ಕನ್ನಡಪ್ರಭ ವಾರ್ತೆ ಶಹಾಬಾದ
ರಾಜ್ಯ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆ ಹೆಸರಲ್ಲಿ ರಾಜ್ಯದ ಮಹಿಳೆಯರಿಗೆ ಬ್ಲಾಕ್‌ಮೇಲ್ ಮಾಡುತ್ತಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜಿಪಿ ಸರಕಾರ ಮಹಿಳೆಯರಿಗಾಗಿ ಶೌಚಾಲಯ, ಉಜ್ವಲಾ, ಆಯುಷ್ಮಾನ್ ಯೋಜನೆಯ ಮೂಲಕ ಮಹಿಳೆಯರಿಗೆ ಭದ್ರತೆ ನೀಡಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಅವರು ಹೇಳಿದರು.ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಉದ್ಘಾಟಿಸಿ ಮಾತನಾಡಿ, ಕೊಲೆ, ಕಳ್ಳತನ, ದರೋಡೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಹೊರತಾಗಿ ರಾಜ್ಯದಲ್ಲಿ ದಿನಸೀ ಪದಾರ್ಥಗಳು ಗಗನಕ್ಕೆ ಏರಿಕೆ ಯಾಗಿವೆ. ರಾಜ್ಯ ಮಹಿಳೆಯರು ಆಸೆ ಆಮಿಷಗಳಿಗೆ ಬಲಿಯಾಗದೆ ಬಿಜೆಪಿಯನ್ನು ಬೆಂಬಲಿಸಬೇಕು, ಬಿಜೆಪಿ ತತ್ವಸಿದ್ಧಾಂತಗಳನ್ನು ಮನೆಮನೆಗೆ ತಲುಪಿಸಲು ಮಹಿಳಾ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಮೇಘಾ ಜವಳಿ ಪಾರ್ಕ್, ಭಾರತ ಮಾಲಾ ರಸ್ತೆ, ವಂದೇ ಭಾರತ್ ಸೇರಿದಂತೆ ಎರಡು ಹೊಸ ರೈಲು, ನಿಲ್ದಾಣಗಳ ನವೀಕರಣ ಸೇರಿದಂತೆ ಸುಮಾರು 50 ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಇಂದು ಕಾಂಗ್ರೆಸ್‍ನವರಿಗೆ ಮೋದಿ ಅಭಿವೃದ್ಧಿ ಕಾಣುತ್ತಿಲ್ಲ, ಇಂದು ಜಗತ್ತು ಮೋದಿ ಬಗ್ಗೆ ಚಿಂತಿಸುತ್ತಿದ್ದರೆ, ಮೋದಿ ಇಡೀ ಜಗತ್ತಿನ ಬಗ್ಗೆ ಚಿಂತಿಸುತ್ತಿದ್ದಾರೆ. ಜವಳಿ ಪಾರ್ಕ್‌ನಿಂದ ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಕಲಬುರಗಿ ಜಿಲ್ಲೆಯೂ ಅಭಿವೃದ್ಧಿಯತ್ತ ಸಾಗುತ್ತಿದೆ. ನಿಮ್ಮ ಒಂದು ಓಟು ದೇಶದ ಚಿತ್ರಣ ಬದಲಿಸುತ್ತದೆ. ಮತದಾನ ಮಾಡುವುದು ಪುಣ್ಯಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಮಾಡಿದಂತೆ. ಪುಣ್ಯದ ಕೆಸಲ ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಿ ಕಲಬುರಗಿಯ ಅಭಿವೃದ್ಧಿಗೆ ಸಾಥ್ ನೀಡಿ ಎಂದು ಮನವಿ ಮಾಡಿದರು.ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಬಿಜೆಪಿ ಸರಕಾರದಿಂದ ಮಹಿಳೆಯರ ವಿಕಾಸ ಸಾಧ್ಯ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಮಾಡುವ ಮೂಲಕ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದಾರೆ. ಶಹಾಬಾದ, ಕಲಬುರಗಿ, ವಾಡಿ, ಭಾಗದ ರೈಲ್ವೆ ನಿಲ್ದಾಣದ ಅಭಿವೃದ್ಧಿಯ ಮೂಲಕ ಡಾ.ಉಮೇಶ ಜಾಧವ ಅವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ ಮಾತನಾಡಿದರು. ಶಶಿಕಲಾ ಟೆಂಗಳಿ, ಶೋಭಾ ಬಾಣಿ, ಜಯಶ್ರೀ ಮತ್ತಿಮಡು, ಜ್ಯೋತಿ ಶರ್ಮಾ, ಜ್ಯೋತಿ ಗುರುನಾಥ, ಜಯಶ್ರೀ ಸುಡಿ, ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ಪಾರ್ವತಿ ಪವಾರ, ರವಿ ರಾಠೋಡ, ಜಗದೇವ ಸುಬೇದಾರ, ವೇದಿಕೆಯಲ್ಲಿದ್ದರು. ಮಹಿಳಾ ಮೋರ್ಚಾ ಕಾರ್ಯಕರ್ತರು, ಪಕ್ಷದ ಪ್ರಮುಖರು ವಿವಿಧ ಮೋರ್ಚಾ ಮುಂಡರು. ನೂರಾರು ಮಹಿಳೆಯರು ಪಾಲ್ಗೊಂಡಿದರು.
ನೇಹಾಗೆ ಶ್ರದ್ಧಾಂಜಲಿ: ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಅವರು ಭಾಷಣದ ಮದ್ಯದಲ್ಲಿ ನೇಹಾ ಹತ್ಯೆ ಅತ್ಯಂತ ಪೈಶಾಚಿಕ ಕೃತ್ಯವಾಗಿದ್ದು , ರಾಜ್ಯದಲಿ ಮಹಿಳಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ನೇಹಾ ಹೆಸರಿನ ಕ್ರಾಂತಿಯ ಜ್ವಾಲೆ ರಾಜ್ಯಾದಂತ ಪಸರಿಸಬೇಕು ಎಂದು ಹೇಳಿ ಕಾರ್ಯಕ್ರಮದ ಮದ್ಯಲ್ಲಿ ನೇಹಾ ಆತ್ಮಕ್ಕೆ ಶಾಂತಿ ಸಿಗಲೇಂದು ನೇಹಾ ಭಾವಚಿತ್ರ ಹಿಡಿದು ಒಂದು ನಿಮಿಷ ಮೌನಾಚರಣೆ ಮಾಡಿದರು.