ಸಂವಿಧಾನವನ್ನು ಶಾಸನಬದ್ಧವಾಗಿ ಜಾರಿಗೆ ತಂದಿದ್ದು ಕಾಂಗ್ರೆಸ್: ಸಂತೋಷ್ ಲಾಡ್

KannadaprabhaNewsNetwork | Published : Apr 7, 2025 12:34 AM

ಸಾರಾಂಶ

ಕೊಪ್ಪ, ನೆಗೆಟಿವ್ ಹೇಳಿಕೆ ನೀಡಿದರೆ ಮಾಧ್ಯಮದಲ್ಲಿ ಏನೋ ಸಿಗುತ್ತದೆ. ಮೈಲೇಜ್ ಬರುತ್ತದೆ ಅನ್ನುವ ಕಾರಣಕ್ಕಾಗಿ ಬಿಜೆಪಿಯವರು ಗಾಂಧೀಜಿಯವರ ಬಗ್ಗೆ ಟೀಕೆ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ನಮ್ಮ ಯುವ ಮುಖಂಡರು ಇತಿಹಾಸದ ಪುಸ್ತಕವನ್ನು ಓದಿ ಸರಿಯಾಗಿ ಉತ್ತರಗಳನ್ನು ನೀಡಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು

ಕೊಪ್ಪ ಬ್ಲಾಕ್ ಕಾಂಗ್ರೆಸ್ ನಿಂದ ಭಾನುವಾರ ಕೊಪ್ಪ ಪುರಭವನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮ್ಮಿಲನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕೊಪ್ಪ

ನೆಗೆಟಿವ್ ಹೇಳಿಕೆ ನೀಡಿದರೆ ಮಾಧ್ಯಮದಲ್ಲಿ ಏನೋ ಸಿಗುತ್ತದೆ. ಮೈಲೇಜ್ ಬರುತ್ತದೆ ಅನ್ನುವ ಕಾರಣಕ್ಕಾಗಿ ಬಿಜೆಪಿಯವರು ಗಾಂಧೀಜಿಯವರ ಬಗ್ಗೆ ಟೀಕೆ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ನಮ್ಮ ಯುವ ಮುಖಂಡರು ಇತಿಹಾಸದ ಪುಸ್ತಕವನ್ನು ಓದಿ ಸರಿಯಾಗಿ ಉತ್ತರಗಳನ್ನು ನೀಡಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಕೊಪ್ಪ ಬ್ಲಾಕ್ ಕಾಂಗ್ರೆಸ್ ನಿಂದ ಭಾನುವಾರ ಕೊಪ್ಪ ಪುರಭವನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್‌ ಕೇವಲ ಎಸ್.ಸಿ, ಎಸ್.ಟಿ.ಯವರಿಗೆ ಮಾತ್ರ ಮೀಸಲಾತಿ ತಂದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ ಎಲ್ಲರಿಗೂ ನೀಡಿರುವ ವಿದ್ಯಾಭ್ಯಾಸ ಶಾಸನ ಬದ್ಧವಾದ ಹಕ್ಕುಗಳನ್ನು ನೀವು ಬಳಸಿಕೊಳ್ಳಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಮಾಡಿಕೊಟ್ಟಿದ್ದಾರೆ. ಅಂಬೇಡ್ಕರ್ ಹಾಗೂ ಬಸವಣ್ಣನವರ ವಿಚಾರಗಳನ್ನು ಶಾಸನಬದ್ಧವಾಗಿ ಜಾರಿಗೆ ತಂದಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು.

ಬಿಜೆಪಿಯವರು ನೆಹರು ಅವರಿಂದ ದೇಶ ಒಡೆದು ಹೋಯಿತು, ಪಾಕಿಸ್ತಾನ ಆಯಿತು ಎಂದು ನೆಹರು ಅವರನ್ನು ಬೈಯ್ಯುತ್ತಾರೆ. ಪಾಕಿಸ್ತಾನದಲ್ಲಿ ೨೫ ಕೋಟಿ ಮುಸ್ಲೀಮರಿದ್ದಾರೆ. ಇಂಡಿಯಾ ಪಾಕಿಸ್ತಾನ ಬೇರೆಯಾಗದೆ ಇದ್ದಿದ್ದರೆ ಅವರೆಲ್ಲ ಇಲ್ಲೇ ಇರುತ್ತಿದ್ದರು. ಆಗ ಇವರ ಭಾಷಣ ಹೇಗಿರುತ್ತಿತ್ತು. ಸಲಾವುಲಿಲ್ಲಾ... ಹಲಾವುಲಿಲ್ಲ ಅಂತಾ ಇವರೇ ಉರ್ದು ಭಾಷಣ ಮಾತನಾಡುತ್ತಿದ್ದರು. ಹಿಂದೂ ಧರ್ಮದ ಪ್ರಕಾರ ಅಯೋಧ್ಯೆಯಲ್ಲಿ ಬ್ರಾಹ್ಮಣರೇ ಶ್ರೀರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಬೇಕಿತ್ತು. ಆದರೆ ರಾಮಮಂದಿರದಲ್ಲಿ ನಮ್ಮ ಪ್ರಧಾನಿಯವರೇ ೭ ದಿನ ಪೂಜೆ ಮಾಡಿ ಶ್ರೀರಾಮನಿಗೆ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ಬಿಜೆಪಿಯವರು ರಾಜಕೀಯವಾಗಿ ಹಿಂದುತ್ವ ಪ್ರತಿಪಾದಿಸುತ್ತಾರೆ ಎಂದರು.ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ ಬೆಳಗಾವಿ ಅಧಿವೇಶನಕ್ಕೆ ೧೦೦ ವರ್ಷಗಳ ಈ ಸಂದರ್ಭದಲ್ಲಿ ಈ ವರ್ಷ ಪೂರ್ತಿ ಈ ಕಾರ್ಯಕ್ರಮ ಆಚರಣೆ ಮಾಡಲು ಕೆಪಿಸಿಸಿ ತೀರ್ಮಾನಿಸಿರುತ್ತದೆ. ಇದು ಕಾಂಗ್ರೆಸ್ ಪಕ್ಷವನ್ನು ಸಿದ್ದಾಂತದ ಮೂಲಕ ಕಟ್ಟುವ ತೀರ್ಮಾನವಾಗಿದೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಭಾರತ ಜಾತ್ಯಾತೀಯ ರಾಷ್ಟ್ರ. ಹಿಂದೂ, ಕ್ರೈಸ್ತ ಮುಸ್ಲಿಂ ಎಲ್ಲಾ ಜನಾಂಗದವರು ಈ ದೇಶದಲ್ಲಿ ಇದ್ದಾರೆ. ರಾಜ್ಯದ ರಾಜಕರಣದಲ್ಲಿ ಬಿಜೆಪಿಯವರಿಗೆ ಸುಳ್ಳು ಹೇಳುವವರಿಗೆ, ಸತ್ಯ ತಿರುಚಿ ಮಾತನಾಡು ವವರಿಗೆ ನೇರವಾಗಿ ಉತ್ತರ ನೀಡುವುದಕ್ಕೆ ಸಂತೋಷ್ ಲಾಡ್‌ ಸಮರ್ಥರಾಗಿದ್ದಾರೆ ಎಂದರು.ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ಗಾಂಧಿ ಕಾರ್ಯಕ್ರಮ ಮಾಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ. ಸಂವಿಧಾನವನ್ನು ಬದಲಾಯಿಸಬೇಕು ಎನ್ನುವ ಸಮಯದಲ್ಲಿ ಕಾಂಗ್ರೆಸ್ ಮಾತ್ರ ಸಂವಿಧಾನವನ್ನು ಬಲವಾಗಿ ಪ್ರತಿಪಾದಿಸುತ್ತದೆ. ವಕ್ಪ್ ತಿದ್ದುಪಡಿಯನ್ನು ಕಾಂಗ್ರೆಸ್ ಲೋಕಸಭೆಯಲ್ಲಿಯೂ ಸಹ ವಿರೋಧ ಮಾಡಿದೆ. ಕಾಂಗ್ರೆಸ್ ಯಾವಾಗಲೂ ರೈತ ಮತ್ತು ಕಾರ್ಮಿಕರ ಪರ ಇರುತ್ತದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ ಮಹಾತ್ಮಾಗಾಂಧಿ ದೇಶಕ್ಕೆ ನಾಯಕತ್ವ ಕೊಟ್ಟ ನಂತರ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿದೆ. ಇಂದು ಭಾರತ ಅಂದರೆ ಗಾಂಧಿ, ಗಾಂಧಿ ಅಂದರೆ ಭಾರತ ಎಂದು ಪ್ರಪಂಚಕ್ಕೆ ಗೊತ್ತಿರುವ ವಿಚಾರವಾಗಿದೆ ಎಂದರು.ಕಾಂಗ್ರೆಸ್‌ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

--

ಗುಡಿಗಳಲ್ಲಿ ಪೂಜೆ ಸಲ್ಲಿಸಲು ಹಿಂದುಳಿದವರಿಗೆ ಅವಕಾಶ ನೀಡಬೇಕು: ಸಚಿವ ಸಂತೋಷ್‌ ಲಾಡ್‌

ಕನ್ನಡಪ್ರಭ ವಾರ್ತೆ, ಕೊಪ್ಪಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ತಾವು ಹಿಂದುಳಿದ ವರ್ಗದವರು ಎಂದು ಹೇಳಿದ್ದಾರೆ. ಅವರು ಪೂಜೆ ಮಾಡಿದ್ದಾರೆಂದರೇ ಗುಡಿ ಗೋಪುರಗಳ ಪೂಜೆ ಮಾಡಲು ಹಿಂದುಳಿದವರಿಗೆ ಅವಕಾಶ ನೀಡಬೇಕು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಪ್ಪ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ಹಿಂದೂ ಸಂಪ್ರದಾಯದಂತೆ ಬ್ರಾಹ್ಮಣ ವರ್ಗದವರು ಪೂಜೆ ಮಾಡಬೇಕು, ಆದರೆ, ಮೋದಿಯವರು ಮಾಡಿದ್ದು ಸರಿಯೋ ತಪ್ಪೋ ಎಂದು ಹೇಳಿದರು.ಏಳು ದಿನ ಅವರೇ ಪೂಜೆ ಮಾಡಿದ್ರು, ಮೂರ್ತಿ ಹಾಗೂ ಪ್ರಾಣ ಪ್ರತಿಷ್ಟಾಪನೆ ಕೂಡ ಮಾಡಿದ್ರು, ಇನ್ನು ಮುಂದೆ ಎಲ್ಲಾ ಕಡೆ ಹೇಳಿ ಮೋದಿ ಸಾಹೇಬರು ಮಾಡಿದ್ದನ್ನೇ ಅಭ್ಯಾಸ ಮಾಡಬೇಕು. ಇನ್ನೂ ಎಲ್ಲಾ ಶೋಷಿತ ವರ್ಗ, ಓಬಿಸಿ ವರ್ಗಗಳಿಗೆ ಗುಡಿಗಳನ್ನ ಬಿಟ್ಟು ಕೊಡಬೇಕು. ನಾವು ಪೂಜೆ ಮಾಡ್ತೀವಿ, ಏಕೆ ಮಾಡಬಾರದು ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಸಾಹೇಬ್ರು ನಮ್ಮ ದೇವರನ್ನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ರು ಒಂದು ಪರಂಪರೆಯನ್ನು ಅವರು ಪ್ರಾರಂಭ ಮಾಡಿದ್ದಾರೆ. ಓಬಿಸಿ ಎಂದು ಮೋದಿ ಅವರೇ ಹೇಳಿ ಕೊಳ್ಳೋದು ಎಲ್ಲ ಓಬಿಸಿ ವರ್ಗ, ಶೋಷಿತ ವರ್ಗಗಳಿಗೆ ಎಲ್ಲ ಪೂಜೆ ಗಳನ್ನು ಮಾಡಲು ಅವಕಾಶ ನೀಡಿ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಆರ್ಥಿಕ ಪರಿಸ್ಥಿತಿ ಕುಸಿತ:1947 ರಿಂದ 2014 ರವರೆಗೆ ₹57 ಕೋಟಿಯಷ್ಟಿದ ಭಾರತದ ಸಾಲ 2025ರ ವೇಳೆಗೆ ₹210 ಲಕ್ಷ ಕೋಟಿ ಗೂ ಹೆಚ್ಚಿದೆ. ಈ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಸುಮಾರು ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದ ಸಚಿವರು, ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಮೇಕು ಇಲ್ಲ ಇಂಡಿಯಾನು ಇಲ್ಲ ಎಂದರು.2014 ರಲ್ಲಿ 50 ಬಿಲಿಯನ್ ಡಾಲರ್ ನಮ್ಮ ವಹಿವಾಟು ಇದ್ದರೆ, ಈಗ ₹120 ಬಿಲಿಯನ್ ಡಾಲರ್ ಆಗಿದೆ. ಇದನ್ನು ಕಾಂಗ್ರೆಸ್‌ ನವರು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮದವರು ಇಡೀ ದಿನ ಅವರನ್ನೇ ಬಿಜೆಪಿಯವರನ್ನೇ ತೋರಿಸ್ತಾರೆ ಹೊರತು ಇಂತಹ ಸೂಕ್ಷ್ಮ ವಿಚಾರ ತೋರಿಸುವುದಿಲ್ಲ. ಮಾಧ್ಯಮದವರೇ ಕೇಳಿಸಿಕೊಳ್ಳಿ ಇದು ಬಿಜೆಪಿ, ಕಾಂಗ್ರೆಸ್ ದೇಶವಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದ ದೇಶವಲ್ಲ. ಇದು ಎಲ್ಲರ ದೇಶ ಎಂದು ಹೇಳಿದರು.

Share this article