ದಾವಣಗೆರೆ: ನೆರೆಯ ಬಾಂಗ್ಲಾದೇಶ ಸೇರಿದಂತೆ ವಿಶ್ವದ ವಿವಿಧ ಕಡೆಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಲ್ಲೆ, ಕೊಲೆ ಮತ್ತು ಇತರ ಘಟನೆಗಳನ್ನು ಖಂಡಿಸಿ ಬುಧವಾರ ನಗರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಮಿತಿಯ ಸಂಚಾಲಕ ಎಸ್.ಟಿ.ವೀರೇಶ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಲಾಗುತ್ತದೆ. ಅಲ್ಲದೆ ನಿನ್ನೆ ದಿನವಷ್ಟೇ ಹಿಂದುಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಒಬ್ಬ ದೀಪು ದಾಸ್ ಎನ್ನುವ ವ್ಯಕ್ತಿಯ ಮೇಲೆ ಹಾಡಾಗಲೇ ಮರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅವನನ್ನು ಜೀವಂತ ದಹನ ಮಾಡಲಾಗಿದೆ. ಆದರೆ ಅಲ್ಲಿನ ಆಡಳಿತ ಸರ್ಕಾರಗಳಾಗಲಿ ಯಾವುದೇ ವ್ಯಕ್ತಿಗಳಾಗಲಿ ಅಲ್ಪಸಂಖ್ಯಾತರಾದ ಹಿಂದುಗಳ ಸಹಾಯಕ್ಕೆ ಬರುತ್ತಿಲ್ಲ. ಇದನ್ನು ವಿಶ್ವವೇ ಗಮನಿಸಿದೆ ಎಂದರು.
ಈ ಬಗ್ಗೆ ವಿಶ್ವದ ಯಾವುದೇ ರಾಷ್ಟ್ರಗಳು ಚಕಾರ ಎತ್ತಿಲ್ಲ. ಕಾರಣ ಭಾರತದ ಕೇಂದ್ರ ಸರ್ಕಾರವು ಈ ಕೂಡಲೇ ಬಾಂಗ್ಲಾದೇಶದ ವಿರುದ್ಧ ತನ್ನ ಹೇಳಿಕೆಯನ್ನು ನೀಡುವ ಮೂಲಕ ಅಲ್ಲಿನ ಹಿಂದುಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊರಬೇಕಾಗಿದೆ. ಇದಲ್ಲದೆ ಕೇಂದ್ರ ಸರ್ಕಾರವು ಈ ರೀತಿ ಮುಂಬರುವ ದಿನಗಳಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದೌರ್ಜನ್ಯಗಳು ನಡೆದರೆ ತಕ್ಕ ಪಾಠ ಕಲಿಸುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ವಾಸವಾಗಿರುವ ಹಿಂದುಗಳು ನಾಶ ಆಗುವ ದೂರ ಕಾಲ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಸತೀಶ್ ಪೂಜಾರಿ ಮಾತನಾಡಿ, ಈ ಎಲ್ಲಾ ಘಟನೆಗಳ ಹೊಣೆಗಾರಿಕೆಯನ್ನು ಅಲ್ಲಿನ ಸರ್ಕಾರಗಳು ಹೋರಬೇಕಾಗಿದೆ. ನಾವು ಈ ಬಾರಿ ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಪದೇ ಪದೇ ಇಂತಹ ಘಟನೆಗಳು ಮರುಳಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯ ತಾಂತ್ರಿಕ ಮಾರ್ಗವಾದರೂ ಇಲ್ಲವೇ ನೇರ ಕ್ರಮದ ಮೂಲಕವಾದರೂ ಇಂತಹ ಘಟನೆಗಳನ್ನು ಮತ್ತೆ ಮರುಕಳಿಸಿದಂತೆ ಕ್ರಮಕಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ರಾಜಶೇಖರ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡಲೆಬಾಳು, ಅರ್.ಎಲ್.ಶಿವಪ್ರಕಾಶ, ಕೆ.ಎಂ.ಸುರೇಶ್, ದುಗ್ಗೇಶ್, ಅಜಿತ್ ಅಂಬರಕರ್, ರಾಜನಹಳ್ಳಿ ಶಿವಕುಮಾರ, ಪಿ.ಸಿ.ಶ್ರೀನಿವಾಸ, ಆನಂದ, ಕೃಷ್ಣಪ್ಪ, ರಾಜು, ಅರ್.ಶಿವಾನಂದ, ಪಂಜು ಪೈಲ್ವಾನ್, ರಾಜು ವೀರಣ್ಣ, ಮಲ್ಲಿಕಾರ್ಜುನ, ಸಂತೋಷ, ಚೇತನ್, ಪ್ರಭು ಕಲ್ಬುರ್ಗಿ, ಇತರರು ಇದ್ದರು