ನವಲಗುಂದ:
ಪಟ್ಟಣದ ಪ್ರಮುಖ ಮಠಗಳಾದ ಗವಿಮಠ, ನಾಗಲಿಂಗಸ್ವಾಮಿಮಠ, ಪಂಚಗ್ರಹ ಹಿರೇಮಠ ಹಾಗೂ ಹಜರತ್ ಮಲಂಗಶಾವಲಿ ದರ್ಗಾಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಈ ವೇಳೆ ಲೋಕಸಭಾ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಈ ಭಾಗದ ಜೀವನಾಡಿ ಮಹದಾಯಿ ನಾಲಾ ಯೋಜನೆ ಜಾರಿಗೆ ತರುವುದು ನನ್ನ ಮೊದಲ ಆಯ್ಕೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎನ್.ಎಚ್. ಕೋನರೆಡ್ಡಿ ಅವರಿಗೆ ಆಶೀರ್ವದಿಸಿ ವಿಧಾನಸಭೆಗೆ ಕಳಿಸಿದ್ದೀರಿ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬಹುಮತದೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಈ ಬಾರಿ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಚ್ಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.