ಪರ್ಸ್‌ ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

KannadaprabhaNewsNetwork |  
Published : Jan 25, 2024, 02:02 AM IST
24ಜಿಪಿಟಿ8ಗುಂಡ್ಲುಪೇಟೆ ಸಾರಿಗೆ ಬಸ್‌ನಲ್ಲಿ ಸಿಕ್ಕ ಚಿನ್ನದ ಓಲೆ ಹಾಗು ಹಣವಿದ್ದ ಸಿಕ್ಕಿದ ಪರ್ಸ್‌ನ್ನು ನಿರ್ವಾಹಕ ಮಹೇಶ್‌ ವಾರಸುದಾರರಿಗೆ ನೀಡಿದರು. | Kannada Prabha

ಸಾರಾಂಶ

ನಿರ್ವಾಹಕ ಮಹೇಶ್‌ ನಿಖರ ಮಾಹಿತಿ ಪಡೆದು ಪರ್ಸ್ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಗುಂಡ್ಲುಪೇಟೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ಓಲೆ ಹಾಗೂ ಹಣವನ್ನು ವಾರಸುದಾರರಿಗೆ ಸಾರಿಗೆ ಬಸ್‌ ನಿರ್ವಾಹಕ ಮಹೇಶ್‌ ಪ್ರಾಮಾಣಿಕತೆ ತೋರಿ ವಾಪಸ್‌ ನೀಡಿದ ಪ್ರಸಂಗ ನಡೆದಿದೆ. ತಾಲೂಕಿನ ಕಲಿಗೌಡನಹಳ್ಳಿ ಮಾರ್ಗದ ಬಸ್‌ ಹಂಗಳಕ್ಕೆ ತೆರಳುವಾಗ ಪ್ರಯಾಣಿಕರೊಬ್ಬರು ಪರ್ಸ್‌ ಬಿಟ್ಟು ಹೋಗಿದ್ದರು. ಬಸ್‌ನಲ್ಲಿ ಬಿದ್ದಿದ್ದ ಪರ್ಸ್‌ ಗಮನಿಸಿದ ನಿರ್ವಾಹಕ ಮಹೇಶ್‌ ಪರ್ಸ್‌ ತೆಗೆದುಕೊಂಡಿದ್ದಾರೆ. ಪರ್ಸ್‌ ಕಳೆದುಕೊಂಡಿದ್ದ ಹಂಗಳ ಗ್ರಾಮದ ರತ್ನಮ್ಮ ಸಹೋದರ ಕಲಿಗೌಡನಹಳ್ಳಿಗೆ ಹೋಗಿ ವಾಪಸ್‌ ಬಂದ ಬಸ್‌ ನ ನಿರ್ವಾಹಕರನ್ನು ಕೇಳಿದ್ದಾರೆ. ಆಗ ನಿರ್ವಾಹಕ ಮಹೇಶ್‌ ನಿಖರ ಮಾಹಿತಿ ಪಡೆದು ಪರ್ಸ್ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ