ಹಗರಿಬೊಮ್ಮನಹಳ್ಳಿ: ಕನ್ನಡ ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬರು ಕಾಳಜಿವಹಿಸುವ ಅಗತ್ಯವಿದೆ ಎಂದು ಗಂ.ಭೀ.ಸರಕಾರಿ ಪ್ರೌಢಶಾಲೆ ಎಸ್ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ ಹೇಳಿದರು.
ಪಟ್ಟಣದ ಗಂ.ಭೀ .ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವ ನಿಮಿತ್ತ ನಡೆದ ಗಂ.ಭೀ.ನುಡಿಸಿರಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಬೇಕು. ರಾಜಕಾರಣಿಗಳು ನೆಲಜಲಕ್ಕೆ ಹೆಚ್ಚು ಆಧ್ಯತೆ ನೀಡಿ ಅನುದಾನ ಒದಗಿಸಬೇಕು. ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಾಂಗ ಮಾಡಿ ಅತ್ಯುನ್ನತ ಹುದ್ದೆಗೇರಿದವರು ಸಾಕಷ್ಟು ಜನರಿದ್ದಾರೆ, ಕನ್ನಡದ ಬಗ್ಗೆ ಕೀಳಿರಿಮೆ ಬೇಡ ಎಂದರು.
ಅತ್ಯುತ್ತಮ ಸೇವಾ ಜನಸ್ನೇಹಿ ಪೊಲೀಸ್ ಪುರಸ್ಕಾರ ಪಡೆದ ಕಾನ್‌ಸ್ಟೇಬಲ್ ಮಲ್ಲೇಶ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಗಳ ಶಿಕ್ಷಣಕ್ಕಿಂತ, ಸರ್ಕಾರಿ ಶಾಲೆಗಳ ಶಿಕ್ಷಣ ಉತ್ತಮವಾಗಿದೆ. ಕನ್ನಡ ಭಾಷೆ ಅನ್ನ ನೀಡುವ ಭಾಷೆ, ಅದನ್ನು ಸಮೃದ್ದಗೊಳಿಸಬೇಕು ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ ಮಾತನಾಡಿ, ಕನ್ನಡ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಪರಂಪರೆಯನ್ನು ಜತನಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ನುಡಿಸಿರಿಯ ಉದ್ದೇಶವಾಗಿದೆ ಎಂದರು. ಇದೇ ವೇಳೆ ಮಕ್ಕಳಿಂದ ಗಾಯನ, ನೃತ್ಯ, ನಾಟಕ ಸೇರಿ ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ಲಾಂಗ್‌ಜಂಪ್‌ನಲ್ಲಿ ರಾಜ್ಯಮಟ್ಟ ಪ್ರತಿನಿಧಿಸಿದ್ದ ಸಾಜೀರಾ, ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚೇತನ್, ಜನಸ್ನೇಹಿ ಪೊಲೀಸ್ ಮಲ್ಲೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ವಿ.ಮಲ್ಲಪ್ಪ, ಎಸ್ಡಿಎಂಸಿ ಉಪಾಧ್ಯಕ್ಷೆ ಪ್ರಿಯಾಂಕ, ಸದಸ್ಯರಾದ ಶ್ರೀನಿವಾಸ, ಸಣ್ಣ ಹುಲಿಗೆಮ್ಮ, ರೇಣುಕಮ್ಮ, ಪರಶುರಾಮ, ಶಾಬುದ್ದೀನ್, ಎಚ್.ಶೈನಾಬಿ, ಹನುಮಕ್ಕ, ಮಾಜಿ ಅಧ್ಯಕ್ಷ ಪಕೃದ್ಧೀನ್, ಮಾಜಿ ಸದಸ್ಯರಾದ ಜಮದಗ್ನಿ, ವಿಜಯಲಕ್ಷ್ಮಿ, ಶಿಕ್ಷಕರಾದ ಮಲ್ಲೇಶ್‌ನಾಯ್ಕ, ಸಿದ್ದನಗೌಡ, ವೆಂಕಟೇಶನಾಯ್ಕ, ಕುಮಾರ್, ಮಲ್ಲಿಕಾರ್ಜುನ, ಸುಶೀಲಾ ಇದ್ದರು. ಶಿಕ್ಷಕ ಜನಾರ್ಧನ, ಶಿಕ್ಷಕಿಯರಾದ ಸುಶೀಲಾ, ವನಿತಾ, ಭಾರತಿ ರಾಜೇಶ್ವರಿ, ಗೀತಾ ನಿರ್ವಹಿಸಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಗಂ.ಭೀ. ಸರ್ಕಾರಿ ಪ್ರೌಢಶಾಲೆ ನುಡಿಸಿರಿ ಕಾರ್ಯಕ್ರಮಕ್ಕೆ ಎಸ್ಡಿಎಂಸಿ ಅಧ್ಯಕ್ಷ ವಿ.ಹುಲುಗಪ್ಪ ಚಾಲನೆ ನೀಡಿದರು.