ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದ ಯು.ಕೆ.ಮನೋಜ್‌ಗೆ ಅಭಿನಂದನೆ

KannadaprabhaNewsNetwork |  
Published : May 05, 2025, 12:46 AM IST
4ಕೆಎಂಎನ್ ಡಿ16 | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ಪಾಂಡವಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಿನಕುರಳಿ ಬಿಜಿಎಸ್ ಶಾಲೆ ವಿದ್ಯಾರ್ಥಿ ಯು.ಕೆ.ಮನೋಜ್ ಅವರನ್ನು ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚಿನಕುರಳಿ ಬಿಜಿಎಸ್ ಶಾಲೆ ವಿದ್ಯಾರ್ಥಿ ಯು.ಕೆ.ಮನೋಜ್ ಅವರನ್ನು ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು, ತಾಲೂಕಿನ ಕನಗನಹಳ್ಳಿ ಕೆ.ಉಮೇಶ್, ಎನ್.ಎಸ್.ರೇಖಾ ದಂಪತಿ ಪುತ್ರ ಮನೋಜ್ 621 ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ ಎಂದರು.

ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆ ಮನೋಜ್ ಕನ್ನಡ-124, ಇಂಗ್ಲಿಷ್-97, ಹಿಂದಿ 100, ಗಣಿತ-100, ವಿಜ್ಞಾನ-100, ಸಮಾಜ ವಿಜ್ಞಾನ-100 ಅಂಕಗಳಿಸಿದ್ದಾನೆ. ಅಲ್ಲದೇ, ಪಟ್ಟಣದ ಬಿಜಿಎಸ್ ಶಾಲೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದಿದ್ದಾರೆ. ತಾಲೂಕು 10 ಮಂದಿ ಟಾಪ್ ಸ್ಥಾನದಲ್ಲಿ ಬಿಜಿಎಸ್ ಶಾಲೆ 7 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಉತ್ತೀರ್ಣರಾದ ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಈ ವೇಳೆ ಶಾಲೆ ಮುಖ್ಯಶಿಕ್ಷಕ ಚಿದಂಬರ್, ವಿದ್ಯಾರ್ಥಿಯ ತಂದೆ ಕೆ.ಉಮೇಶ್, ತಾಯಿ ಎನ್.ಎಸ್.ರೇಖಾ ಇದ್ದರು.

ರೋಟರಿ ಎಜುಕೇಷನ್ ಟ್ರಸ್ಟ್‌ಗೆ ಶೇ.90 ರಷ್ಟು ಫಲಿತಾಂಶ

ಪಾಂಡವಪುರ: ರೋಟರಿ ಎಜುಕೇಷನ್ ಟ್ರಸ್ಟ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಫಲಿತಾಂಶ ಪಡೆದಿದೆ. ವಿದ್ಯಾರ್ಥಿಗಳಾದ ಬಿ.ವೈಷ್ಣವಿ 595 (ಶೇ.95.20), ಎಚ್.ಎಸ್.ಪಾವನಾ 590(ಶೇ.94.40), ಟಿ.ಎಸ್.ಸಂಜನಾ 577 (ಶೇ.92.36), ಎಚ್.ಡಿ.ವಿಕಾಸ್‌ಗೌಡ 560 (ಶೇ.89.60), ಅಖಿಲೇಷ್.ಬಿ.ಎಲ್. 527 (ಶೇ.84.32), ಬಿ.ಕೆ.ಪ್ರಕೃತಿ 520 (ಶೇ.83.20), ಎಸ್.ಪುನೀತ್‌ಗೌಡ 517ಶೇ.(82.72), ಎನ್.ಎಸ್.ಕುಶಾಲ್‌ಗೌಡ 505 (ಶೇ.80.80), ಎಚ್.ಕೆ.ಪ್ರವೀಣ್‌ಕುಮಾರ್ 502 (ಶೇ.80.32) ರಷ್ಟು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಟ್ರಸ್ಟ್ ತಾಲೂಕಿಗೆ 3ನೇ ಸ್ಧಾನ ಪಡೆದು ಶಾಲೆಗೆ ಕೀರ್ತೀ ತಂದಿರುವ ವಿದ್ಯಾರ್ಥಿಗಳನ್ನು ಶಾಲಾಡಳಿತ ಮಂಡಳಿ ಟ್ರಸ್ಟಿಗಳು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.ಸ್ಟ್ಯಾನ್ ಫೋರ್ಡ್ ಪಬ್ಲಿಕ್ ಶಾಲೆಗೆ ಶೇ.82ರಷ್ಟು ಫಲಿತಾಂಶ

ಪಾಂಡುವಪುರ: ತಾಲೂಕಿನ ಕ್ಯಾತನಹಳ್ಳಿಯ ಸ್ಟ್ಯಾನ್ ಫೋರ್ಡ್ ಪಬ್ಲಿಕ್ ಶಾಲೆಗೆ ಶೇ.82ರಷ್ಟು ಫಲಿತಾಂಶ ಬಂದಿದೆ.

ಶಾಲೆಯ ವಿದ್ಯಾರ್ಥಿಗಳಾದ ದಿಶರಾಘವ್ 585 ಶೇ.93.6, ದಿಶರಾಣಿ 577, ಶೇ.92.32, ರಕ್ಷಿತಾ.ಎಸ್ 518 ಶೇ.82.88 ರಷ್ಟು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಕೆ.ಎನ್.ವಾಸುದೇವ, ಉಪಾಧ್ಯಕ್ಷ ಕೆ.ಕೃಷ್ಣೆಗೌಡ, ಕಾರ್ಯದರ್ಶಿ ಕೆ.ವಿ.ಚೇತನ್, ಖಜಾಂಚಿ ಸೌಮ್ಯ ಕೆ., ಆಡಳಿತಾಧಿಕಾರಿ ಜಗದೀಶ್, ಮುಖ್ಯಶಿಕ್ಷಕಿ ಡಿ.ಕವಿತಾ ಹಾಗೂ ಶಾಲೆ ಎಲ್ಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಕ್ಕೆ ಬರುವ ಕೇಂದ್ರ ಸಚಿವರಿಗೆ ಕಪ್ಪು ಬಾವುಟ: ಐವನ್‌
ಸಾಹಿತಿ, ರಂಗನಟ, ನಿರ್ದೇಶಕ, ಆಕಾಶವಾಣಿ ನಾಟಕ ಕಲಾವಿದ ಪ್ರೊ.ರಾಮದಾಸ್‌ ನಿಧನ