ಕಾಂಗ್ರೆಸ್ ಅಭ್ಯರ್ಥಿ ಗಡ್ಡದೇವರಮಠ ರೋಡ್ ಶೋ

KannadaprabhaNewsNetwork |  
Published : Apr 21, 2024, 02:21 AM IST
20 ರೋಣ 1 ರೋಣ ಪಟ್ಟಣದಲ್ಲಿ ಲಕ್ಷ್ಮೀ ಗುಡಿಯ ಆವರಣದಲ್ಲಿ ಮಹಿಳೆಯರು ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರ ಪಾದ ಪೂಜೆ ಗೈದು ಬೆಂಬಲ ವ್ಯಕ್ತಪಡಿಸಿದರು.20 ರೋಣ 1ಎ.ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಹಾಗೂ  ಶಾಸಕ ಜಿ.ಎಸ್.ಪಾಟೀಲ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. | Kannada Prabha

ಸಾರಾಂಶ

ಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಒಂದು ಕೋಟಿ ಹತ್ತು ಲಕ್ಷ ಕುಟುಂಬಗಳನ್ನು ಬಡತನದಿಂದ ಮೇಲೆ ತರಲಾಗಿದೆ

ರೋಣ: ಪಟ್ಟಣದ ವಿವಿಧ ವಾರ್ಡಗಳಲ್ಲಿ ಶನಿವಾರ ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದ್ದೇವರಮಠ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಇವರಿಗೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಸಾಥ್ ನೀಡಿದರು.

ಪಟ್ಟಣದ 1ನೇ ವಾರ್ಡನಿಂದ ಪ್ರಾರಂಭವಾದ ಮೆರವಣಿಗೆ ಸೂಡಿ ವೃತ್ತ, ಸಿದ್ದಾರೂಢ ಮಠ, ಪೋತರಾಜನ ಕಟ್ಟೆ, ಬಸ್‌ ನಿಲ್ದಾಣ, ನೀರಾವರಿ ಕಾಲನಿ, ಶಿವಾನಂದ ನಗರ, ಶ್ರೀ ನಗರ, ಕಲ್ಯಾಣ ನಗರ, ಶಿವಪೇಟೆ, ಕುರಬಗಳ್ಳಿ ಓಣಿ, ಗೌಡರ ಓಣಿ, ಮುದೇನಗುಡಿ ರಸ್ತೆ ಸೇರಿದಂತೆ ವಿವಿದೆಢೆ ರೋಡ್ ಶೋ ನಡೆಯಿತು.

1ನೇ ವಾರ್ಡ ಲಕ್ಷ್ಮೀ ದುಗಲದಲ್ಲಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಪುರಸಭೆ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ ಕುಟುಂಬ ಹಾಗೂ ಓಣಿಯ ಮಹಿಳೆಯರಿಂದ ಪಾದ ಪೂಜೆ ನೆರವೇರಿತು. ಈ ವೇಳೆ ಅಭ್ಯರ್ಥಿ ಆನಂದಸ್ವಾಮಿ ಭಾವುಕರಾಗಿ ಪಾದ ಪೂಜೆಗೈದ ಮಹಿಳೆಯರಲ್ಲಿ ಕೈ ಮುಗಿದು ಮತ ಭಿಕ್ಷೆ ನೀಡುವಂತೆ ವಿನಂತಿಸಿದರು.

ರೋಡ್ ಶೋ ಉದ್ದೇಶಿಸಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಒಂದು ಕೋಟಿ ಹತ್ತು ಲಕ್ಷ ಕುಟುಂಬಗಳನ್ನು ಬಡತನದಿಂದ ಮೇಲೆ ತರಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಸಾಧಿಸಲಿದ್ದಾರೆ ಎಂದರು.

ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಕಾಂಗ್ರೆಸ್ ಬಡವರ ಪರ ಇದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಗೃಹಲಕ್ಷ್ಮಿ ಜತೆಗೆ ಮಹಾಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ.ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಪಟ್ಟಣದ ಜನರಲ್ಲಿ‌ ಮನವಿ ಮಾಡಿದರು.

ಈ ವೇಳೆ ಐ.ಎಸ್. ಪಾಟೀಲ, ಸಿದ್ದಣ್ಣ ಬಂಡಿ, ಪರಶುರಾಮಪ್ಪ ಅಳಗವಾಡಿ, ವೀರಣ್ಣ ಶೆಟ್ಟರ್, ಬಾವಾಸಾಬ ಬೇಟಗೇರಿ, ಮುತ್ತಣ್ಣ ಸಂಗಳದ, ಅಕ್ಷಯ ಪಾಟೀಲ, ಮಿಥುನ ಪಾಟೀಲ, ವಿ.ಆರ್. ಗುಡಿಸಾಗರ, ಅವಿನಾಶ ಸಾಲಿಮನಿ, ನಾಜಬೇಗಂ ಯಲಿಗಾರ, ರವಿ ಸಂಗಮಶೆಟ್ಟರ್, ವಿದ್ಯಾ ದೊಡ್ಡಮನಿ, ಪ್ರಭು ಮೇಟಿ, ವೆಂಕಣ್ಣ ಬಂಗಾರಿ, ಗೋಪಿ ರಾಯನಗೌಡ್ರ, ಮಲ್ಲಯ್ಯ ಮಹಾಪುರುಷರಮಠ, ಮಲ್ಲು ರಾಯನಗೌಡ್ರ, ಅರ್ಜುನ ಕೊಪ್ಪಳ, ಶರಣು ಪೂಜಾರ, ಶಿವಕುಮಾರ ಹುಲ್ಲೂರ, ಯಲ್ಲಪ್ಪ ಕಿರೇಸೂರ, ಅಸ್ಲಾಂ ಕೊಪ್ಪಳ, ಹನಮಂತ ತಳ್ಳಿಕೇರಿ, ಮುತ್ತಣ್ಣ ಗಡಗಿ, ದಾವಲಸಾಬ ಬಾಡಿನ, ಈಶ್ವರ ಕಡಬಿನಕಟ್ಟಿ, ಅಜೀಜ ಯಲಿಗಾರ, ಆನಂದ ಚಗಳಿ, ಹನುಮಂತ ದಾಸಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ