ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಮ್ಮ ಹೊನ್ನಾಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್ತಿನಲ್ಲಿ ಮಸೂದೆ ಜಾರಿಯಾಗದೇ ವಿಫಲವಾಗಿದೆ. ಇದು ಮಹಿಳಾ ಸಬಲೀಕರಣದ ಕನಸುಗಳಿಗೆ ಬಿದ್ದ ಭಾರಿ ಹೊಡೆತವಾಗಿದೆ. ಸಂಸತ್ತಿನಲ್ಲಿ ಮಸೂದೆ ಬಿದ್ದ ಕೂಡಲೇ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿ ಕೆಟ್ಟ ವರ್ತನೆ ತೋರಿದ್ದರಿಂದ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿದೆ. ಇದರಿಂದ ಮಹಿಳೆಯರ ಹಕ್ಕುಗಳನ್ನು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕಸಿದುಕೊಂಡಂತಾಗಿದೆ. ಕೂಡಲೇ ಕಾಂಗ್ರೆಸ್ ಹಾಗೂ ಇತರ ಮಿತ್ರಪಕ್ಷಗಳು ಬೇಷರತ್ತಾಗಿ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
12ನೇ ಶತಮಾಣದಲ್ಲಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೂ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಸೌಟು ಹಿಡಿಯುವ ಕೈಯಲ್ಲಿ ದೇಶದ ಆಡಳಿತ ನಡೆಸುವ ಅವಕಾಶವೂ ಸಿಕ್ಕಂತಾಗುತ್ತದೆ, ಆದ್ದರಿಂದ ಎಲ್ಲ ರಂಗದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಯಾರ ಮಾತಿಗೂ ಮನ್ನಣೆ ನೀಡದೇ ಮಹಿಳೆಯರ ಹಕ್ಕನ್ನು ಕಸಿದುಕೊಂಡಿದೆ ಎಂದು ಟೀಕಿಸಿದರು.ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ವತಃ ಮಹಿಳೆಯರಾಗಿದ್ದರೂ ಅವರು ಕೂಡ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದೇ ಇರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್ ಜೆ.ಕೆ. ಮುಖಂಡರಾದ ಸಿ.ಆರ್. ಶಿವಾನಂದ, ಮಂಜುನಾಥ್ ನೆಲಹೊನ್ನೆ, ಎಸ್.ಎಸ್.ಬೀರಪ್ಪ, ಮಾರುತಿ ನಾಯ್ಕ್, ಕರಿಬಸವಯ್ಯ ರೆಡ್ಡಿ, ಮಹೇಶ್ ಹುಡೇದ್, ಕೋಟೆಹಾಳ್ ಮಲ್ಲೇಶ, ಪಲ್ಲವಿ ರಾಜು ಇತರರು ಇದ್ದರು.
ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಮಾಜಿ ಸಚಿವ.