ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನ್ನಂಗಾಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಂತನಹಳ್ಳಿ ಮಂಜಯ್ಯ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.ತಾಲೂಕಿನ ಚಿನಕುರಳಿ ಗ್ರಾಮದ ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿದ ಮಾಜಿ ಸಚಿವರು, ಗ್ರಾಪಂ ಅಧ್ಯಕ್ಷ ಮಂಜಯ್ಯ ಅವರನ್ನು ಎಲ್ಲಾ ಸದಸ್ಯರು ಬೆಂಬಲಿಸಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಮೂಲಕ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮುಖಂಡರಾದ ತಾಪಂ ಸದಸ್ಯ ಬಿ.ಪಿ.ಶ್ರೀನಿವಾಸ್, ಮರಿಸ್ವಾಮೀಗೌಡ, ಗಾಡಿಯೋಗಣ್ಣ, ಬಿ.ಎಚ್.ಪ್ರಸನ್ನ, ಅಂತನಹಳ್ಳಿ ಲಕ್ಕಪ್ಪ, ಮೆಡಿಕಲ್ ವಿಶ್ವ, ಬಿ.ಎಸ್.ಶ್ರೀನಿವಾಸ್, ಕೋಡಿಯೋಗಣ್ಣ, ಬಿಂಡಹಳ್ಳಿ ಬಸವರಾಜು, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಸು, ಅಂತನಹಳ್ಳಿ ಶಿವಸ್ವಾಮಿ, ದೇವರಾಜು ಗಿರಿಯಾರಹಳ್ಳಿ, ಶಿವಲಿಂಗಯ್ಯ, ಕೃಷ್ಣ, ಪುಟ್ಟಪ್ಪ, ಚಂದ್ರೇಗೌಡ, ನಾಗೇಶ್, ಸಾಕಿ ಮಂಜು, ಸೇರಿದಂತೆ ಹಲವರು ಇದ್ದರು.ಸಾದೊಳಲು ಗ್ರಾಪಂ ಅಧ್ಯಕ್ಷರಾಗಿ ಸತೀಶ್ ಕುಮಾರ್ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಸಾದೊಳಲು ಗ್ರಾಪಂ ನೂತನ ಅಧ್ಯಕ್ಷರಾಗಿ ಕೆ.ಎಸ್.ಸತೀಶ್ ಕುಮಾರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಹಾಲಿ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕುದರಗುಂಡಿ ಕೆ.ಎಸ್.ಸತೀಶ್ ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಎಂ.ವಿದ್ಯಾಶ್ರೀ ಅಂತಿಮವಾಗಿ ಘೋಷಣೆ ಮಾಡಿದರು. ನೂತನ ಅಧ್ಯಕ್ಷರನ್ನು ಪಿಡಿಒ ಹೇಮಾವತಿ, ಉಪಾಧ್ಯಕ್ಷೆ ಚನ್ನಾಜಮ್ಮ, ಸದಸ್ಯರಾದ ಎಸ್.ಆನಂದ, ಕುಮಾರಿ, ಪಿ.ರಾಜು, ಚಂದ್ರಪ್ರಭ, ಶಾಂತಮ್ಮ, ರಾಜೇಶ್ವರಿ, ಸಿದ್ದಪ್ಪಗೌಡ, ಎಸ್.ಬಿ.ನಂದಿನಿ, ಉಮೇಶ, ಶೋಭಾ, ಪದ್ಮಮ್ಮ, ಬಿ.ಎನ್. ಪ್ರಕಾಶ್, ಗ್ರಾಮದ ಮುಖಂಡರಾದ ಕೆ.ಪಿ.ಶ್ರೀಧರ, ಕಾಂತರಾಜು, ಆನಂದ, ಕೆ.ಪಿ.ಜಯರಾಮ್, ಕೆ.ಬಿ.ಶಂಕರ, ಡಿ.ಕೆ.ಮಹೇಂದ್ರ, ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದರು.