ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯಪಾಲರ ಅಂಗರಕ್ಷಕರು ಇಲ್ಲದಿದ್ದರೆ ಊಹಿಸಲು ಸಾಧ್ಯವಾಗದ ಘಟನೆ ನಡೆದು ಹೋಗುತ್ತಿತ್ತು. ಮುಖ್ಯಮಂತ್ರಿ ಕಣ್ಣೆದುರಿನಲ್ಲಿಯೇ ಅಹಿತಕರ ಘಟನೆ ನಡೆಯುತ್ತಿದ್ದರೂ ಮೌನ ವಹಿಸಿರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರ ಎಂದರು.
ವಿಧಾನಸಭೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಹಿಂದಿನ ಸಂಪ್ರದಾಯಕ್ಕೆ ಕೊರತೆಯಾಗದಂತೆ ಭಾಷಣಮಾಡಿ ಬಂದಾಗ ಕಾಂಗ್ರೆಸ್‌ನವರು ರೌಡಿಗಳಂತೆ ವರ್ತಿಸಿದ್ದಾರೆ. ಸಂಸತ್ತನ್ನು ಪ್ರತಿನಿಧಿಸಿ ಬಂದಿರುವ ಬಿ.ಕೆ.ಹರಿಪ್ರಸಾದ್ ಅನುಚಿತವಾಗಿ ವರ್ತಿಸಿದ್ದಾರೆ. ಹೈಕಮಾಂಡ್ ಓಲೈಸುವ ಸಲುವಾಗಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದರು.ರಾಜ್ಯ ಸರ್ಕಾರ ಪುಸ್ತಕ ರೂಪದಲ್ಲಿ ತಂದಿದ್ದ ಭಾಷಣವನ್ನು ರಾಜ್ಯಪಾಲರ ಮೂಲಕ ಓದಿಸಲು ಯತ್ನಿಸಲಾಗಿತ್ತು. ಪುಸ್ತಕದಲ್ಲಿ ಕೇಂದ್ರವನ್ನ ಬೈದಿರುವ ಪ್ರಯತ್ನ ನಡೆಸಿ ಅದನ್ನು ರಾಜ್ಯಪಾಲರ ಬಾಯಿಯಲ್ಲಿ ಹೇಳಿಸುವ ಪ್ರಯತ್ನ ನಡೆಸಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಯಡಿಯೂರಪ್ಪನವರ ಸರ್ಕಾರವನ್ನು ತೆಗೆದೇ ಹೋಗುವ ಶಪಥ ಮಾಡಿದ್ದರು. ಅವರು ಮಾಡಿದ್ದೆಲ್ಲಾ ಜನಪರವಾಗಿ, ಬೇರೆಯವರು ಮಾಡಿದ್ದೆಲ್ಲಾ ಜನವಿರೋಧಿ ಎಂದು ಬಿಂಬಿಸಲಾಗುತ್ತಿದೆ. ರಾಮ್-ಜಿ ಯೋಜನೆ ವಿರೋಧಿಸುವ ಸಲುವಾಗಿಯೇ ಮನರೇಗಾ ಯೋಜನೆ ಒಳ್ಳೆಯದೆಂದು ಬಿಂಬಿಸಲಾಗುತ್ತಿದೆ ರಾಮನ ಹೆಸರು ಕಾಂಗ್ರೆಸ್‌ನವರಿಗೆ ಅಲರ್ಜಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಲಕ್ಕೆ ತಕ್ಕಂತೆ ನರೇಗಾ ಹೆಸರು ಬದಲಿಸಲಾಗಿದೆ. ಕಾಂಗ್ರೆಸ್ ಕೂಡ ಆರಂಭದಲ್ಲಿಯೇ ಗಾಂಧೀಜಿ ಹೆಸರು ಸೇರಿಸಿರಲಿಲ್ಲ.ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಅದನ್ನು ಮುಚ್ಚಿಕೊಳ್ಳಲು ವಿಬಿ-ರಾಮ್-ಜಿ ಬಗ್ಗೆ ಕ್ಯಾತೆ ತೆಗೆಯಲಾಗಿದೆ. ಆಯುಶ್ಮಾನ್ ಭಾರತ್ ಯೋಜನೆ, ಕೃಷಿ ಸಮ್ಮಾನ್ ಯೋಜನೆಯ ಹಣವನ್ನು ನಿಲ್ಲಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಬೇರೆಲ್ಲಾ ಅಭಿವೃದ್ಧಿಗಳನ್ನು ನಿಲ್ಲಿಸಲಾಗಿದ್ದು, ಅದನ್ನು ಮುಚ್ಚಿಹಾಕುವ ಪ್ರಯತ್ನ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ. ಮೆಕ್ಕೆಜೋಳಕ್ಕೆ ಕೇಂದ್ರ ಬೆಂಬಲ ಬೆಲೆ ನೀಡಿದ್ದರೂ ಖರೀದಿ ಮಾಡಿಲ್ಲ. ಭತ್ತ ಖರೀದಿ ಕೇಂದ್ರವನ್ನು ತಡವಾಗಿ ತೆಗೆದು ರೈತರಿಗೆ ಅನ್ಯಾಯ ಮಾಡಲಾಗಿದೆ. ಆದರೂ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಮನರೇಗಾ ಯೋಜನೆಯಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಹೇಳಿದ್ದನ್ನು ಈಗ ಮರೆಯಲಾಗಿದೆ ಎಂದರು.ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಮಾಲತೇಶ್, ಶಿವರಾಜ್, ರಾಮು ಕೋಹಳ್ಳಿ, ವೀರಭದ್ರಪ್ಪ ಪೂಜಾರಿ, ಹರೀಶ್‌ನಾಯಕ್, ಮೋಹನ್, ಪ್ರಶಾಂತ್ ಕುಕ್ಕೆ, ಚಂದ್ರಶೇಖರ್, ರಾಜೇಶ್ ಕಾಮತ್, ಸಂತೋಷ್ ಬಳ್ಳೆಕೆರೆ, ದಿವಾಕರ್‌ಶೆಟ್ಟಿ, ಸುಮಾ ಭೂಪಾಳಂ ಮತ್ತಿತರರಿದ್ದರು.