ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ: ಪ್ರಹ್ಲಾದ ಜೋಶಿ

KannadaprabhaNewsNetwork |  
Published : May 25, 2024, 12:49 AM IST
ಫೋಟುಃ-24 ಜಿಎನ್ ಜಿ1-ಗಂಗಾವತಿ ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ  ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನು  ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಈ ಬಾರಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋಲುತ್ತಾರೆ. ಕಾಂಗ್ರೆಸ್ ನಾಯಕರೆ ಸೋಲಿಸುತ್ತಾರೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಗಂಗಾವತಿ: ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಮತ್ತು ಈ ಹಿಂದೆ ಆಡಳಿತ ನಡೆಸಿದ ಅಟಲ್ ಬಿಹಾರಿ ವಾಜಿಪೇಯಿ ಅವರು ಬಲಿಷ್ಠ ಪ್ರಧಾನಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಈಶಾನ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋಲುತ್ತಾರೆ. ಕಾಂಗ್ರೆಸ್ ನಾಯಕರೆ ಸೋಲಿಸುತ್ತಾರೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಹೇಗೆ ಆಡಳಿತ ನಡೆಸುತ್ತದೆ? ದೇಶದಲ್ಲಿ ನರೇಂದ್ರ ಮೋದಿ ಮತ್ತು ಅಟಲ್‌ ಬಿಹಾರಿ ವಾಜಿಪೇಯಿ ಉತ್ತಮ ಆಡಳಿತ ನೀಡಿದರು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿರುವುದೇ ಇದಕ್ಕೆ ನಿದರ್ಶನ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ, ಅದು ಸಂಪೂರ್ಣ ವಿಫಲವಾಗಿದೆ. ಮಳೆ ಬಂದರೆ ಬಸ್‌ಗಳು ಸೋರುತ್ತವೆ. ಇಂತಹದರಲ್ಲಿ ಉಚಿತ ಬಸ್ ಪ್ರಯಾಣ ಬೇಕೆ? ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಮರನಾಥ ಪಾಟೀಲ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ನರೇಂದ್ರ ಮೋದಿ ಆದರ್ಶ, ಮಾರ್ಗದರ್ಶನದಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ. ಎಲ್ಲರೂ ಅಮರನಾಥ ಪಾಟೀಲ್‌ ಅವರನ್ನು ಬೆಂಬಲಿಸಬೇಕು ಎಂದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ್ ದಢೇಸೂಗೂರು ಮಾತನಾಡಿ, ಪದವೀಧರರು ಬುದ್ಧಿವಂತರು. ಅಭಿವೃದ್ಧಿ ಕೆಲಸ ಮಾಡುವರಿಗೆ ಬೆಂಬಲಿಸಬೇಕು ಎಂದರು.

ಎಂಎಲ್‌ಸಿ ರವಿಕುಮಾರ, ಹೇಮಲತಾ ನಾಯಕ, ಮಾಜಿ ಶಾಸಕ ಜಿ. ವೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್, ಗಿರೇಗೌಡ, ವಿರೂಪಾಕ್ಷಪ್ಪ ಸಿಂಗನಾಳ, ನೆಕ್ಕಂಟಿ ಸೂರಿಬಾಬು, ಡಾ. ಬಸವರಾಜ್, ಎಚ್.ಎಂ. ಸಿದ್ದರಾಮಸ್ವಾಮಿ, ಚಂದ್ರಶೇಖರ ಹಲಗೇರಿ, ಜೋಗದ ಹನುಮಂತಪ್ಪನಾಯಕ, ಜಿ. ಶ್ರೀಧರ, ಚೆನ್ನಪ್ಪ ಮಳಗಿ, ಮನೋಹರಗೌಡ, ನರಸಿಂಗರಾವ್ ಕುಲಕರ್ಣಿ, ವಿರೂಪಾಕ್ಷಗೌಡ ಹೇರೂರು, ಕಾಶೀನಾಥ ಚಿತ್ರಗಾರ, ಶ್ರೀನಿವಾಸ ಧೂಳ್, ವಾಸು ನವಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು