ಕನ್ನಡಪ್ರಭ ವಾರ್ತೆ ಕೆ.ಎಂ ದೊಡ್ಡಿ
ಆಸರೆ ಸೇವಾ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆ ಮುಖಂಡರ ಜೊತೆಗೂಡಿ ರೈತ ಕವಿ ದೊ.ಚಿ.ಗೌಡ ರವರನ್ನು ಅಭಿನಂದಿಸಿ ಮಾತನಾಡಿ, ದೊ.ಚಿ.ಗೌಡರು ಮಂಡ್ಯ ಜಿಲ್ಲೆಯ ಹೆಮ್ಮೆಯ ಕವಿಗಳಲ್ಲಿ ಒಬ್ಬರಾಗಿ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.
ದೊ.ಚಿ.ಗೌಡರು ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಉತ್ತಮ ವಾಚನ ಮಾಡಿ ಮಂಡ್ಯ ಜಿಲ್ಲೆಗೆ ಒಳ್ಳೆಯ ಹೆಸರನ್ನು ತಂದು ಕೊಡಲಿ ಎಂದು ಪ್ರಗತಿಪರ ಸಂಘಟನೆಗಳು ಒಕ್ಕೊರಲಿನಿಂದ ಆಶಿಸುತ್ತೇವೆ ಎಂದರು.ಅಭಿನಂದನೆ ಸ್ವೀಕರಿಸಿ ರೈತ ಕವಿ ದೊ.ಚಿ.ಗೌಡ ಮಾತನಾಡಿ, ಸ್ಥಳೀಯವಾಗಿ ನಾಡು ನುಡಿ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡು ಅಭಿನಂದನೆ ಸಲ್ಲಿಸಿರುವುದು ನನ್ನ ಮೇಲೆ ಪ್ರೀತಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಈ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಸೆ.23 ರಂದು ಮೈಸೂರು ವಿಶ್ವವಿದ್ಯಾಲಯದ ಬಿ.ಎಂ.ಶ್ರೀ ಸಂಭಾಗಣದಲ್ಲಿ ನಡೆಯಲಿರುವ ಪ್ರಭಾತ, (ಪ್ರಾದೇಶಿಕ) ಕವಿಗೋಷ್ಠಿಯಲ್ಲಿ ರೈತ ಕವಿ ಎಂದೇ ಗುರುತಿಸಲ್ಪಡುವ ದೊಡ್ಡರಸಿನಕೆರೆ ಗ್ರಾಮದ ದೊ.ಚಿ.ಗೌಡರು ಕವಿತೆ ವಾಚನ ಮಾಡಲಿದ್ದಾರೆ.ಇದೇ ಸಂದರ್ಭದಲ್ಲಿ ಆಸರೆ ಸೇವಾ ಟ್ರಸ್ಟ್ ಖಜಾಂಚಿ ವಿಕಾಸ್, ಪ್ರಗತಿಪರ ಸಂಘಟನೆಯ ಕರಡಕೆರೆ ಯೋಗೇಶ್, ಗ್ರಾಮ ಪಂಚಾಯ್ತಿ ಸದಸ್ಯ ಕಾರ್ಕಳ್ಳಿ ಮಹೇಶ್, ಅಣ್ಣೂರು ಸೊಸೈಟಿ ನಿರ್ದೇಶಕ ವೀರೇಂದ್ರ ಗುರುದೇವರಹಳ್ಳಿ ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.