ಗ್ರಾಮೀಣ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸದಾ ಒತ್ತು

KannadaprabhaNewsNetwork | Published : Sep 4, 2024 1:47 AM

ಸಾರಾಂಶ

ಗ್ರಾಮೀಣ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸದಾ ಒತ್ತು ನೀಡಿ ಶ್ರಮಿಸುವುದಾಗಿ

ಕನ್ನಡಪ್ರಭ ವಾರ್ತೆ ಮೈಸೂರು

ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಾಗಲಕೋಟೆ ಜಿಲ್ಲೆಯ ಉಪ ನಿರ್ದೇಶಕರಾಗಿ ಪದನ್ನೋತಿ'''''''' ಹೊಂದಿ ನಿಯೋಜಿತರಾಗಿರುವ ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ವಿವೇಕಾನಂದ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.

ಮೆಲ್ಲಹಳ್ಳಿಯ ಕ್ಲಸ್ಟರ್ ಮುಖ್ಯ ಶಿಕ್ಷಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ರೈತಾಪಿ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪೂರಕವಾಗಿ ಗ್ರಾಮೀಣ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸದಾ ಒತ್ತು ನೀಡಿ ಶ್ರಮಿಸುವುದಾಗಿ ಹೇಳಿದರು.

ವಿವಿಧ ಕಂಪನಿಗಳ ಸಿ.ಎಸ್.ಆರ್. ನಿಧಿ ಬಳಸಿಕೊಂಡು, ಸ್ವಯಂ ಸೇವಾ ಸಂಸ್ಥೆಗಳ ಹಾಗೂ ದಾನಿಗಳ ಸಹಕಾರ ಪಡೆದು ಗ್ರಾಮಾಂತರ ವಲಯದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸಿ ''''''''ಮಾದರಿ ಶಾಲೆ''''''''ಗಳನ್ನಾಗಿ ಮಾಡಲಾಗಿದೆ. ಆ ಮೂಲಕ ಉತ್ತಮ ಹಳ್ಳಿಗಾಡಿನ ಮಕ್ಕಳಿಗೆ ಪ್ರೇರಕವಾದ ಕಲಿಕಾ ವಾತಾವರಣ ಕಲ್ಪಿಸಿರುವುದು ತೃಪ್ತಿ ತಂದಿದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ ಮಾತನಾಡಿ, ಉತ್ಸಾಹಿ ಮನೋಭಾವದ ಯುವ ಶಿಕ್ಷಣಾಧಿಕಾರಿಯಾಗಿರುವ ಎಂ. ವಿವೇಕಾನಂದ ಅವರ ಶೈಕ್ಷಣಿಕ ಕಾಳಜಿ ಹಾಗೂ ಮಕ್ಕಳ ಸ್ನೇಹಿ ನಿಲುವು ಅನನ್ಯವಾದುದು. ಅವರ ಪರಿಶ್ರಮದ ಫಲವಾಗಿ ಮೈಸೂರು ತಾಲೂಕಿನ ಸರ್ಕಾರಿ ಶಾಲೆಗಳು ಇಂದು ಪುನಶ್ಚೇತನಗೊಂಡು ಹೈಟೆಕ್ ಗೊಂಡಿವೆ ಎಂದು ಶ್ಲಾಘಿಸಿದರು.

ನಿಕಟಪೂರ್ವ ಕ್ಷೇತ್ರ ಸಮನ್ವಯಾಧಿಕಾರಿ ಮಹದೇವ್ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನರಸೀಪುರ ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಜೆ. ರಾಜು, ವರುಣ ಹೋಬಳಿ ಕಾರ್ಯದರ್ಶಿ ಕುಮಾರ್, ಸಿ.ಆರ್.ಪಿ. ಎಸ್. ದೀಪು, ಎನ್.ಜಿ.ಒ. ನಿತಿನ್, ಮುಖ್ಯ ಶಿಕ್ಷಕರಾದ ಎಂ.ಎನ್. ಗಿರೀಶ್, ಎಂ. ಪ್ರಭುಸ್ವಾಮಿ, ಎನ್. ಅನುಪಮಾ, ಪಿ.ಎನ್. ವೀಣಾ ಇದ್ದರು.

Share this article