ಕನ್ನಡಪ್ರಭ ವಾರ್ತೆ ಜಮಖಂಡಿ
ಕನ್ನಡಪ್ರಭ ಜೊತೆಗೆ ಮಾತನಾಡಿದ ಅವರು, ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆಸ್ತಿ ಕಬಳಿಸಿ ಮತ್ತೊಬ್ಬರಿಗೆ ಹಂಚುವ ತಂತ್ರ ಇದಾಗಿದೆ, ತಂದೆಯ ಆಸ್ತಿ ನೇರ ವಾರಸುದಾರರಾದ ಮಕ್ಕಳಿಗೆ ದೊರೆಯುತ್ತದೆ ಈ ಬಗ್ಗೆ ಸಂವಿಧಾನದಲ್ಲಿ ಸೂಕ್ತವಾದ ನಿರ್ದೇಶನವಿದೆ ಆದರೆ ಈ ಆಸ್ತಿಗೆ ತೆರಿಗೆ ವಿಧಿಸುವ ಯೋಚನೆ ಮೂರ್ಖತನದಿಂದ ಕೂಡಿದೆ. ಪ್ರಜಾತಂತ್ರ ವಿರೋಧಿಯಾಗಿದೆ ಎಂದು ದೂರಿದರು.
ಅನೆರಿಕಾ ದೇಶದ ಜನಸಂಖ್ಯೆ, ಅಲ್ಲಿಯ ರೈತರ ಆಸ್ತಿ ಮತು ರೈತರ ಸ್ಥಿತಿ ಈ ಎಲ್ಲ ಲೆಕ್ಕಾಚಾರದ ಮೇಲೆ ಅಲ್ಲಿಯ ಸರ್ಕಾರ ಆರೀತಿಯ ತೆರಿಗೆಗಳನ್ನು ಜಾರಿಗೊಳಿಸಿರಬಹುದು, ಆದರೆ ಇದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಸೂಕ್ತವಲ್ಲ ಎಂದರು.ಕಾಂಗ್ರೆಸ್ ಈ ಹಿಂದಿನಿಂಲೂ ಇಂತಹ ಜನ ವಿರೋಧಿ ನೀತಿ ಜಾರಿಗೊಳಿಸುವ ಹುನ್ನಾರ ನಡೆಸುತ್ತಲೇ ಬಂದಿದೆ. ನೆಹರು ಅವರ ಕಾಲದಲ್ಲಿಯೂ ಇಂತಹ ಕಾನೂನು ಇತ್ತು. ಇಂತಹ ಚಿಂತನೆಗಳಿಂದ ದೇಶದಲ್ಲಿ ಕ್ರಾಂತಿಯೇ ಆಗುತ್ತದೆ. ಕಾಂಗ್ರೆಸ್‌ನ ಅಸಲಿ ಮುಖ ಈ ಹೇಳಿಕೆಯಿಂದ ಬಯಲಾಗಿದೆ ಎಂದಿ ತಿಳಿಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಜನರಿಗೆ ಮೋಸಮಾಡಲು ಮುಂದಾಗಿದೆ, ಮತದಾರ ಜಾಗೃತನಾಗಿದ್ದು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ದೇಶದ ಪ್ರಜ್ಞಾವಂತ ಮತದಾರ ಚುನವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಬೆಂಬಲಿಸುವ ಮೂಲಕ ಸೂಕ್ತ ಉತ್ತರ ನೀಡಲಿದ್ದಾನೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅಭಿಪ್ರಾಯ ಪಟ್ಟರು.