ಕೆರೆಗಳ ತುಂಬಿಸುವ ಯೋಜನೆ ಕಾಂಗ್ರೆಸ್ ಕೊಡುಗೆ

KannadaprabhaNewsNetwork |  
Published : Apr 25, 2024, 01:05 AM IST
ಕ್ಯಾಪ್ಷನಃ24ಕೆಡಿವಿಜಿ49ಃಹರಪನಹಳ್ಳಿ ತಾ. ಜಗಳೂರಿನ ಅರಸಿಕೆರೆ ಹೋಬಳಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಚುನಾವಣಾ ಪ್ರಚಾರ ನಡೆಸಿದರು. ......ಕ್ಯಾಪ್ಷನಃ24ಕೆಡಿವಿಜಿ50ಃದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಬ್ಬಾಳು ವಿರಕ್ತಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಠದ ಭಕ್ತರುಗಳು ಇದ್ದರು. | Kannada Prabha

ಸಾರಾಂಶ

ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಹರಪನಹಳ್ಳಿ, ಜಗಳೂರು ಕ್ಷೇತ್ರಗಳು ಕೈ ಭದ್ರಕೋಟೆಗಳು: ಎಸ್‌ಎಸ್‌ಎಂ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹರಪನಹಳ್ಳಿ ಹಾಗೂ ಜಗಳೂರು ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಭದ್ರ ಕೋಟೆಗಳು, ಈ ಭಾಗದ 57 ಹಾಗೂ 22 ಕೆರೆಗಳಿಗೆ ನೀರು ತುಂಬಿರುವ ಯೋಜನೆಗೆ ಕೈ ಹಾಕಿದ್ದು ಕಾಂಗ್ರೆಸ್ ಪಕ್ಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಅರಸಿಕೆರೆ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಪರ ಮತಯಾಚನೆ ನಡೆಸಿ ಅವರು ಮಾತನಾಡಿದರು. ನಾವಿಲ್ಲಿ ಬಂದು ಮತವನ್ನು ಸುಮ್ಮನೆ ಕೇಳುತ್ತಿಲ್ಲ. ನಿಮ್ಮ ನಿರಿಕ್ಷೇಗಳಿಗೂ ಮೀರಿ ಕೆಲಸ ಮಾಡಿದ್ದೇವೆ ಹೀಗಾಗಿ, ನಾವು ಮತವನ್ನು ಕೇಳುತ್ತಿದ್ದೇವೆ. ಈ ಭಾಗಗಲ್ಲಿ ಕುಡಿಯುವ ನೀರು, ನಿರುದ್ಯೋಗ ಸಮಸ್ಯೆ ಇವೆ. ರೈತರಿಗಾಗಿ ಉತ್ತಮ ಕಾರ್ಯಗಳಾಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸಿ ಎಂದರು.

ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ದೇವೇಂದ್ರಪ್ಪ, ಹರಪನಹಳ್ಳಿಯ ಕಾಂಗ್ರೆಸ್ ಪಕ್ಷದ ಮುಖಂಡ ಅರಸಿಕೆರೆ ಕೊಟ್ರೇಶ್, ಯುವ ಮುಖಂಡ ಪಿ.ಟಿ.ಭರತ್, ಜಗಳೂರಿನ ಕೆ.ಪಿ.ಪಾಲಯ್ಯ, ಡಿ.ಬಸವರಾಜ್, ಅಣಜಿಗೆರೆ ಚಂದ್ರಪ್ಪ, ಡಾ.ಟಿ.ಜಿ.ರವಿಕುಮಾರ್, ಕಂಬತ್ತಳ್ಳಿ ಮಂಜುನಾಥ್, ಕಲ್ಲೇಶ್‌ರಾಜ್ ಪಾಟೀಲ್ ಮುಂತಾದವರು ಇದ್ದರು.

ಹೆಬ್ಬಾಳು ಶ್ರೀ ಆಶೀರ್ವಾದ:

ಸಚಿವ ಮಲ್ಲಿಕಾರ್ಜುನ್ ಬುಧವಾರ ಹೆಬ್ಬಾಳು ವಿರಕ್ತ ಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಮುಖಂಡರು, ಕಾರ್ಯಕರ್ತರುಗಳು, ಭಕ್ತರು ಇದ್ದರು.

- - - -24ಕೆಡಿವಿಜಿ49ಃ: ಅರಸಿಕೆರೆ ಹೋಬಳಿಯಲ್ಲಿ ಡಾ.ಪ್ರಭಾ ಪರವಾಗಿ ಸಚಿವ ಮಲ್ಲಿಕಾರ್ಜುನ್ ಪ್ರಚಾರ ನಡೆಸಿದರು. -24ಕೆಡಿವಿಜಿ50ಃ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಬ್ಬಾಳು ವಿರಕ್ತ ಮಠಕ್ಕೆ ಭೇಟಿ ನೀಡಿ, ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ