ಹಾವೇರಿ: ಮುಂಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಒಂದು ಧ್ವನಿಯಾಗಿ ಹೋದರೆ ಬಿಜೆಪಿ ಬಹಳ ದೊಡ್ಡ ಪ್ರಮಾಣದ ವಿಜಯವನ್ನು ಸಾಧಿಸಬಹುದು ಅನ್ನುವುದು ನಮ್ಮೆಲ್ಲರ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯವೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಿಲ್ಲ. ನನ್ನ ಪ್ರಕಾರ ಯಾರೂ ಶತ್ರುಗಳೇ ಇಲ್ಲ. ವೈಪೋಟಿ ಇರುತ್ತೆ ಅಷ್ಟೇ. ಹೀಗಾಗಿ ಕೂಡಿ ಹೋಗುವುದು ಬಹಳ ಒಳ್ಳೆಯದು. ಒಗ್ಗಟ್ಟಿನಿಂದ ಹೋಗುವುದು ಬಹಳ ಒಳ್ಳೆಯದು. ಒಳ್ಳೆಯ ಲಕ್ಷಣ. ಒಗ್ಗಟ್ಟಿನಿಂದ ಒಂದು ಧ್ವನಿಯಾಗಿ ಹೋದರೆ ಖಂಡಿತ ಬಿಜೆಪಿ ಬಹಳ ದೊಡ್ಡ ಪ್ರಮಾಣದ ಒಂದು ವಿಜಯವನ್ನು ಸಾಧಿಸಬಹುದು ಅನ್ನುವುದು ನಮ್ಮೆಲ್ಲರ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಅದೇ ಆಗಿದೆ. ಆ ಹಿನ್ನಲೆಯಲ್ಲಿ ಬರುವಂತಹ ದಿನಗಳಲ್ಲಿ ಇಂತಹ ಇನ್ನೂ ಹಲವಾರು ಬೆಳವಣಿಗೆಗಳನ್ನು ನಾವು ನೋಡುತ್ತೇವೆ ಅಂತ ಆಶಾಭಾವನೆ ಇದೆ ಎಂದು ಹೇಳಿದರು.
ಸ್ಟಿಂಗ್ ಸಿಬಿಐ ತನಿಖೆಯಾಗಲಿ:ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ವಿಚಾರವಾಗಿ ಗೃಹಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಪೊಲಿಸರಿಂದ ಸೂಕ್ತ ತನಿಖೆ ನಡೆಯುತ್ತಿದೆ, ಸಿಬಿಐ ಯಾಕೆ ಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹಸಚಿವರು ಸರ್ಟಿಫಿಕೇಟ್ ಕೊಡುವುದಲ್ಲ. ಅವರ ಟ್ರ್ಯಾಕ್ ರೆಕಾರ್ಡ್ ನೋಡಬೇಕು. ಕರ್ನಾಟಕ ಪೊಲೀಸರು ಎಸ್.ಐ.ಟಿ ಮಾಡಿದರೆ ಟ್ರ್ಯಾಕ್ ರೆಕಾರ್ಡ್ ಅಲ್ಲಿ ಯಾವುದು ಕೂಡ ಸಮಗ್ರವಾಗಿ ತನಿಖೆ ಆಗ್ತಾ ಇಲ್ಲ ಮತ್ತು ಈ ವಿಚಾರದಲ್ಲಿ ವಿಶೇಷವಾಗಿ ಕರ್ನಾಟಕದ ಪೊಲೀಸರು ಒತ್ತಡಕ್ಕೆ ಸಿಲುಕುವಂತಹ ಪ್ರಸಂಗ ಬರುತ್ತದೆ. ಅದಕ್ಕಾಗಿ ಸಿಬಿಐಗೆ ಕೊಡಬೇಕು ಎಂದು ಹೇಳಿದರು