ವಕೀಲನ ಮೇಲೆ ದೌರ್ಜನ್ಯಕ್ಕೆ ಖಂಡನೆ: ಕಲಾಪದಿಂದ ಹೊರಗುಳಿದು ಪ್ರತಿಭಟನೆ

KannadaprabhaNewsNetwork |  
Published : Mar 13, 2025, 12:49 AM IST
12ಕೆಎಂಎನ್ ಡಿ24 | Kannada Prabha

ಸಾರಾಂಶ

ಮಂಡ್ಯದಲ್ಲಿ ವಕೀಲರು ನಡೆಸಿದ ಪ್ರತಿಭಟನೆಗೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಪಾಂಡವಪುರ ಎಸಿ ಕೆ.ಆರ್.ಶ್ರೀನಿವಾಸ್ ವಕೀಲ ಅಮಿತ್ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪ ತೋರಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯಲು ನಿರ್ಣಯ ಅಂಗೀಕರಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಜಮೀನು ವಿವಾದದ ಹಿನ್ನೆಲೆಯಲ್ಲಿ ವಕೀಲ ಅಮಿತ್ ಮೇಲೆ ದರ್ಪ ತೋರಿ ದೌರ್ಜನ್ಯ ನಡೆಸಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪಟ್ಟಣದ ವಕೀಲರು ಬುಧವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ವಕೀಲರು ನಡೆಸಿದ ಪ್ರತಿಭಟನೆಗೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಪಾಂಡವಪುರ ಎಸಿ ಕೆ.ಆರ್.ಶ್ರೀನಿವಾಸ್ ವಕೀಲ ಅಮಿತ್ ಮೇಲೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪ ತೋರಿರುವುದನ್ನು ಖಂಡಿಸಿ ನ್ಯಾಯಾಲಯದ ಕಲಾಪದಿಂದ ಹೊರಗುಳಿಯಲು ನಿರ್ಣಯ ಅಂಗೀಕರಿಸಿದರು.

ಜಮೀನು ವಿವಾದವನ್ನು ಕೇವಲ ಮಾತುಕತೆ ಮೂಲಕ ಬಗೆಹರಿಸಬೇಕಾಗಿದ್ದ ಎಸಿ ಶ್ರೀನಿವಾಸ್ ಪೊಲೀಸರನ್ನು ಕರೆಸಿ ವಕೀಲ ಅಮಿತ್ ನನ್ನು ಅವರ ವಶಕ್ಕೆ ನೀಡಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಕೂಡಲೇ ಎಸಿ ಶ್ರೀನಿವಾಸ್ ಅವರನ್ನು ಅಮಾನತು ಮಾಡಬೇಕು. ಈ ಬಗ್ಗೆ ತನಿಖೆ ನಡೆಸಿ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಎಚ್.ಮಾದೇಗೌಡ. ಎಂ.ಎನ್. ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ವಿ.ಟಿ.ರವಿಕುಮಾರ್, ಎ.ಶಿವಣ್ಣ, ವಕೀಲರಾದ ಚೆಲುವರಾಜು, ಯೋಗಾನಂದ, ನಾಗೇಶ, ಎಂ.ಮಹೇಶ, ಕೆ. ಶಿವಣ್ಣ ಮತ್ತಿತರರು ಇದ್ದರು.

15ರಂದು ನೇರ ಸಂದರ್ಶನ

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟ ಸಂಸ್ಥೆಗಳಲ್ಲಿ ‘ರಿಲೇಷನ್‌ಷಿಪ್ ಎಕ್ಸಿಕ್ಯೂಟಿವ್’ ಹುದ್ದೆ ಖಾಲಿಯಿದ್ದು, 18 ರಿಂದ 30 ವರ್ಷ ವಯೋಮಾನವುಳ್ಳ ಪುರುಷ ಅಭ್ಯರ್ಥಿಗಳು ಮಾರ್ಚ್ 15 ರಂದು ಬೆಳಗ್ಗೆ 10 ರಿಂದ ವಿವೇಕಾನಂದ ರಸ್ತೆಯ ಅಶೋಕನಗರದ 2ನೇ ಕ್ರಾಸ್ ಬಳಿ ಇರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟ, ನಂ.1176, ನಲ್ಲಿ ತಮ್ಮ ರೆಸ್ಯೂಮೆ/ ಬಯೋಡೇಟಾಗಳೊಂದಿಗೆ ನೇರಸಂದರ್ಶನಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295124 ಮತ್ತು ಮೊ-9164642684, 9900788021 & 8660061488 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ