ನ್ಯಾಯಧೀಶರಾಗಿ ಆಯ್ಕೆ: ಅಭಿನಂದನೆ

KannadaprabhaNewsNetwork |  
Published : Jun 02, 2026, 03:00 AM IST
ಸುಕೇಂದ್ರ | Kannada Prabha

ಸಾರಾಂಶ

ಜೆಎಂಎಫ್ ಸಿ ನ್ಯಾಯಧೀಶರಾಗಿ ಆಯ್ಕೆಯಾದ ಸುಕೇಂದ್ರ ಅವರನ್ನು ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು.

ಉಡುಪಿ: ಜೆಎಂಎಫ್ ಸಿ ನ್ಯಾಯಧೀಶರಾಗಿ ಆಯ್ಕೆಯಾದ ಸುಕೇಂದ್ರ ಅವರನ್ನು ಉಡುಪಿ ಜಿಲ್ಲಾ ಅಧಿವಕ್ತ ಪರಿಷತ್‌ ವತಿಯಿಂದ ಅಭಿನಂದಿಸಲಾಯಿತು.

ಸುಕೇಂದ್ರ ಅವರು ಉಡುಪಿ ನ್ಯಾಯಾಲಯದಲ್ಲಿ ಯುವ ನ್ಯಾಯವಾದಿಯಾಗಿ ವೃತ್ತಿ ಮಾಡುತ್ತಿದ್ದು, ಇದೀಗ ಉಡುಪಿ ಜಿಲ್ಲೆಯಲ್ಲೇ ಆಯ್ಕೆಯಾದ ಏಕೈಕ ನ್ಯಾಯಾಧೀಶರಾಗಿದ್ದಾರೆ. ಈ ಸಂದರ್ಭ ಅಧಿವಕ್ತ ಪರಿಷತ್‌ ಅಧ್ಯಕ್ಷ ಸಂತೋಷ್‌ ಹೆಬ್ಬಾರ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಉಡುಪಿ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ರಾಜೇಶ್‌ ಎ.ಆರ್‌. ಅಭಿನಂದನಾ ಮಾತುಗಳನ್ನಾಡಿದರು. ವಕೀಲರ ಸಂಘದ ಮಾಜಿ ಸಾಂಸ್ಕತಿಕ ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಅಧಿವಕ್ತ ಪರಿಷತ್‌ ಪ್ರಧಾನ ಕಾರ್ಯದರ್ಶಿ ಆರೂರು ಸುಕೇಶ್‌ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ವಕೀಲರ ಸಂಘದ ಉಪಾಧ್ಯಕ್ಷ ಕರ್ಜೆ ಬಾಲಕೃಷ್ಣ ಶೆಟ್ಟಿ, ಉಡುಪಿ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್‌ ಎಸ್.ಪಿ. ಏಳಿಂಜೆ, ವಕೀಲರ ಸಂಘದ ಮಾಜಿ ಜೊತೆ ಕಾರ್ಯದರ್ಶಿ ರವೀಂದ್ರ ಬೈಲೂರು, ಅಧಿವಕ್ತ ಪರಿಷತ್‌ ಪದಾಧಿಕಾರಿಗಳಾದ ಶಶಿಕಲಾ ತೋನ್ಸೆ, ನಾಗರಾಜ್ ಕಿನ್ನಿಮೂಲ್ಕಿ, ಆಶಿಶ್‌ ಶೆಟ್ಟಿ ಬೋಳ, ಸುಚಿತ ಶೆಟ್ಟಿ, ಕಾವ್ಯ ನಾಯ್ಕ್, ಮೇಘನಾ, ಸುಚೇತಾ ಶೆಟ್ಟಿ, ಜಯಂತ್‌ ರಾವ್‌, ಪೆಲತ್ತೂರು ರೋಹಿತ್‌ ಆಚಾರ್ಯ, ಶ್ರೀನಿಧಿ ಸುವರ್ಣ, ಪ್ರಸನ್ನ ಶೆಣೈ, ಲೀವನ್‌ ಪ್ಲಾ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಒತ್ತು; ದಯಾನಂದ ಪೈ
ಶಿಕ್ಷಕರನ್ನೇ ಆತ್ಮೀಯವಾಗಿ ಸ್ವಾಗತಿಸಿ ಹೊಸ ಶೈಕ್ಷಣಿಕ ವರ್ಷದ ಸಂಭ್ರಮ!