ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ

KannadaprabhaNewsNetwork |  
Published : Jan 09, 2026, 03:15 AM IST
ಫೋಟೋ- ಬಸವಫೋಟೋ- ಜ್ಯೋತಿ | Kannada Prabha

ಸಾರಾಂಶ

Congratulations from the leaders of the A.B.V.L.M. Women's Unit in Kalaburagi

-ಕಲಬುರಗಿಯಲ್ಲಿ ಅ.ಭಾ.ವೀ.ಲಿಂ. ಮಹಿಳಾ ಘಟಕದ ಮುಖಂಡರಿಂದ ಅಭಿನಂದನೆ

-----

ಕನ್ನಡಪ್ರಭ ವಾರ್ತೆ ಕಲಬುರಗಿ

ಬಸವಣ್ಣನವರ ಹೆಸರಿನಲ್ಲಿ ಬೆಂಗಳೂರಿನ ಯಲಹಂಕದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದಕ್ಕೆ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಅ.ಭಾ.ವೀ.ಲಿಂ. ಸಭಾ, ರಾಷ್ಟ್ರೀಯ ಬಸವ ದಳ, ಬಸವ ಸೇವಾ ಪ್ರತಿಷ್ಠಾನ, ಅ.ಭಾ.ವೀ.ಲಿಂ. ಮಹಿಳಾ ಘಟಕದ ಮುಖಂಡರು ಅಭಿನಂದಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಶಾಬಾದಿ, ಆರ್‌ಜಿ ಶೆಟಗಾರ್‌, ಡಾ. ಸುಧಾ ಹಾಲಕಾಯಿ, ರಾಜಶೇಖರ ಯಕ್ಕಂಚಿ, ಸುಭಾಸ ಬಿಜಾಸ್ಪೂರ್‌, ವಿಶ್ವಗುರು ಬಸವಣ್ಣನವರ ತತ್ವಾದರ್ಶ ಜನಮಾನಸದಲ್ಲಿ ಅಚ್ಚಳಿಯದೇ ಇರಲು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿ, ಇಡೀ ವಿಶ್ವಕ್ಕೆ ತಿಳಿಯುವಂತೆ ಬೆಂಗಳೂರು ಮಹಾನಗರದಲ್ಲಿ ಅರಣ್ಯ ಇಲಾಖೆಯಿಂದ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರವನ್ನು ಅಭಿನಂದಿಸೋದಾಗಿ ಹೇಳಿದರು.

ಬಸವ ಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ಬಗ್ಗೆಯೂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವೀರಶೈವ ಲಿಂಗಾಯಿತ ಸಮಾಜ ಅವರಿಂದ ಈ ಕೆಲಸವನ್ನು ನಿರೀಕ್ಷೆ ಮಾಡುತ್ತಿರೋದಾಗಿ ಹೇಳಿರುವ ರವೀಂದ್ರ ಶಾಬಾದಿಯವರು ಮುಂಬರುವ ಬಜೆಟ್‌ನಲ್ಲಿ ಬಸವ ಕಲ್ಯಾಣ ವಚನ ವಿವಿ ಸ್ಥಾಪನೆಯನ್ನು ಸಿಎಂ ಘೋಷಿಸುವ ವಿಶ್ವಾಸವಿದೆ ಎಂದಿದ್ದಾರೆ.

ಜ್ಯೋತಿ ಮರಗೋಳ ಸರ್ಕಾರಕ್ಕೆ ಅಭಿನಂದನೆ ಈ ಕುರಿತಂತೆ ಹೇಳಿಕೆ ನೀಡಿದ್ದು ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಜನಮಾನಸದಲ್ಲಿ ಅಚ್ಚಳಿಯದೇ ಇರಲು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದ್ದ ಸರ್ಕಾರ ಇದೀಗ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಕೆಲಸ ಎಂದಿದ್ದಾರೆ.

ಬೆಂಗಳೂರಲ್ಲಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆ ರಾಜ್ಯ ಸರ್ಕಾರದ ಕಾರ್ಯ ಶ್ಲಾಘನೀಯ ಎಂದು ಜ್ಯೋತಿ ಮರಗೋಳ್‌ ತಿಳಿಸಿದ್ದಾರೆ.

ಫೋಟೋ- ಬಸವ

ಫೋಟೋ- ಜ್ಯೋತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ