ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂತಹ ಕಾರ್ಯಕ್ರಮ ಗಳಿಗೆ ಶಿಕ್ಷಕರು ಮಕ್ಕಳನ್ನು ಕರೆತರುವ ಮೂಲಕ ಅವರಲ್ಲಿಯೂ ನಾಡು, ನುಡಿ, ಸಂಸ್ಕೃತಿ,ಪರಂಪರೆಯ ಬಗ್ಗೆ ಅರಿವು ಮೂಡಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಮಕ್ಕಳಲ್ಲಿ ಭಾಷಾಜ್ಣಾನ ಹೆಚ್ಚುವುದರ ಜೊತೆಗೆ, ಅದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ ಎಂದರು.ತುಮಕೂರು ತಾಲೂಕಿನ ಬಿಇಓ ಹನುಮಂತಪ್ಪ ಮಾತನಾಡಿ, ನವೆಂಬರ್ ಎಂದರೆ ಕನ್ನಡ ಕಲರವ ಮಾಸ. ಸಾಹಿತ್ಯ,ಶಿಕ್ಷಣ ಒಂದಕ್ಕೊಂದು ಪೂರಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಠ,ಪ್ರವಚನಗಳಿಗೆ ತೊಂದರೆಯಾಗದ ರೀತಿ,ಶೇ 50% ಶಿಕ್ಷಕರಿಗೆ ಓಒಡಿ ನೀಡಿದೆ. ಸಾಕಷ್ಟು ಮಕ್ಕಳು ಕಾರ್ಯಕ್ರಮ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆ ಮೂಲಕ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ,ಬೆಳೆಸುವ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಇಂತಹ ಕಾರ್ಯಕ್ರಮದ ವೇದಿಕೆ ಬಳಕೆ ಮಾಡುವಂತೆ ಶಿಕ್ಷಕರು ಪ್ರೇರೆಪಿಸಬೇಕೆಂದರು.
ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಸಾಪ ಕೇಂದ್ರ ಸಮಿತಿಯಲ್ಲಿ ದತ್ತಿನಿಧಿಯಲ್ಲಿ ಕನ್ನಡ ನಾಡು,ನುಡಿಗೆ ದುಡಿದ ಹಿರಿಯರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರುವ ರೀತಿಯಲ್ಲಿಯೇ ನಮ್ಮಲ್ಲಿಯೂ ಕಳೆದ ವರ್ಷದಿಂದ ದತ್ತಿನಿಧಿಯಿಂದ ಹಣದಲ್ಲಿ ಐವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಇಂದು ಶ್ರೀ ಮತಿ ಕಲಾಶ್ರೀ, ಪ್ರೊ.ಕಮಲ ನರಸಿಂಹ, ಅಮ್ಮಸಂದ್ರ ಸುರೇಶ್, ಡಾ.ಓ.ನಾಗರಾಜು, ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ ಅವರುಗಳಿಗೆ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೆಂಕೆರೆ ಮಲ್ಲಿಕಾರ್ಜುನ, ಲಕ್ಷ್ಮಿನರಸಿಂಹಪ್ಪ, ಚಾಂದು, ಚಿಕ್ಕಬೆಳ್ಳಾವಿ ಶಿವಕುಮಾರ್, ಉಮಾಮಹೇಶ್.ಕಂಟಲಗೆರೆ ಸಣ್ಣಹೊನ್ನಯ್ಯ ಸೇರಿದಂತೆ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.