ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆಯ ಗೊಂದಲ: ಜಾಧವ

KannadaprabhaNewsNetwork | Published : Apr 25, 2024 1:05 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ, ಚೆನ್ನೈ, ಅಮೇರಿಕಾ ಸೇರಿದಂತೆ ವಿಶ್ವದಲ್ಲೇ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲೇ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದೇ ಇದುವರೆಗೆ ದೇಶದ ಜನರಿಗೆ ತಿಳಿದಿಲ್ಲ.

ಕನ್ನಡಪ್ರಭ ವಾರ್ತೆ ಕಮಲಾಪುರ

ದೇಶದ 142 ಕೋಟಿ ಜನ ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌ ತಿಳಿಸಿದರು.

ಕಲ್ಬುರ್ಗಿ ಗ್ರಾಮೀಣ ಮತಕ್ಷೇತ್ರದ ಮಹಾಗಾಂವನ ಮಹಾಗಾಂವ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ, ಚೆನ್ನೈ, ಅಮೇರಿಕಾ ಸೇರಿದಂತೆ ವಿಶ್ವದಲ್ಲೇ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲೇ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದೇ ಇದುವರೆಗೆ ದೇಶದ ಜನರಿಗೆ ತಿಳಿದಿಲ್ಲ ಎಂದರು.

ಈ ದೇಶದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಈಗ ಭಾರತ ದೇಶವು 3ನೇ ಸ್ಥಾನ ಇದೆ. ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿದರೆ. ಪ್ರಪಂಚದಲ್ಲೇ ಮೊದಲ ಸ್ಥಾನ ತರುವ ಶಕ್ತಿ ಪ್ರಧಾನಿ ಮೋದಿಗೆ ಇದೆ ಕಾಂಗ್ರೆಸಿನವರು 60 ವರ್ಷ ಮಾಡದೇ ಇರುವ ಅಭಿವೃದ್ಧಿಯನ್ನು ಕೇವಲ ಹತ್ತು ವರ್ಷದಲ್ಲಿ ಮಾಡಿದ್ದಾರೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 25 ಸಾವಿರ ಕೋಟಿ ಎಸ್ಸಿ, ಎಸ್ಟಿ ಬಜೆಟ್ ಬೇರೆ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. ಡಾ. ಅಂಬೇಡ್ಕರ ಅವರಿಗೆ ಎರಡು ಬಾರಿ ಸೋಲಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಎಂದು ಟೀಕಿಸಿದರು.

ಮುಖಂಡರಾದ ಚಂದು ಪಾಟೀಲ್, ಶಾಸಕ ಬಸವರಾಜ್ ಮತ್ತಿಮಡು, ಮಾಜಿ ಜಿಪಂ ಅಧ್ಯಕ್ಷ ಶಿವಪ್ರಭು ಪಾಟೀಲ್, ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ,ಶಶಿಕಲಾ ಟೆಂಗಳಿ, ಅರುಣ ಕುಮಾರ್ ಪಾಟೀಲ, ಸಿದ್ದನಗೌಡ ಪಾಟೀಲ, ಕೆ ಸಿ ಪಾಟೀಲ, ಶಿವಕಾಂತ ಮಹಾಜನ, ಶ್ರೀಧರ ಪಾಟೀಲ, ಗಿರೀಶ್ ಪಾಟೀಲ, ಮಲ್ಲಿಕಾರ್ಜುನ ಮರ್ತುರ್ಕರ, ಶಿವಕುಮಾರ ಪಸಾರ, ಪ್ರವೀಣ ಮುಚ್ಚೆಟ್ಟಿ, ಎಸ್ಸಿ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ್ ರಾಥೋಡ, ಶ್ರೀಕಾಂತ ಪಾಟೀಲ, ವೀರೇಶ ಉಪ್ಳಕರ್, ಶರಣಗೌಡ ಹರಕಂಚಿ, ಅಮೃತ ಸಾಗರ, ಮತ್ತಿತರು ಇದ್ದರು.

Share this article