ಕಾನೂನಿನ ಅರಿವನ್ನು ಸಮಾಜಕ್ಕೆ ತಿಳಿಯಪಡಿಸಿ

KannadaprabhaNewsNetwork |  
Published : Apr 03, 2025, 12:32 AM IST
26 | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಕಾನೂನು ಎಲ್ಲರಿಗೂ ಗೊತ್ತಿರಬೇಕು. ಅದನ್ನು ತಿಳಿಸುವ ಹಕ್ಕು ಕಾನೂನು ವಿಭಾಗಕ್ಕೆ ಮತ್ತು ಕಾನೂನು ಪಡೆದ ಪದವೀಧರರು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ರಮೇಶ್‌ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಅವರ ಹಳೆಯ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ತಂಡವು ಕಾನೂನು ಅಧ್ಯಯನ ವಿಭಾಗದ ಸಹಯೋಗದಲ್ಲಿ ಅಭಿನಂದಿಸಿದರು.ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ಎ. ಪಾಟೀಲ್‌ ಅವರು ಆಗಮಿಸಿ ಪ್ರಾಧ್ಯಾಪಕ ಡಾ. ರಮೇಶ್‌ ಅವರ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕಾನೂನಿನ ಅರಿವು ಮತ್ತು ನೆರವನ್ನು ಹೆಚ್ಚು ಹೆಚ್ಚು ತಿಳಿದುಕೊಂಡು ಸಮಾಜಕ್ಕೆ ತಿಳಿಯಪಡಿಸಬೇಕು ಎಂದು ಹೇಳಿದರು.ಪ್ರಸ್ತುತ ದಿನಗಳಲ್ಲಿ ಕಾನೂನು ಎಲ್ಲರಿಗೂ ಗೊತ್ತಿರಬೇಕು. ಅದನ್ನು ತಿಳಿಸುವ ಹಕ್ಕು ಕಾನೂನು ವಿಭಾಗಕ್ಕೆ ಮತ್ತು ಕಾನೂನು ಪಡೆದ ಪದವೀಧರರು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಮಾತನಾಡಿ, ಡಾ. ರಮೇಶ್‌ ಅವರು ಸೇವೆಯಿಂದ ನಿವೃತ್ತರಾಗುತ್ತಿರಬಹುದು. ಆದರೆ ಅವರ ಕಾನೂನು ಸೇವೆ ಮತ್ತು ಪುಸ್ತಕಗಳು ವಿದ್ಯಾರ್ಥಿಗಳಿಗೆ ಎಂದೆಂದಿಗೂ ಮಾರ್ಗದರ್ಶನ ನೀಡುತ್ತವೆ. ಕಾನೂನು ಪಡೆಯುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಕಾನೂನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಬಂಧಗಳನ್ನು ಮಂಡಿಸಿ ವಿಚಾರಧಾರೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನಿವೃತ್ತ ಉಪ ಕುಲಪತಿ ಡಾ. ಈಶ್ವರ್‌ ಭಟ್, ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆ ನಿರ್ದೇಶಕ ಡಾ.ಸಿ.ಎಸ್. ಪಾಟೀಲ್ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಸಿ.ಎಂ. ವೆಂಕಟರಾಮು, ಕಾಡಾ ಮಾಜಿ ಅಧ್ಯಕ್ಷ ದೇವನೂರು ಶಿವಮಲ್ಲು ಇದ್ದರು.ಕರ್ನಾಟಕ ಹೈಕೋರ್ಟ್‌ನ ವಕೀಲರು ಮತ್ತು ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಜಗದೀಶ್ ಹಾಲಶೆಟ್ಟಿ ಸ್ವಾಗತ ಭಾಷಣ ಮಾಡಿದರು, ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಅವರು ಡಾ. ರಮೇಶ್‌ ಅವರೊಂದಿಗೆ ಧಾರವಾಡದ ಕಾನೂನು ಕಾಲೇಜಿನಲ್ಲಿ ಸಹದ್ಯೋಗಿಯಾಗಿ ಕಳೆದ ದಿನಗಳನ್ನು ಮತ್ತು ಅವರೊಡನೆ ಹಂಚಿಕೊಂಡ ವಿಶೇಷ ಬಾಂಧವ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ವಿದ್ಯಾವರ್ಧಕ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎ. ಪ್ರಕೃತಿ ಹಾಗೂ ಹೊಳೇನರಸೀಪುರ ಸರ್ಕಾರಿ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮಡಿವಾಲಪ್ಪ ಮಟ್ಟೋಲಿ ಅವರು ರಚಿಸಿದ ವಿಶೇಷ ಕಾನೂನು ಪುಸ್ತಕ ಬಿಡುಗಡೆಗೊಳಿಸಲಾಯಿತು.ವಿದ್ಯಾವಿಕಾಸ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜೆ. ಭಾಗ್ಯಮ್ಮ ಅವರು ಬರೆದಿರುವ ದಿ ಅಕಾಡೆಮಿಕ್ ಬಯೋಗ್ರಫಿ ಆಫ್‌ ಡಾಕ್ಟರ್‌ ರಮೇಶ್ ಎಂಬ ಸಂಶೋಧನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.ಪ್ರೊ. ಮಡಿವಾಲಪ್ಪ ಮಟ್ಟೋಲಿ, ಡಾ. ರಮೇಶ್‌ ಅವರ ಅಭಿನಂದನಾ ಪತ್ರ ಓದಿದರು. ಹೈಕೋರ್ಟ್‌ ವಕೀಲೆ ಸಹನಾ ಗೋಪಾಲ್ ನಿರೂಪಿಸಿದರೆ, ವಿದ್ಯೋದಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್. ಮುದ್ದುರಾಜು ವಂದಿಸಿದರು.---------------- eom/mys/dnm/

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...