ವಿಶೇಷವಾಗಿ ವಿಚ್ಛೇದನಕ್ಕೆ ಮುಂದಾಗಿದ್ದ ಸ್ಪಂದನ ಹಾಗೂ ಮಧು ದಂಪತಿಗಳು, ನ್ಯಾಯಾಧೀಶರ ಮಾರ್ಗದರ್ಶನದ ಮೇರೆಗೆ ಮನಸ್ತಾಪ ಬದಿಗೊತ್ತಿ ಮತ್ತೆ ಒಟ್ಟಾಗಿ ಬದುಕಲು ಒಪ್ಪಿಕೊಂಡಿದ್ದು, ಲೋಕ ಅದಾಲತ್‌ನ ಮಾನವೀಯ ಮುಖಕ್ಕೆ ಸಾಕ್ಷಿಯಾಯಿತು. ‘ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಬಂಧವನ್ನು ಉಳಿಸಿಕೊಳ್ಳುವುದು ಮಹತ್ವದ್ದು. ಸಾಧ್ಯವಾದ಼ಷ್ಟು ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ನ್ಯಾಯಾಧೀಶರು ದಂಪತಿಗೆ ಸಲಹೆ ನೀಡಿದರು.
ಚನ್ನರಾಯಪಟ್ಟಣ: ವಿವಿಧ ನ್ಯಾಯಾಲಯಗಳಲ್ಲಿ ನಡೆದ ಬೃಹತ್ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ೪೯೭ ವಿವಿಧ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ನಾಲ್ಕನೇ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕಲ್ಪನಾ ತಿಳಿಸಿದ್ದಾರೆ.
ವಿಶೇಷವಾಗಿ ವಿಚ್ಛೇದನಕ್ಕೆ ಮುಂದಾಗಿದ್ದ ಸ್ಪಂದನ ಹಾಗೂ ಮಧು ದಂಪತಿಗಳು, ನ್ಯಾಯಾಧೀಶರ ಮಾರ್ಗದರ್ಶನದ ಮೇರೆಗೆ ಮನಸ್ತಾಪ ಬದಿಗೊತ್ತಿ ಮತ್ತೆ ಒಟ್ಟಾಗಿ ಬದುಕಲು ಒಪ್ಪಿಕೊಂಡಿದ್ದು, ಲೋಕ ಅದಾಲತ್‌ನ ಮಾನವೀಯ ಮುಖಕ್ಕೆ ಸಾಕ್ಷಿಯಾಯಿತು. ‘ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಬಂಧವನ್ನು ಉಳಿಸಿಕೊಳ್ಳುವುದು ಮಹತ್ವದ್ದು. ಸಾಧ್ಯವಾದ಼ಷ್ಟು ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ನ್ಯಾಯಾಧೀಶರು ದಂಪತಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಬ್ಯಾಂಕ್ ಅಧಿಕಾರಿಗಳು, ವಿವಿಧ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳು, ವಕೀಲರು ಹಾಗೂ ಕಕ್ಷಿದಾರರು ಭಾಗವಹಿಸಿ, ನ್ಯಾಯಾಲಯದ ಹೊರಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಲ್ಲಿ ಸಹಕರಿಸಿದರು. ಲೋಕ ಅದಾಲತ್ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡುವುದರ ಜೊತೆಗೆ, ಸಮಯ ಮತ್ತು ವೆಚ್ಚ ಉಳಿತಾಯ ಮಾಡುವ ಪರಿಣಾಮಕಾರಿ ವೇದಿಕೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.