ಕನ್ನಡಪ್ರಭ ವಾರ್ತೆ ಬೆಳಗಾವಿ
ರೋಗಿಯ ಸಂಬಂಧಿಗಳು ಸಾಫ್ಟ್ ನರ್ಸ್‌ರೊಬ್ಬರ ಮೇಲೆ ಮಾಡಿದ್ದಾರೆನ್ನಲಾದ ಹಲ್ಲೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾಸ್ಪತ್ರೆಯ ಸ್ಪಾಫ್ ನರ್ಸ್‌ಗಳು ಬುಧವಾರ ಕೆಲಕಾಲ ಸೇವೆ ಸ್ಥಗಿತಗೊಳಿಸಿ ತುರ್ತು ನಿಗಾ ಘಟಕದ ಎದುರು ಪ್ರತಿಭಟನೆ ನಡೆಸಿದರು.ಮಂಗಳವಾರ ಸಂಜೆ ತನ್ನ ವಾರ್ಡ್ ಬಿಟ್ಟು ಬೇರೊಂದು ವಾರ್ಡ್‌ಗೆ ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಪ್ರಶ್ನಿಸಿದ್ದ ಸ್ಪಾಫ್ ನರ್ಸ್ ಬಸವರಾಜ ಕಬಾಡಗಿ, ಮಹಿಳೆಯ ಕೈ ಹಿಡಿದು ವಾರ್ಡ್‌ಗೆ ಹೋಗುವಂತೆ ಹೇಳಿದ್ದರಂತೆ. ಇದೇ ವಿಷಯಕ್ಕೆ ಆಕೆಯ ಸಂಬಂಧಿಗಳು ಆಸ್ಪತ್ರೆಗೆ ಬಂದು ಹಲ್ಲೆ ಮಾಡಿದ್ದಾರೆ. ಇದರಿಂದ ನಾವು ಭಯದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.
ಘಟನಾ ಸ್ಥಳಕ್ಕೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಭೇಟಿ ನೀಡಿ, ಬಿಮ್ಸ್‌ವತಿಯಿಂದ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗೆ ದೂರು ಪತ್ರ ಕಳುಹಿಸಲಾಗುವುದು. ಹಲ್ಲೆಗೊಳಗಾದ ಬಸವರಾಜ ಮೂಲಕವೂ ಎಫ್‌ಐಆರ್ ಮಾಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾದರು.