ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿ ಅನುದಾನದಲ್ಲಿ ಮೈಸೂರು ವಿಭಾಗ ಮಟ್ಟದಲ್ಲಿ ಸಂವಿಧಾನೋತ್ಸವ ಆಚರಿಸಲು ಮುಂದಾಗಿದೆ. ಇದು ಸಮ್ಮಿಲನೋತ್ಸವವಾಗಿ ಮಾಡುತ್ತಿರುವುದನ್ನು ವಿರೋಧಿಸಿದ ಅವರು, ದಲಿತರ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಪೂರ್ವ ಯೋಜಿತ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ೨.೫ ಲಕ್ಷ ಕೋಟಿ ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಇನ್ನೂ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ಅಂಬೇಡ್ಕರ್ ನಿಗಮದ ಮೈಕ್ರೋ ಫೈನಾನ್ಸ್ ಅನುದಾನವನ್ನು ಲೂಟಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ಲೆಕ್ಕವಿಲ್ಲದಷ್ಟು ವರ್ಗಾವಣೆಯಾಗಿದೆ. ಸಾಮನ್ಯ ಯೋನಜೆಗಳಿಗೆ ಅನುದಾನ ಬಳಕೆ ಮಾಡಲಾಗಿದೆ. ದಲಿತರಿಗೆ ಬಿಡುಗಡೆ ಮಾಡಲಾದ ಉಳಿಕೆ ಅನುದಾನದಲ್ಲಾದರೂ ದಲಿತರ ಪ್ರಗತಿಗೆ ಬಳಕೆಯಾಗಿದೆಯೇ ಎಂದು ಪರಿಶೀಲಿಸಿದರೆ ಅದೂ ಇಲ್ಲವಾಗಿದೆ ಎಂದು ದೂರಿದರು.ಈ ಕೂಡಲೇ ೧೪,೧೯೮ ಕೋಟಿ ಅನುದಾನವನ್ನು ಹಿಂಪಡೆಯಬೇಕು. ದುರ್ಬಳಕೆಗೆ ಕಾರಣವಾಗಿರುವ ಎಸ್ಸಿಘಿ, ಎಸ್ಟಿ ಕಾಯ್ದೆಯಲ್ಲಿನ ಗೌರವ ಮತ್ತು ಸ್ಪಂದನೆ ನೀಡಬೇಕು. ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ಅನುದಾನ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ ಮಾತನಾಡಿ, ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕನಿಷ್ಠ ೧೫ ಸಾವಿರ ರು. ಕೂಲಿಗಾಗಿ ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ಹಲವಾರು ದಿನಗಳಿಂದ ಅವರು ಮನೆ, ಗಂಡ, ಮಕ್ಕಳನ್ನು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದರೂ ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.