ಹಿಂದುಗಳ ದಮನಕ್ಕೆ ಕಾಂಗ್ರೆಸ್ ಪ್ರಯತ್ನ: ರೇಣುಕಾಚಾರ್ಯ

KannadaprabhaNewsNetwork | Published : Sep 24, 2024 1:47 AM

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಗಳು ಹಾಗೂ ಬಿಜೆಪಿಯವರನ್ನು ದಮನ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಹಿಂದುಗಳ ಮೇಲೆ ಹಾಕಿರುವ ಕೇಸ್ ವಾಪಸ್‌ ಪಡೆಯುತ್ತೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಹಿಂದುಗಳ ಮೇಲಿನ ಕೇಸ್ ಹಿಂಪಡೆಯುವ ಭರವಸೆ ನೀಡಿದ ಮಾಜಿ ಸಚಿವ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಗಳು ಹಾಗೂ ಬಿಜೆಪಿಯವರನ್ನು ದಮನ ಮಾಡುವ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಹಿಂದುಗಳ ಮೇಲೆ ಹಾಕಿರುವ ಕೇಸ್ ವಾಪಸ್‌ ಪಡೆಯುತ್ತೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಜಿಲ್ಲಾ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ, ಬಂಧಿತ ಹಿಂದುಗಳಿಗೆ ಹಣ್ಣುಗಳನ್ನು ವಿತರಿಸಿ, ಆತ್ಮಸ್ಥೈರ್ಯ ಮೂಡಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ಯಾಲೇಸ್ತೀನ್‌ ಧ್ವಜದ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಹೇಳಿದ್ದು ಸರಿಯಲ್ಲ. ನಾವು ಪಾಕಿಸ್ತಾನ, ಪ್ಯಾಲೇಸ್ತೀನ್ ವಿರೋಧಿಗಳಲ್ಲ. ಆದರೆ, ಅವೆರೆಡೂ ದೇಶಗಳು ಮಾಡುವ ಕೃತ್ಯಗಳನ್ನು ವಿರೋಧಿಸುತ್ತೇವೆ. ಅಷ್ಟೇ ಅಲ್ಲ, ಭಾರತದ ನೆಲದಲ್ಲಿ ಪ್ಯಾಲೇಸ್ತೀನ್ ಧ್ವಜ ಹಾರಾಟ ಮಾಡಿದ್ದು ತಪ್ಪು. ಭಾರತ್ ಮಾತಾ ಕೀ ಜೈ ಎನ್ನುವವರಿಗೆ, ಭಾರತದ ತ್ರಿವರ್ಣ ಧ್ವಜ ಹಿಡಿದವರಿಗೆ ಮಾತ್ರ ಇಲ್ಲಿ ಅವಕಾಶ. ಪಾಕಿಸ್ತಾನ ಜಿಂದಾಬಾದ್ ಎನ್ನುವವರು, ಪ್ಯಾಲೇಸ್ತೀನ್ ಧ್ವಜಗಳನ್ನು ಯಾರು ಹಿಡಿಯುತ್ತಾರೆ, ಅಂತಹವರನ್ನು ಮುಲಾಜಿಲ್ಲದೇ, ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ತಿರುಪತಿ ತಿಮ್ಮಪ್ಪ ಹಿಂದುಗಳ ಆರಾಧ್ಯ ದೈವ. ಅಂತಹ ಪುಣ್ಯಕ್ಷೇತ್ರ ತಿರುಪತಿಯ ಲಡ್ಡುಗಳ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸುತ್ತಾರೆಂದರೆ ಅದೆಂತಹ ಮನಸ್ಥಿತಿಯನ್ನು ಹೊಂದಿದ್ದಾರೆಂಬುದು ಅರ್ಥವಾಗುತ್ತದೆ ಎಂದು ಆಂಧ್ರದ ಮಾಜಿ ಮುಖ್ಯಮಂತ್ರಿ ಜಗನ್‌ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ ಇತರರು ಇದ್ದರು.

- - - -23ಕೆಡಿವಿಜಿ7, 8:

ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ಮಾಜಿ ಸಚಿವ ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ, ಎನ್.ರಾಜಶೇಖರ, ಲೋಕಿಕೆರೆ ನಾಗರಾಜ ಭೇಟಿ ನೀಡಿ ಭೇಟಿದರು.

Share this article