ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದ ಇತಿಹಾಸದ ಹಳೇಬೀಡು(ದ್ವಾರಸಮುದ್ರ)ದ ಪ್ರಮುಖ ರಸ್ತೆಯಾದ ಶ್ರೀ ಹೊಯ್ಸಳೇಶ್ವರ ದೇವಾಲಯದ ಪ್ರಮುಖ ರಸ್ತೆಯ ಸಿಮೆಂಟ್ ಕಾಂಕ್ರೀಟ್ ಕೆಲಸ ಮೂರು ವರ್ಷಗಳಿಂದಲೂ ನಡೆಯುತ್ತಲೇ ಇದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿ ಮತ್ತು ಗುತ್ತಿಗೆದಾರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳೇಬೀಡಿನ ದಲಿತ ಮತ್ತು ವಿವಿಧ ಪ್ರಗತಿಪರ ಸಂಘಟನೆ ಒಕ್ಕೂಟ ಹಾಗೂ ಆಟೋ ಚಾಲಕ ಸಂಘ ಇನ್ನೂ ಹಲವಾರು ಸಂಘಗಳು ಸೋಮವಾರ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದ ಇತಿಹಾಸದ ಹಳೇಬೀಡು(ದ್ವಾರಸಮುದ್ರ)ದ ಪ್ರಮುಖ ರಸ್ತೆಯಾದ ಶ್ರೀ ಹೊಯ್ಸಳೇಶ್ವರ ದೇವಾಲಯದ ಪ್ರಮುಖ ರಸ್ತೆಯ ಸಿಮೆಂಟ್ ಕಾಂಕ್ರೀಟ್ ಕೆಲಸ ಮೂರು ವರ್ಷಗಳಿಂದಲೂ ನಡೆಯುತ್ತಲೇ ಇದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.ಇದರ ಬಗ್ಗೆ ಹಲವಾರು ಅಧಿಕಾರಿಗಳಿಗೆ ಹಾಗೂ ಗುತಿಗ್ತೆದಾರಿಗೆ ಮನವಿಯನ್ನು ಸಲ್ಲಿಸಿ ಪತ್ರಿಕೆಯಲ್ಲಿ ಸುದ್ದಿಗಳು ಪ್ರಕಟವಾದರೂ ಸಹ ಈ ಕಾಮಗಾರಿಯ ಗುತ್ತಿಗೆದಾರ ಕೆಲಸದ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳದೆ ಅರ್ಧಂಬರ್ಧ ಕೆಲಸವನ್ನು ಮಾಡಿ ಹಲವಾರು ಅಪಘಾತಗಳಿಗೆ ಅವಕಾಶ ಮಾಡಿಕೊಟ್ಟಂತ ಅಧಿಕಾರಿ ಮತ್ತು ಗುತ್ತಿಗೆದಾರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳೇಬೀಡಿನ ದಲಿತ ಮತ್ತು ವಿವಿಧ ಪ್ರಗತಿಪರ ಸಂಘಟನೆ ಒಕ್ಕೂಟ ಹಾಗೂ ಆಟೋ ಚಾಲಕ ಸಂಘ ಇನ್ನೂ ಹಲವಾರು ಸಂಘಗಳು ಸೋಮವಾರ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಹಳೇಬೀಡಿಗೆ ನಿತ್ಯ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದ್ದು ಈ ರಸ್ತೆಯಲ್ಲಿ ಪ್ರಮುಖವಾದ ರಸ್ತೆಯಲ್ಲಿ ಜಿಲ್ಲಿ, ಕಲ್ಲು ಹಾಕಿ ಬರುವ ವಾಹನಗಳಿಗೆ ಅಡಚಣೆ ಉಂಟು ಮಾಡಿ ಹಲವಾರು ಅಪಘಾತಕೆ ಆಹ್ವಾನ ಇದರ ಜೊತೆಗೆ ಧೇವಾಲಯದ ಸರ್ಕಲ್, ಆಸ್ಪತ್ರೆಗೆ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ ದಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್‌ಗೆ ಹೋಗುವ ದಾರಿಯ ಮಧ್ಯದಲ್ಲಿ ರಸ್ತೆಯನ್ನು ಕಟ್ಟು ಮಾಡಿ ಸುಮಾರು ೨ಅಡಿ ಆಳ ಗುಂಡಿ ಮಾಡಿ ಎರಡೂವರೆ ತಿಂಗಳ ಆದರೂ ಕೆಲಸವನ್ನು ಮಾಡದೆ ಗುತ್ತಿಗೆದಾರ ನಾಪತ್ತೆಯಾಗಿದ್ದು ಇಲ್ಲಿಯ ಜನತೆ ಬೇಸತ್ತು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಸಂಘದ ಬೈರೇಶ, ಕುಮಾರ್, ನಿಂಗರಾಜು, ಕೃಷ್ಣ, ಹಾಗೂ ತೀರ್ಥೇಶ್, ಇನ್ನೂ ಹಲವಾರು ಮುಖಂಡತ್ವದಲ್ಲಿ ರಸ್ತೆಯನ್ನು ಬಂದು ಮಾಡಿದರು. ಪೊಲೀಸರ ಮಧ್ಯ ಪ್ರವೇಶ -ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪಿಎಸ್‌ಐ ಮಂಜುನಾಥ ಕೇಳಿಕೊಂಡರೂ ಪ್ರತಿಭಟನೆಗೆ ಕಾಮಗಾರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜಿಲ್ಲಾಧಿಕಾರಿಗಳು ಶಾಸಕರು ಬರಲೇಬೇಕೆಂದು ಹಠ ಹಿಡಿದರು. ಸ್ಥಳಕ್ಕೆ ಇಲಾಖೆ ಅಧಿಕಾರಿ ಸೋಮಶೇಖರ್ ಆಗಮಿಸಿ ನಾಳೆಯಿಂದ ಕಾಮಗಾರಿನ ಪ್ರಾರಂಭ ಮಾಡುತ್ತೆವೆ ಎಂದು ಭರವಸೆ ನೀಡಿದರು. ಸ್ಥಳೀಯ ಮುಖಂಡರಾದ ಬೈರೇಶ್ ಮಾಧ್ಯಮದೊಂದಿಗೆ ಮಾತನಾಡುತ್ತ ಏಪ್ರಿಲ್ ತಿಂಗಳಲ್ಲಿ ನಮ್ಮ ಗ್ರಾಮದೇವತೆಯ ಕರಿಯಮ್ಮನ ಜಾತ್ರೆ ಬರಲಿದೆ ಆ ಜಾತ್ರೆಯ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಎರಡು ಬದಿಯ ರಸ್ತೆಯೂ ಸಂಚಾರಕ್ಕೆ ಸುಗಮವಾಗಬೇಕು, ಇಲ್ಲವಾದರೆ ಬೇಲೂರು ಮತ್ತು ಹಾಸನದಲ್ಲಿ ಇಲಾಖೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.