
ಕನ್ನಡಪ್ರಭ ವಾರ್ತೆ ವಿಜಯಪುರ
ಈ ಹಿಂದೆ ರೋಜಗಾರ್ ಯೋಜನೆಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಹೆಸರುಗಳನ್ನು ಕಾಂಗ್ರೆಸ್ ಬದಲಾವಣೆ ಮಾಡಿದೆ. 1989ರಲ್ಲಿ ಜವಾಹರ್ ಲಾಲ್ ನೆಹರೂ ರೋಜಗಾರ್ ಯೋಜನೆಯನ್ನು ಮುಂದೆ 1999ರಲ್ಲಿ ಸಂಪೂರ್ಣ ರೋಜಗಾರ್ ಯೋಜನೆ, ನಂತರ ನರೇಗಾ ಹೀಗೆ ಅನೇಕ ಬಾರಿ ಬದಲಾವಣೆ ಮಾಡಿದೆ. ಆದರೆ ಇದನ್ನು ಸಂಪೂರ್ಣವಾಗಿ ಕಾಂಗ್ರೆಸ್ ನೆನಪು ಹಾರಿದಂತೆ ತೋರುತ್ತಿದೆ. ಈ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವೂ ಪರಿಜ್ಞಾನವೇ ಇಲ್ಲ ಎಂದರು. ನರೇಗಾ ಯೋಜನೆ ಪಾರದರ್ಶಕವಾಗಿ ಅನುಷ್ಠಾನಗೊಳಿಸುವ ಕಾಳಜಿಯಿಂದಾಗಿ ಈ ಯೋಜನೆಗೆ ಮಾರ್ಪಾಡು ಮಾಡಿದೆ. ಈ ಹಿಂದೆ ರಾಜ್ಯ ಸರ್ಕಾರಗಳು ಶೇ.40ರಷ್ಟು ಅನುದಾನ ನೀಡಬೇಕಿತ್ತು, ಆದರೆ ರಾಜ್ಯ ಸರ್ಕಾರ ಇದಕ್ಕೆ ಅನುದಾನ ನೀಡುತ್ತಿರಲಿಲ್ಲ, ಈ ವಿಷಯದಲ್ಲಿ ಸ್ಪಷ್ಟತೆ ತರಲು ಮಾರ್ಪಾಡು ಮಾಡಿದೆ, ಈಗ ರಾಜ್ಯ ಸರ್ಕಾರಕ್ಕೆ ಇದರಿಂದ ಬಿಸಿ ತಟ್ಟಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.
ಕಾಂಗ್ರೆಸ್‌ನವರು ರಾಜಕೀಯವಾಗಿ ಈ ಯೋಜನೆ ಬಗ್ಗೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್‌ನ ಪ್ರಯತ್ನ ಮಣ್ಣು ಪಾಲಾಗಲಿದೆ. ಈ ಹಿಂದೆ ವೋಟ್ ಚೋರಿ ಆರೋಪ ಮಾಡಿ ಚಳವಳಿ ಮಾಡಿದರು. ಆದರೆ ಜನರು ಅವರನ್ನು ತಿರಸ್ಕರಿಸಿದ್ದಾರೆ. ಎಷ್ಟೇ ಚಳವಳಿ ಮಾಡಿದರೂ ಸಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ಜನಪ್ರಿಯತೆ ಕುಂದು ತರುವುದು ಕಾಂಗ್ರೆಸ್‌ಗೆ ಸಾಧ್ಯವಾಗುವುದಿಲ್ಲ, ಬದಲಾಗಿ ಜನಪ್ರಿಯತೆ ಅಧಿಕವಾಗುತ್ತದೆ ಎಂದು ಹೇಳಿದ್ದಾರೆ.ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಈ ಯೋಜನೆ ಚಟುವಟಿಕೆಗಳು ಇರುವುದಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ಈ ಮೊದಲು ನರೇಗಾ ಯೋಜನೆಯಡಿ 100 ದಿನನಗಳ ಉದ್ಯೋಗ ಸೃಜನೆ ಇತ್ತು, ಇದನ್ನು 125 ದಿನಗಳಿಗೆ ಏರಿಕೆ ಮಾಡಲಾಗಿದೆ. ಅದೇ ತೆರನಾಗಿ ಪ್ರತಿ ದಿವಸ ₹350 ಕೂಲಿಯನ್ನು ₹375ಕ್ಕೆ ಏರಿಕೆ ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.