ಭೀಮಾನದಿ ಪ್ರವಾಹದಿಂದ ಬೆಳೆ ಹಾನಿಗೊಳಗಾದ ವಿವಿಧ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಹಾಗೂ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಅವರು ತಾಲೂಕು ಮಟ್ಟಡದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಇಂಡಿ : ಭೀಮಾನದಿ ಪ್ರವಾಹದಿಂದ ಬೆಳೆ ಹಾನಿಗೊಳಗಾದ ಚಿಕ್ಕಮಣ್ಣೂರ, ಗುಬ್ಬೇವಾಡ, ಬರಗುಡಿ, ಶಿರಗೂರ, ಹಿಂಗಣಿ ಸೇರಿದಂತೆ ವಿವಿಧ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಹಾಗೂ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಅವರು ತಾಲೂಕು ಮಟ್ಟಡದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸಂತ್ರಸ್ತ ರೈತರಿಗೆ ಹಾಗೂ ಪ್ರವಾಹಪಿಡಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಪ್ರವಾಹ ನೀರು ಬೆಳೆಗಳಗೆ ನುಗ್ಗಿ ರೈತರಿಗೆ ತೊಂದರೆ ಮಾಡಿದೆ. ಕಳೆದ ವರ್ಷ ಬರದಿಂದ ಸಂಕಷ್ಟ ಎದುರಿಸ ಆರ್ಥಿಕ ತೊಂದರೆ ಅನುಭಿಸಿದ ರೈತರಿಗೆ ಈ ಬಾರಿ ನದಿ ಪಾತ್ರದ ಗ್ರಾಮಗಳ ರೈತರ ಜಮೀನುಗಳಿಗೆ ಭೀಮಾನದಿ ಪ್ರವಾಹದ ನೀರು ನುಗ್ಗಿ ಹಾನಿ ಮಾಡಿದೆ. ತಾಲೂಕು ಆಡಳಿತ ತೊಂದರೆಗೊಳಗಾದ ರೈತರ ಸಹಾಯಕ್ಕೆ ನಿಲ್ಲಬೇಕು. ಪ್ರವಾಹದಿಂದ ಹಾನಿಯಾದ ಬೆಳೆಗಳ ಸರ್ವೆ ಕಾರ್ಯ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.ನಿಸರ್ಗ ಒಂದು ಕಡೆ ಬಹಳಷ್ಟು ಮಳೆ ಬಂದು ಹಾನಿ ಮಾಡಿದರೇ ನಮ್ಮ ಭಾಗಕ್ಕೆ ಮಳೆಯಾಗದಿದ್ದರೂ ಮಹಾರಾಷ್ಟ್ರ ಭಾಗದಲ್ಲಿ ಆದ ಮಳೆಯಿಂದ ಭೀಮಾನದಿಗೆ ನೀರು ಬಂದು ಮುಂಗಾರು ಮಳೆಯಿಂದ ಬಿತ್ತನೆ ಮಾಡಿದ ರೈತರ ಬೆಳೆಗಳಿಗೆ ನುಗ್ಗಿ ಹಾನಿ ಮಾಡಿದೆ.
ರಾಜ್ಯದ ಒಂದು ಕಡೆ ವಿಪರಿತ ಮಳೆ, ಗಡಿಭಾಗ ಇಂಡಿ, ಚಡಚಣ, ಸಿಂದಗಿ ಸೇರಿದಂತೆ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ನೊಡಿಕೊಳ್ಳಬೇಕು. ಬೆಳೆ ಸರ್ವೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಸರ್ವೆ ಕಾರ್ಯದಲ್ಲಿ ಲೋಪವಾಗದಂತೆ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಪ್ರವಾಹದಿಂದ ಬೆಳೆಹಾನಿ ಆದ ರೈತರಿಗೆ ಬೆಳೆ ಪರಿಹಾರ ಒದಗಿಸಲು ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಎಸ್ಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್.ಕ ಕಡಕಭಾವಿ, ಸಮಾಜ ಕಲ್ಯಾಣಾಧಿಕಾರಿ ಬಿ.ಜೆ.ಇಂಡಿ, ಬಿ.ಸಿ.ಎಂ ಅಧಿಕಾರಿ ಗದ್ಯಾಳ, ಕಾಂಗ್ರೆಸ್ ಮುಖಂಡರಾದ ಜಾವೀದ್ ಮೋಮಿನ, ವೆಂಕಟೇಶ ಕಟ್ಟಿಮನಿ, ವಿಠ್ಠಲಗೌಡ ಪಾಟೀಲ, ಹುಚ್ಚಪ್ಪ ತಳವಾರ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ ಮೊದಲಾದವರು ಇದ್ದರು.