ಧಾರವಾಡ:
ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ 2ನೇ ಯುವ ಚಿಂತನಾ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿ, ಈ ವರ್ಷದ ಧ್ಯೇಯದಂತೆ ಹಾವೇರಿ, ಉತ್ತರಕನ್ನಡ, ಧಾರವಾಡದ 5000ಕ್ಕೂ ಹೆಚ್ಚು ಯುವಕರಿಗೆ ವಿವಿಧ ಹಂತದಲ್ಲಿ ತರಬೇತಿ ನೀಡಿ ಬದುಕಿನ ಧನಾತ್ಮಕ ಚಿಂತನೆಗೆ ಹಚ್ಚುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಜ್ಯೋತಿ ಪಾಟೀಲ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಸಮುದಾಯದ ಮನಸ್ಸುಗಳ ಸೆಳೆದು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಾರ್ತಾಂಡಪ್ಪ ಕತ್ತಿ ಅವರ ತಂಡ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.ಕೆಎಎಸ್ ನಿವೃತ್ತ ಅಧಿಕಾರಿ ಭೀಮಸೇನರಾವ್ ಶಿಂಧೆ ಯುವ ಚಿಂತನಾ ಸಮಾವೇಶದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಒಂದು ತಿಂಗಳ ಕಾಲದ ಈ ಕಾರ್ಯಕ್ರಮ ದಾಖಲೀಕರಣವಾಗಿದ್ದು, ಮುಂದಿನ ಯುವ ಸಮುದಾಯಕ್ಕೆ ಶಾಶ್ವತವಾಗಿ ಉಳಿಯಲಿದೆ ಎಂದರು.
2ನೇ ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿ, ಎಐ ತಂತ್ರಜ್ಞಾನ ಮತ್ತು ಯುವ ಸಮುದಾಯದ ಆಧಾರಿತ ಒಂದು ತಿಂಗಳ ಮನಸ್ಸಿಗೆ ಸಮಾಧಾನ ತಂದಿದೆ. ಸಮಾಜಕ್ಕೆ ಆಧುನಿಕ ತಂತ್ರಜ್ಞಾನದ ಪರಿಚಯದ ದೃಷ್ಟಿಯಿಂದ ಸಮಾವೇಶ ಯಶಸ್ವಿಯಾಗಿದೆ ಎಂದು ತಿಳಿಸಿದರು.ಮಾಜಿ ಮೇಯರ್ ಈರೇಶ ಅಂಚಟಗೇರಿ, 18 ವರ್ಷ ಪ್ರತಿಷ್ಠಾನ ಮಾಡಿರುವ ಕಾರ್ಯವೈಖರಿಯ ವಿಡಿಯೋ ಬಿಡುಗಡೆ ಮಾಡಿದರು. ಮುಖಂಡರಾದ ಸವಿತಾ ಅಮರಶೆಟ್ಟಿ ಸಾಧಕರಿಗೆ ಮತ್ತು ಆದರ್ಶ ದಂಪತಿಗಳಿಗೆ ಸನ್ಮಾನ ಮಾಡಿದರು. ಅಂಜುಮನ್ ಸಂಸ್ಥೆಯ ಬಶೀರಾಹ್ಮದ ಜಹಗೀರಾದಾರ ಪ್ರಶಸ್ತಿ ವಿಜೇತ ತಂಡಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು. ನಿಕಟಪೂರ್ವ ಅಧ್ಯಕ್ಷ ಪಿ.ವಿ. ಹಿರೇಮಠ, ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ನಾಗೇಶ ಅಣ್ಣಿಗೇರಿ, ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪ್ರೌಢಶಾಲಾ ಶಿಕ್ಷಕರ ಸಂಘದ ನಾರಾಯಣ ಭಜಂತ್ರಿ, ಪ್ರತಿಷ್ಠಾನದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಸಂಚಾಲಕರಾದ ಅರುಣಕುಮಾರ ಶೀಲವಂತ, ಪ್ರಮೀಳಾ ಜಕ್ಕಣ್ಣವರ, ಕೃಷ್ಣಮೂರ್ತಿ ಗೊಲ್ಲರ, ಸುರೇಶ ಬೇಟಗೇರಿ, ಪ್ರೇಮಾನಂದ ಶಿಂಧೆ ಮತ್ತು ಶ್ರೀಶೈಲ ಚಿಕನಳ್ಳಿ ಇದ್ದರು.
ಸ್ಮರಣ ಸಂಚಿಕೆಯ ಸಂಪಾದಕ ವಿಜಯೇಂದ್ರಗೌಡ ಪಾಟೀಲ, ಅನಿತಾ ಕಡಪಟ್ಟಿ, ಪ್ರಭಾಕರ ಲಗಮ್ಮಣ್ಣನವರ, ವಾಸುದೇವ ಪರ್ವತಿ, ಪುರುಷೋತ್ತಮ ಪಟೇಲ, ಸುರೇಶ ಬಾಂಡಗೆ, ಸುಧೀರ ಪಿ ಎಸ್, ರಮೇಶ ಲಿಂಗದಾಳ, ನೇಹಾ ಬುದ್ನಿ, ಸಂಜನಾ ಎಂ.ಎಸ್. ಬಸವರಾಜ ಗೊರವರ, ಮಹಾದೇವ ಸತ್ತಿಗೇರಿ, ಎನ್.ಬಿ.ದ್ಯಾಪೂರ ಇದ್ದರು.