ವಾಲ್ಮೀಕಿ ರಾಮಾಯಣದ ಮೂಲಕ ರಾಮರಾಜ್ಯದ ಪರಿಕಲ್ಪನೆ

KannadaprabhaNewsNetwork |  
Published : Oct 08, 2025, 01:01 AM IST
ಪೋಟೊ7ಕೆಎಸಟಿ2: ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹರ್ಷಿಗಳನ್ನು ಅಧ್ಯಯನ ಮಾಡುವ ಮೂಲಕ ನೈಜ ವ್ಯಕ್ತಿತ್ವ ಪ್ರಚಾರಪಡಿಸುವ ಅಗತ್ಯವಿದೆ

ಕುಷ್ಟಗಿ: ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚನೆ ಮಾಡುವ ಮೂಲಕ ರಾಮರಾಜ್ಯದ ಪರಿಕಲ್ಪನೆ ನೀಡಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹರ್ಷಿಗಳನ್ನು ಅಧ್ಯಯನ ಮಾಡುವ ಮೂಲಕ ನೈಜ ವ್ಯಕ್ತಿತ್ವ ಪ್ರಚಾರಪಡಿಸುವ ಅಗತ್ಯವಿದೆ, ಅವರು ಮಹಾತತ್ವಜ್ಞಾನಿಯಾಗಿದ್ದರು ಇತಿಹಾಸ ತಿಳಿದುಕೊಳ್ಳುವ ಮೂಲಕ ಅವರ ತತ್ವಾದರ್ಶ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ಸಾಗಿಸಬೇಕು ವಾಲ್ಮೀಕಿ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ರಾಜಕೀಯವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕಾವ್ಯದಲ್ಲಿನ ವಿಷಯ ಅಳವಡಿಸಿಕೊಳ್ಳಬೇಕು, ಭಾರತೀಯ ಎರಡು ಕಣ್ಣುಗಳು ರಾಮಾಯಣ ಮಹಾಭಾರತ ಈ ಕಾವ್ಯ ಅನೇಕ ಭಾಷೆಗಳಲ್ಲಿ ಮುದ್ರಣಗೊಂಡಿದೆ. ಧಾರಾವಾಹಿಯಾಗಿ ಚಿತ್ರಿಕರಣಗೊಂಡಿದೆ ಮಹರ್ಷಿ ವಾಲ್ಮೀಕಿ ಆದರ್ಶ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜಯಂತಿ ಸಾರ್ಥಕವಾಗಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೆ ಮಹೇಶ, ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪೂರ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಮಾನಪ್ಪ ತಳವಾರ ಮಾತನಾಡಿದರು.

ಉಪನ್ಯಾಸಕ ಶರಣಪ್ಪ ಪೂಜಾರ ವಾಲ್ಮೀಕಿ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದರು.

ಅದ್ಧೂರಿ ಮೆರವಣಿಗೆ:

ಕುಷ್ಟಗಿ ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಚಾಲನೆ ನೀಡಿದರು. ಭಾವಚಿತ್ರ ಮೆರವಣಿಗೆಯು ಪಟ್ಟಣದ ಮಲ್ಲಯ್ಯ ವೃತ್ತ, ಬಸ್ ನಿಲ್ದಾಣ, ಮಾರುತಿ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಕೋಕಿಲಾ ವೃತ್ತದ ಮಾರ್ಗವಾಗಿ ಕ್ರೀಡಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ನೂರಾರು ಮಹಿಳೆಯರು ಕಳಶ ಕುಂಭ ಹೊತ್ತು ನಡೆದರು. ಈ ಸಂದರ್ಭದಲ್ಲಿ ಡಿಜೆ ಸೌಂಡಿಗೆ, ಡೊಳ್ಳು ಬಡಿತಕ್ಕೆ ಯುವಕರು ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ತಾಪಂ ಇಒ ಪಂಪಾಪತಿ ಹಿರೇಮಠ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಬಿಇಒ ಉಮಾದೇವಿ ಬಸಾಪೂರು, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಹನಮಂತಪ್ಪ ತಳವಾರ, ಸಿಡಿಪಿಒ ಯಲ್ಲಮ್ಮ ಹಂಡಿ, ವಸಂತ ಮೇಲಿನಮನಿ, ಮಾಲತಿ ನಾಯಕ, ನಜೀರಸಾಬ್‌ ಮೂಲಿಮನಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೀರಪ್ಪ, ಪುರಸಭೆ ಮುಖ್ಯಧಿಕಾರಿ ವಿ.ಐ.ಬೀಳಗಿ, ಡಾ. ಎಸ್.ವಿ.ಡಾಣಿ, ರವಿಕುಮಾರ ಹಿರೇಮಠ, ಹನಮೇಶ ಬುರ್ಲಿ, ಈರಪ್ಪ ನಾಯಕ, ರಮೇಶ ಕೊಳ್ಳಿ, ಬಸವರಾಜ ನಾಯಕ, ಬಾಲಪ್ಪ ಚಾಕ್ರಿ, ಸಂಗಮೇಶ ಕರಡಿ, ಸುರೇಶ ಬೇನಾಳ, ಕಲ್ಲಪ್ಪ ತಳವಾರ, ಶಂಕ್ರಪ್ಪ ಗುಜ್ಜಲ, ಎಚ್.ವೈ.ಈಟಿ, ಕೆ.ಮಹೇಶ, ರಂಗಣ್ಣ ಸುಬೇದಾರ, ಪ್ರಶಾಂತ ಗುಜ್ಜಲ, ಬಾಲಪ್ಪ ತಳವಾರ, ಕಂದಕೂರಪ್ಪ ವಾಲ್ಮೀಕಿ ಸೇರಿದಂತೆ ಅನೇಕ ಹಳ್ಳಿಗಳ ಮುಖಂಡರು ಮಹಿಳೆಯರು ಹಾಗೂ ಯುವಕರು ಇದ್ದರು. ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮವನ್ನು ಹನುಮಸಾಗರದ ಗ್ಯಾನಪ್ಪ ತಳವಾರ ತಂಡದವರು ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ