ಶಿವಮೊಗ್ಗ ರಾಜ್ಯದ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಪೂರಕ

KannadaprabhaNewsNetwork |  
Published : Nov 15, 2026, 01:30 AM IST
ಪೊಟೋ: 14ಎಸ್‌ಎಂಜಿಕೆಪಿ01ಶಿವಮೊಗ್ಗದ ನವಿಲೆಯ ಕೆಎಸ್‌ಸಿಎ ಮೈದಾನ-1ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ 'ಸಿ' ಗುಂಪಿನ ಪಂದ್ಯಾವಳಿಗೆ ಎಸ್ಪಿ ಬಿ.ನಿಖಿಲ್‌ ಚಾಲನೆ ನೀಡಿದರು.  | Kannada Prabha

ಸಾರಾಂಶ

Conducive to the development of Shivamogga as a cricket hub in the state

ಜಿಲ್ಲಾ ರಕ್ಷಣಾಧಿಕಾರಿ, ಕ್ರಿಕೆಟ್ ಪಟು ಬಿ.ನಿಖಿಲ್‌ ಅಭಿಪ್ರಾಯ । ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿಗೆ ಚಾಲನೆಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸುಸಜ್ಜಿತವಾದ ಸ್ಟೇಡಿಯಂ, ಮೂಲಸೌಕರ್ಯಗಳ ವಿಸ್ತರಣೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳ ಆಯೋಜನೆ, ಪ್ರತಿಭೆಗಳಿಗೆ ಪ್ರೋತ್ಸಾಹ, ಕ್ರಿಕೆಟ್ ಪ್ರೇಮಿಗಳ ಬೆಂಬಲದಿಂದಾಗಿ ಶಿವಮೊಗ್ಗವು ಕರ್ನಾಟಕದ ಪ್ರಮುಖ ಕ್ರಿಕೆಟ್ ಕೇಂದ್ರವಾಗಿ ಬೆಳೆಯಲು ಅತ್ಯಂತ ಪೂರಕವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ, ಕ್ರಿಕೆಟ್ ಪಟು ಬಿ.ನಿಖಿಲ್‌ ಅಭಿಪ್ರಾಯಪಟ್ಟರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ''''ಸಿ'''' ಗುಂಪಿನ ಪಂದ್ಯಗಳು ನ. 14ರಿಂದ ಡಿಸೆಂಬರ್ 8ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯನ್ನು ಶನಿವಾರ ಬೆಳಗ್ಗೆ ನವಿಲೆಯ ಕೆಎಸ್‌ಸಿಎ ಮೈದಾನ-1ರಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಭವಿಷ್ಯದ ಕ್ರಿಕೆಟ್ ತಾರೆಗಳನ್ನು ಗುರುತಿಸಿ, ಯುವ ಆಟಗಾರರಿಗೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಯುವ ಕ್ರಿಕೆಟಿಗರಿಗೆ ಉನ್ನತ ಮಟ್ಟದ ಕ್ರಿಕೆಟ್ ಅನುಭವ ಪಡೆಯಲು ಉತ್ತಮ ವೇದಿಕೆ ದೊರೆಯಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಬೆಂಗಳೂರಿಗೆ ಸೀಮಿತವಾಗಿದ್ದ ಕ್ರಿಕೆಟ್ ಚಟುವಟಿಕೆಗಳನ್ನು ವಲಯ ಕೇಂದ್ರಗಳಿಗೆ ವಿಸ್ತರಿಸುವ ಕೆಎಸ್‌ಸಿಎ ಯೋಜನೆಯಡಿ ಶಿವಮೊಗ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಮಲೆನಾಡು ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಕೆಎಸ್‌ಸಿಎ ವಿಶೇಷ ತರಬೇತಿ ಶಿಬಿರಗಳನ್ನು ನಡೆಸುತ್ತಿದೆಯಲ್ಲದೆ, ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಅಕಾಡೆಮಿಗಳು ಯುವ ಆಟಗಾರರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿವೆ ಎಂದರು.

ಉತ್ತಮ ಪ್ರತಿಫಲ:

ಮಹಾರಾಜ ಟ್ರೋಫಿ ಟಿ20 ಮತ್ತು ಮಹಾರಾಣಿ ಟ್ರೋಫಿಯಂತಹ ರಾಜ್ಯಮಟ್ಟದ ಪ್ರತಿಷ್ಠಿತ ಲೀಗ್‌ಗಳಲ್ಲಿ ಶಿವಮೊಗ್ಗ ತಂಡ ಭಾಗವಹಿಸುತ್ತಿರುವುದು ಸ್ಥಳೀಯ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರೇರಣೆ ದೊರೆಯುತ್ತಿದೆ. ಪ್ರತಿಭೆ, ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಉತ್ತಮ ಪ್ರತಿಫಲ ದೊರೆಯುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಜಂಟಿ ಕಾರ್ಯದರ್ಶಿ ಬಿ.ಕೆ. ರವಿ, ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ, ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಕೆ. ಪಂಡಿತ್, ವಲಯ ಉಸ್ತುವಾರಿ ಆರ್.ಬಿ. ನಾಗರಾಜ್, ಗೋಪಾಲಕೃಷ್ಣ ಜಿ. (ಐಡಿಯಲ್ ಗೋಪಿ), ವಲಯ ಮಾಜಿ ಸಂಚಾಲಕ ಸದಾನಂದ್, ವಲಯದ ಮಾಜಿ ಸಂಚಾಲಕ ಸುಕುಮಾರ ಪಟೇಲ್, ಬಿಸಿಸಿಐನ ಮೇಘನ್ ಪಡ್ನೇಕರ್ ಮತ್ತಿತರರು ಉಪಸ್ಥಿತರಿದ್ದರು.

ಪೊಟೋ: 14ಎಸ್‌ಎಂಜಿಕೆಪಿ01

ಶಿವಮೊಗ್ಗದ ನವಿಲೆಯ ಕೆಎಸ್‌ಸಿಎ ಮೈದಾನ-1ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿರುವ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ''''ಸಿ'''' ಗುಂಪಿನ ಪಂದ್ಯಾವಳಿಗೆ ಎಸ್ಪಿ ಬಿ.ನಿಖಿಲ್‌ ಚಾಲನೆ ನೀಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಂಪ್ಲಿಯಿಂದ ಮುನಿರಾಬಾದ್‌ನತ್ತ ಹೆಜ್ಜೆ ಹಾಕಿದ ನೂರಾರು ರೈತರು
ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಅಶೋಕ ಶಿಗ್ಗಾಂವಿ