ಮಂಡ್ಯ ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟಕ್ಕೆ ಖಂಡನೆ

KannadaprabhaNewsNetwork |  
Published : Feb 01, 2024, 02:05 AM IST
ಚಿತ್ರ 30ಬಿಡಿಆರ್57 | Kannada Prabha

ಸಾರಾಂಶ

ಬೀದರ್‌ನಲ್ಲಿ ಗೊಂಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ. ಸಮುದಾಯದ ಮುಖಂಡರಿಂದ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಬೀದರ್‌

ಜ.29ರಂದು ಮಂಡ್ಯ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜದ ವಿವಾದ ಹಿನ್ನೆಲೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಪ್ರಚೋದನೆಗೊಳಿಸಿ, ಮಂಡ್ಯ ನಗರದ ಬೆಂಗಳೂರು-ಮೈಸೂರು-ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿಸಿ, ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸುವಂತೆ ಮಾಡಿದ್ದು ಖಂಡನೀಯ ಎಂದು ಬೀದರ್‌ ಗೊಂಡ ಪರ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣ ಸಮಿತಿ ಖಂಡಿಸಿದೆ.

ಈ ಕುರಿತು ಪ್ರತಿಭಟನೆ ನಡೆಸಿದ ಮುಖಂಡರು, ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ವಿದ್ಯಾರ್ಥಿ ನಿಲಯದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ಕೂಡ ಪ್ರತಿಭಟನಾಕಾರರು ಮಾಡಿದ್ದರು. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ತಡೆದಿದ್ದಾರೆಂದು ತಿಳಿದು ಬಂದಿದೆ.

ಇಂತಹ ಕೃತ್ಯದಲ್ಲಿ ತೊಡಗಿರುವವರಿಗೆ ಹಾಗೂ ಪ್ರಚೋದನೆ ನೀಡಿದವರಿಗೆ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಕೊಳ್ಳಬೇಕೆಂದು ಬೀದರ್‌ ಗೊಂಡ ಪರ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಕರಾಟೆ, ಗೋವರ್ಧನ ರಾಠೋಡ, ಕುಶಾಲ ಹಾಸಗೊಂಡ, ಸಂತೋಷ ಜೋಳದಾಬಪಕೆ, ಶಿವಕುಮಾರ ನೀಲಿಕಟ್ಟಿ, ಲೋಕೇಶ ಮರ್ಜಾಪೂರ, ರಾಜಕುಮಾರ ಚಿಟ್ಟಾವಾಡಿ, ಅಮರ್ ಕೊಳಾರ, ಈಶ್ವರ ಕನೇರಿ, ಪ್ರದೀಪ ನಾಟೇಕರ್, ಸಂದೀಪ ಕಾಂಟೆ, ನರಸಪ್ಪಾ ಯಾಕತಪೂರ, ಪಿ.ಎಸ್. ಇಟಕಂಪಳ್ಳಿ,ಅಶೋಕ ಮದಾಳೆ, ರಘುನಾಥ ಬುರೆ, ಶರಣು ಟೊಳ್ಳೆ, ಅಮೃತ ಮುತ್ತಂಗಿಕರ್, ಎ.ಪಿ. ವೈಜಿನಾಥ, ರಾಕೇಶ ಕುರಬಖೇಳ್ಗಿ, ರಿಯಾಜೋದ್ದಿನ ಚಿದ್ರಿ, ಓಂಕಾರ ಗಾದಗಿ, ಸಿದ್ದು ಗಾದಗಿ, ಆನಂದ, ಕಲ್ಲಪ್ಪಾ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ