ಅಬ್ ಕೀ ಬಾರ್‌ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ: ಗಡ್ಡದೇವಮಠ

KannadaprabhaNewsNetwork |  
Published : Apr 15, 2024, 01:16 AM ISTUpdated : Apr 15, 2024, 02:18 PM IST
14ಜಿಡಿಜಿ11 | Kannada Prabha

ಸಾರಾಂಶ

ಹತ್ತು ವರ್ಷಗಳ ಕಾಲ ಬಿಜೆಪಿಯ ದುರಾಡಳಿತ ನೋಡಿರುವ ಜನರು ಈ ಸಲ ಕಾಂಗ್ರೆಸ್‌ಗೆ ಅಧಿಕಾರ ನೀಡಲು ತೀರ್ಮಾನಿಸಿದ್ದಾರೆ

ಡಂಬಳ: ಅಬ್‌ ಕೀ ಬಾರ್‌ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ, ಇದನ್ನು ಹೇಳುತ್ತಿರುವುದು ಬೇರೆ ಯಾರೂ ಅಲ್ಲ. ತಾವು ಪ್ರಚಾರಕ್ಕೆ ಹೋದ ಪ್ರತಿ ಗ್ರಾಮದಲ್ಲೂ ಜನರೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಹಾವೇರಿ-ಗದಗ ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ರೋಣ ವಿಧಾನಸಭಾ ಕ್ಷೇತ್ರದ ಹರ್ಲಾಪುರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ದೇಶಾದ್ಯಂತ ಈಗ ಕಾಂಗ್ರೆಸ್ ಪರ ಅಲೆ ಕಂಡು ಬರುತ್ತಿದೆ. ಈ ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ನೀಡಿರುವ ಅತ್ಯುತ್ತಮ ಯೋಜನೆಗಳೇ ಇದಕ್ಕೆ ಕಾರಣ. ಹತ್ತು ವರ್ಷಗಳ ಕಾಲ ಬಿಜೆಪಿಯ ದುರಾಡಳಿತ ನೋಡಿರುವ ಜನರು ಈ ಸಲ ಕಾಂಗ್ರೆಸ್‌ಗೆ ಅಧಿಕಾರ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಶಾಸಕ ಜಿ.ಎಸ್. ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಈಶ್ವರ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಮಾತನಾಡಿದರು.

ತಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗ್ರಾಪಂ ಅಧ್ಯಕ್ಷೆ ರೇಣುಕಾ ವಡ್ಡರ, ಉಪಾಧ್ಯಕ್ಷ ಅಡಿವೆಪ್ಪ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಕೆ.ಕೆ. ಪಾಟೀಲ, ಫಕ್ಕೀರಪ್ಪ ಹುಲಗೂರ, ನಿರ್ಮಲವ್ವ ಕೋತಪ್ಪನವರ, ಸುಮಂಗಲಾ ಚಟ್ರಿ, ವೀಣಾ ಕಾತರಕಿ, ಶರಣಪ್ಪಗೌಡ ಪಾಟೀಲ, ಬಾಬುರಡ್ಡಿ ಕೊಣ್ಣೂರ, ಗೋವಿಂದರಡ್ಡಿ ಕೊಣ್ಣೂರ, ಡಾ. ಕುಮಾರ ಸರ್ವಿ, ಕೆ.ಜಿ. ಕಟ್ಟಿಮನಿ, ಸೋಮಯ್ಯ ಬಾಲಬಸವರ, ಕೊಟ್ರಯ್ಯ ಮ್ಯಾಗೇರಿ, ಮಾರುತಿ ಕೊಣ್ಣೂರ, ಎನ್.ಎಂ. ಹಳ್ಳಿ, ಬುಡ್ನೇಸಾಬ ಘಟ್ಟದ, ಹುನುಮಪ್ಪ ತಾಕಲಕೋಟಿ, ತಿಮ್ಮಾಪುರ ಗ್ರಾಮದ ಯಲ್ಲಪ್ಪ ಬಾಬರಿ, ಭೀಮಪ್ಪ ರಾಮಜಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!