ಡಿಸಿಸಿ ಬ್ಯಾಂಕ್‌ನಲ್ಲಿಯೇ ಕಡ್ಡಾಯವಾಗಿ ವ್ಯವಹರಿಸಿ

KannadaprabhaNewsNetwork |  
Published : Nov 19, 2026, 01:45 AM IST
ಕನ್ನಡ ಪ್ರಭ ಚಿತ್ರ ದಿ 18 ಎಂಬಿಆರ್: | Kannada Prabha

ಸಾರಾಂಶ

ಹರಿಹರ ತಾಲೂಕಿನ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 14430 ರೈತ ಸದಸ್ಯರಿಗೆ ₹175.96 ಕೋಟಿಗಳ ಅಲ್ಪಾವಧಿ ಬೆಳೆ ಸಾಲ, 605 ರೈತ ಸದಸ್ಯರಿಗೆ ₹25.80 ಕೋಟಿ ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕಿನಿಂದ ನೀಡುವ ಗುರಿ ಹೊಂದಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಡಿ. ಕುಮಾರ ಹೇಳಿದ್ದಾರೆ.

- ನಂದಿಗುಡಿ-73ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಿ.ಕುಮಾರ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಹರಿಹರ ತಾಲೂಕಿನ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 14430 ರೈತ ಸದಸ್ಯರಿಗೆ ₹175.96 ಕೋಟಿಗಳ ಅಲ್ಪಾವಧಿ ಬೆಳೆ ಸಾಲ, 605 ರೈತ ಸದಸ್ಯರಿಗೆ ₹25.80 ಕೋಟಿ ಮಧ್ಯಮಾವಧಿ ಕೃಷಿ ಸಾಲ ನೀಡಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕಿನಿಂದ ನೀಡುವ ಗುರಿ ಹೊಂದಲಾಗಿದೆ ಎಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷ ಡಿ. ಕುಮಾರ ಹೇಳಿದರು.

ಇಲ್ಲಿಗೆ ಸಮೀಪದ ನಂದಿಗುಡಿ ಗ್ರಾಮದ ಶ್ರೀ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಹರಿಹರ ತಾಲೂಕು ಮಟ್ಟದ 73ನೇ ಅಖಿಲ ಭಾರತೀಯ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಸಭೆಯಲ್ಲಿ “ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ- ಬ್ಯಾಂಡ್ ನಿರ್ಮಾಣ” ವಿಷಯ ಕುರಿತು ವಿಷಯ ಮಂಡಿಸಿದ ಅವರು, ಸಹಕಾರ ಸಂಘದಲ್ಲಿ ರೈತರು ಬೆಳೆಯುವ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಬೆಳಸುವ ಹಾಗೂ ಸಂಸ್ಕರಿಸುವ ಹಲವಾರು ಮಾರ್ಗಗಳನ್ನು ತಿಳಿಸಿದರು. ರೈತರಿಗೆ ಮತ್ತು ಸಹಕಾರ ಸಂಸ್ಥೆಗಳಿಗೆ ಸರ್ಕಾರ ಮಾಡಬೇಕಾದ ಸಹಾಯ, ಜಾಗತಿಕ ಕಾರ್ಪೊರೇಟ್‌ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಹಳ್ಳಿಗಳಿಗೂ ತಮ್ಮ ಚಟುವಟಿಕೆ ವಿಸ್ತರಿಸುವ ಬಗೆ ವಿವರಿಸಿದರು. ಪ್ರತಿ ರೈತರು ಹಾಗೂ ಎಲ್ಲ ರೀತಿಯ ಸಹಕಾರ ಸಂಘಗಳು ಕಡ್ಡಾಯವಾಗಿ ಡಿಸಿಸಿ ಬ್ಯಾಂಕಿನಲ್ಲಿಯೇ ವ್ಯವಹಾರ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚು ಸಾಲ ನೀಡಲು ಅನುಕೂಲ ಆಗುವುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸಹಕಾರ ಸಂಘಗಳು ಪ್ರತಿಯೊಬ್ಬ ರೈತರು ಏಳಿಗೆಗಾಗಿ ಶ್ರಮಿಸಬೇಕು. ಹರಿಹರ ತಾಲೂಕಿನ ರೈತರ ಜೀವನಾಡಿಯಾದ ಭದ್ರಾ ನೀರಿನ ಬಳಕೆ ವಿಚಾರದಲ್ಲಿ ಪ್ರಸ್ತುತ ಸರ್ಕಾರ ಅನ್ಯಾಯ ಮಾಡಿದೆ. ಈ ವಿಚಾರವಾಗಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಿ.ಗೋಪಾಲ್ ಮಾತನಾಡಿ, ಹರಿಹರ ತಾಲೂಕಿನಲ್ಲಿರುವ ಸಹಕಾರ ಸಂಸ್ಥೆಗಳ ಸ್ಥಿತಿಗತಿ ಹಾಗೂ ಸಹಕಾರ ಸಂಸ್ಥೆ ಮೂಲಕ ರೈತರು ಪಡೆಯಬಹುದಾದ ಸಾಲ ಸೌಲಭ್ಯಗಳನ್ನು ತಿಳಿಸಿದರು.

ಶಿಮೂಲ್ ಉಪ ವ್ಯವಸ್ಥಾಪಕಿ ಡಾ. ಸ್ಮೀತಾ ಜಿ.ಎಸ್. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರೈತರ ಭಾಗವಹಿಸುವಿಕೆ, ಹಾಲಿನ ಗುಣಮಟ್ಟದ ಉತ್ಪಾದನೆ ಕುರಿತು ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಿ.ಹಾಲೇಶಪ್ಪ, ಮಾಜಿ ಉಪಾಧ್ಯಕ್ಷರಾದ ಜಿಗಳಿಯ ಜಿ.ಆನಂದಪ್ಪ, ವಾಸನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಸವನಗೌಡ, ಹರಿಹರದ ಕಿತ್ತೂರು ರಾಣಿ ಚೆನ್ನಮ್ಮ ಸಹಕಾರ ಸಂಘದ ಅಧ್ಯಕ್ಷರಾದ ಹೊಳೆಸಿರಿಗೆರೆಯ ಎಂ.ಜಿ, ಪರಮೇಶ್ವರಗೌಡ, ವಿಶ್ವಬಂಧು ಸಹಕಾರ ಸಂಘದ ಅಧ್ಯಕ್ಷ ಕೆ.ಶಿವಶಂಕರ ಹೊಳೆಸಿರಿಗೆರೆ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಕೆ.ಎಚ್. ಮಹೇಶ್, ಹರಿಹರ ಟಿಎಪಿಸಿಎಂಎಸ್ ಅಧ್ಯಕ್ಷರಾದ ಭಾನುವಳ್ಳಿಯ ಎಂ.ಕೊಟ್ರಪ್ಪ, ದಾವಣಗೆರೆ ಜಿಲ್ಲಾ ಜನತಾ ಬಜಾರ್ ನಿರ್ದೇಶಕ ಪಿ.ಎಚ್.ಶಿವಕುಮಾರ, ಮಲೇಬೆನ್ನೂರಿನ ಸೊಸೈಟಿ ಅಧ್ಯಕ್ಷ ಡಾ. ಬಿ.ಚಂದ್ರಶೇಖರ್, ಹರಿಹರ ಪತ್ತಿನ ಸಂಘ ಅಧ್ಯಕ್ಷ ಗುತ್ತೂರಿನ ಜಿ.ಬಿ. ಹಾಲೇಶ ಗೌಡ, ಇತರರು ಭಾಗವಹಿಸಿದ್ದರು.

2025-2026 ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಲೇಬೆನ್ನೂರಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸಂಘ, ಯಲವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗೋವಿನಹಾಳ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬೆಸ್ಟ್ ಸೊಸೈಟಿ ಆಫ್ 2025-2026 ಪ್ರಶಸ್ತಿ ನೀಡಲಾಯಿತು.

ರಾಮತೀರ್ಥದ ಶಿಕ್ಷಕ ಸ್ವಾಮಿಲಿಂಗಪ್ಪ ಕಾರ್ಯಕ್ರಮ ನಿರೂಪಿಸಿ, ಸಾರಥಿ ಪ್ಯಾಕ್ಸ್ ಸಿಇಒ ಜಿ.ವಿ.ಕುಮಾರ್ ಸ್ವಾಗತಿಸಿದರು. ಯಲವಟ್ಟಿ ಪ್ಯಾಕ್ಸ್ ಸಿಇಒ ಎಂ.ಶೇಖರಪ್ಪ ವಂದಿಸಿದರು.

- - -

-(ಫೋಟೋ ಇದೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಾಬಿ ಹೊಳೆಗೆ ಒಳಚರಂಡಿ ನೀರು: ಅಧಿಕಾರಿಗಳ ಪರಿಶೀಲನೆ
ಸಾಂಪ್ರದಾಯಿಕ ದಿರಿಸು ಸಂಸ್ಕೃತಿಯ ಪ್ರತಿಬಿಂಬ: ರಿತಿಕಾ ಕಿಣಿ