ಪಿಪಿಸಿಯಲ್ಲಿ ಪ್ರಜ್ಞಾ ಉತ್ಸವದ ಸಮಾರೋಪ: ಬಹುಮಾನ ವಿತರಣೆ

KannadaprabhaNewsNetwork |  
Published : Jun 19, 2024, 01:05 AM IST
ಫೆಸ್ಟ್18 | Kannada Prabha

ಸಾರಾಂಶ

ಪೂರ್ಣಪ್ರಜ್ಞ ಕಾಲೇಜಿನಲ್ಲಿ (ಸ್ವಾಯತ್ತ) ನಡೆದ ಎರಡು ದಿನಗಳ ರಾಜ್ಯಮಟ್ಟದ ಅಂತರ್‌ಕಾಲೇಜು ‘ಪ್ರಜ್ಞಾ ಫೆಸ್ಟ್ – ೨೦೨೪’ ಇದರ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಜ್ಞಾ ಫೆಸ್ಟ್‌ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸುವುದಕ್ಕೆ ಉತ್ತಮ ವೇದಿಕೆಯಾಗುತ್ತವೆ ಎಂದು ಅಂಬಾಗಿಲಿನ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಎಜಿಎಂ ವಾದಿರಾಜ ಭಟ್ ಹೇಳಿದರು.

ಅವರು ನಗರದ ಪೂರ್ಣಪ್ರಜ್ಞ ಕಾಲೇಜಿನಲ್ಲಿ (ಸ್ವಾಯತ್ತ) ನಡೆದ ಎರಡು ದಿನಗಳ ರಾಜ್ಯಮಟ್ಟದ ಅಂತರ್‌ಕಾಲೇಜು ‘ಪ್ರಜ್ಞಾ ಫೆಸ್ಟ್ – ೨೦೨೪’ ಇದರ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಉಡುಪಿ ವಿಭಾಗದ ಆಡಳಿತಾಧಿಕಾರಿ ಡಾ. ಎ.ಪಿ. ಭಟ್ ಮಾತನಾಡಿ, ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್‌ಗೆ ‘ಅಬ್ಜಾರಣ್ಯ’ ಎನ್ನುವ ಹೆಸರಿದೆ. ಇದು ಚಂದ್ರ ತಪಸ್ಸು ಮಾಡಿದ ಪ್ರದೇಶ. ಇಲ್ಲಿಗೆ ಆಗಮಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಬೇರೆ ಬೇರೆ ಕಾಲೇಜುಗಳ ಸುಮಾರು ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆ ಎಂದರು.ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಕಾರ್ಯಾಧ್ಯಕ್ಷ ಡಾ. ಎಂ.ಆರ್. ಹೆಗಡೆ ಮಾತನಾಡಿ, ಪರಮಾತ್ಮನು ನೀಡಿದ ಅಪರಿಮಿತವಾದ ಶಕ್ತಿಯನ್ನು ಬಳಸಿಕೊಂಡು, ಪ್ರತಿಭೆಯನ್ನು ಪ್ರಕಟಪಡಿಸಿದಾಗ ಎಲ್ಲ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು.ಪೂರ್ಣಪ್ರಜ್ಞ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಪ್ರಜ್ಞಾ ಉತ್ಸವದ ಮುಖ್ಯ ಸಂಯೋಜಕ ಡಾ. ರಮೇಶ್ ಟಿ.ಎಸ್., ಸಹಸಂಯೋಜಕಿ ಜಯಲಕ್ಷ್ಮೀ, ಶೈಕ್ಷಣಿಕ ಸ್ಪರ್ಧೆಗಳ ಸಂಯೋಜಕಿ ಪ್ರತಿಭಾ ಆಚಾರ್ಯ, ಸಾಂಸ್ಕೃತಿಕ ಸ್ಪರ್ಧೆಗಳ ಸಂಯೋಜಕ ಡಾ. ಮಂಜುನಾಥ ಕರಬ, ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾನುಷ್ ಕೋಟ್ಯಾನ್, ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ಅಮೃತಾ ಭಟ್, ಚೇತನಾ ಪೈ, ನಿಕ್ಷಿತಾ ಉಪಸ್ಥಿತರಿದ್ದರು.ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಮಲತಾ ನಿರೂಪಿಸಿದರು. ಡಾ. ಮಂಜುನಾಥ ಕರಬ ವಂದಿಸಿದರು.

ಪ್ರಜ್ಞಾ- ೨೦೨೪ ಉತ್ಸವದಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಿಭಾಗಗಳ ೪೫ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ ೨೫ ಕಾಲೇಜುಗಳು ಭಾಗವಹಿಸಿದ್ದವು. ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ ವಿಭಾಗದಲ್ಲಿ ಪ್ರಥಮ, ಕಟಪಾಡಿಯ ತ್ರಿಶಾ ಕಾಲೇಜಿಗೆ ದ್ವಿತೀಯ ಪ್ರಶಸ್ತಿ ಲಭಿಸಿತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ