳನ್ನು ಗಣಕೀಕರಿಸಲಾಗಿದೆ. 103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು , 1,78,095 ನಮೂನೆಗಳನ್ನು ಗಣಕೀಕರಿಸಲಾಗಿದೆ.

105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು, 1,88,990 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ : ಒಟ್ಟು 2,58,718 ಮತದಾರರಿದ್ದು, ಎಲ್ಲಾ 2,58,718 ನಮೂನೆಗಳನ್ನು ವಿತರಿಸಲಾಗಿದ್ದು, 1,79,252 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, ಎಲ್ಲಾ 2,27,996 ನಮೂನೆಗಳನ್ನು ವಿತರಿಸಲಾಗಿದ್ದು, 1,63,785 ನಮೂನೆಗಳನ್ನು ಗಣಕೀಕರಿಸಲಾಗಿದೆ.

108-ಮಾಯಕೊಂಡ: ಒಟ್ಟು 1,97,048 ಮತದಾರರಿದ್ದು, ಎಲ್ಲಾ 1,97,048 ನಮೂನೆಗಳನ್ನು ವಿತರಿಸಲಾಗಿದ್ದು, 1,84,622 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ: ಒಟ್ಟು 2,03,628 ಮತದಾರರಿದ್ದು, ಎಲ್ಲಾ 2,03,628 ನಮೂನೆಗಳನ್ನು ವಿತರಿಸಲಾಗಿದ್ದು, 1,83,608 ನಮೂನೆಗಳನ್ನು ಗಣಕೀಕರಿಸಲಾಗಿದೆ. 110-ಹೊನ್ನಾಳಿ: ಒಟ್ಟು 2,00,033 ಮತದಾರರಿದ್ದು, ಎಲ್ಲಾ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,81,519 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಮನೆ ಮನೆ ಭೇಟಿ ಸಂದರ್ಭ ಜು.26 ರವರೆಗೆ ಜಿಲ್ಲೆಯಾದ್ಯಂತ ಒಟ್ಟು 1,12,627 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 6377 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 53,971 ಶಾಶ್ವತ ವಲಸೆ, 29,881 ಮರಣ ಪ್ರಕರಣ, 21,955 ದ್ವಿಪ್ರತಿ ನಮೂನೆಗಳು ಹಾಗೂ 443 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಜಗಳೂರು ಕ್ಷೇತ್ರದಲ್ಲಿ ಒಟ್ಟು 14,623 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 604 ಸಂಗ್ರಹವಾಗದ, 7891 ಶಾಶ್ವತ ವಲಸೆ, 3300 ಮರಣ, 2785 ದ್ವಿಪ್ರತಿ ಹಾಗೂ 43 ಇತರೆ ಪ್ರಕರಣಗಳಿವೆ. ಹರಿಹರ ಕ್ಷೇತ್ರದಲ್ಲಿ ಒಟ್ಟು 16,611 ಪ್ರಕರಣಗಳು ಪತ್ತೆಯಾಗಿದ್ದು, 1796 ಸಂಗ್ರಹವಾಗದ, 5571 ಶಾಶ್ವತ ವಲಸೆ, 4532 ಮರಣ, 4640 ದ್ವಿಪ್ರತಿ ಮತ್ತು 72 ಇತರೆ ಪ್ರಕರಣಗಳಿವೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು 19,761 ಪ್ರಕರಣಗಳಿದ್ದು, 1252 ಸಂಗ್ರಹವಾಗದ, 9565 ಶಾಶ್ವತ ವಲಸೆ, 5711 ಮರಣ, 3141 ದ್ವಿಪ್ರತಿ ಹಾಗೂ 92 ಇತರೆ ಪ್ರಕರಣಗಳಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 20,516 ಪ್ರಕರಣಗಳಿದ್ದು, 1425 ಸಂಗ್ರಹವಾಗದ, 9178 ಶಾಶ್ವತ ವಲಸೆ, 4977 ಮರಣ, 4832 ದ್ವಿಪ್ರತಿ ಹಾಗೂ 104 ಇತರೆ ಪ್ರಕರಣಗಳಿವೆ.

ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 12,424 ಪ್ರಕರಣಗಳಿದ್ದು, 263 ಸಂಗ್ರಹವಾಗದ, 5997 ಶಾಶ್ವತ ವಲಸೆ, 4169 ಮರಣ, 1952 ದ್ವಿಪ್ರತಿ ಹಾಗೂ 43 ಇತರೆ ಪ್ರಕರಣಗಳಿವೆ. ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 13,985 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 300 ಸಂಗ್ರಹವಾಗದ, 7422 ಶಾಶ್ವತ ವಲಸೆ, 3281 ಮರಣ, 2951 ದ್ವಿಪ್ರತಿ ಹಾಗೂ 31 ಇತರೆ ಪ್ರಕರಣಗಳು ಸೇರಿವೆ.

ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 14,707 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 737 ಸಂಗ್ರಹವಾಗದ, 8347 ಶಾಶ್ವತ ವಲಸೆ, 3911 ಮರಣ, 1654 ದ್ವಿಪ್ರತಿ ಹಾಗೂ 58 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

- - -

-26ಕೆಡಿವಿಜಿ33: ಜಿ.ಎಂ.ಗಂಗಾಧರ ಸ್ವಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ
ಬೌದ್ಧಿಕ ವಿಶೇಷ ಚೇತನ ಮಕ್ಕಳ ವಸತಿ ಶಾಲೆಗಳ ಶಿಕ್ಷಕರ ಕುಂದುಕೊರತೆ ಸಭೆ