ಗದಗ: ದೇವದಾಸಿ ಮಹಿಳೆಯರ ಮರುಗಣತಿ ಅಂಗನವಾಡಿ ಮೂಲಕ ನಡೆಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನು ತಾಲೂಕು ಮಟ್ಟದಲ್ಲಿ ಅಥವಾ ಗ್ರಾಪಂ ಮಟ್ಟದಲ್ಲಿ ನಡೆಸುವುದು ಸಾಧ್ಯವಿಲ್ಲ ಹಾಗೆ ಮಾಡುವುದು ತೀವ್ರ ಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಇತರೆ ಮಹಿಳೆಯರು ಈ ಸೌಲಭ್ಯ ಅನವಶ್ಯಕವಾಗಿ ಪಡೆಯಲು ಕಾರಣವಾಗುತ್ತದೆ.ಹಾಗಾಗಿ ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರು ಈ ಗಣತಿಗೆ ದೊರೆಯಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ ಗಣತಿಗೆ ಮಾಡುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ಗಣತಿ ಮಾಡುವುದು ಸೂಕ್ತವಾಗಿದೆ. ಈ ಕುರಿತಂತೆ ಸ್ಪಷ್ಟ ನಿಲುಮೆಯಿಂದ ಸರ್ಕಾರ ಈ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ, ತಾಲೂಕಾಧ್ಯಕ್ಷೆ ಮಹಾದೇವಿ ದೊಡ್ಡಮನಿ, ಸತ್ಯಪ್ಪ ಕೆಂಚವ್ವ ಬುಳ್ಳಮನವರ, ಸವಿತಾ ಬಣಕಾರ, ಯಲ್ಲಪ್ಪ ಬಣಕಾರ, ಗೀತಾ ಯಳವತ್ತಿ, ಶೋಭಾ ಬಾರಿಗೀಡದ, ಶಿವಕ್ಕ ಬೇವಿನಮರದ, ಜೋತಿ ದೊಡ್ಡಮನಿ, ನಾಗಮ್ಮ ಹಾದಿಮನಿ ಹಾಗೂ ಇತರರು ಹಾಜರಿದ್ದರು.