ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Jun 09, 2025, 12:02 AM IST
ಫೋಟೊ: 7ಎಚ್‌ಎನ್‌ಎಲ್1 | Kannada Prabha

ಸಾರಾಂಶ

ವಲಸೆ ತಡೆದು ಸ್ಥಳೀಯವಾಗಿ ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು.

ಹಾನಗಲ್ಲ: ಗ್ರಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಶ್ರಮ ವಹಿಸಿದೆ. ಆಡಳಿತ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ನರೇಗಲ್ ಗ್ರಾಮದಲ್ಲಿ ₹42 ಲಕ್ಷ ವೆಚ್ಚದಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ವಲಸೆ ತಡೆದು ಸ್ಥಳೀಯವಾಗಿ ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಯ ಜಾರಿಯಿಂದ ದುಡಿಯುವ ಕೈಗಳಿಗೂ ಕೆಲಸ ಸಿಗುತ್ತಿದೆ. ಗ್ರಾಮೀಣಾಭಿವೃದ್ಧಿಯ ಕನಸೂ ನನಸಾಗುತ್ತಿದೆ ಎಂದು ಹೇಳಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಲಭ್ಯವಿದೆ. ಸಮುದಾಯದ ಸಹಭಾಗಿತ್ವದೊಂದಿಗೆ ಅನುದಾನ ಸದ್ಭಳಕೆ ಮಾಡಿಕೊಂಡರೆ ಗ್ರಾಮವೂ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಮಹ್ಮದಜಾಫರ್ ಮುಲ್ಲಾ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಸಣ್ಣಪ್ಪನವರ, ಸದಸ್ಯರಾದ ಹುಸೇನಮಿಯಾ ಸವಣೂರ, ಬಾಷಾಸಾಬ್ ಗೌಂಡಿ, ಈರಪ್ಪ ಬೂದಿಹಾಳ, ಫಕ್ಕೀರಪ್ಪ ಅಗಸಿಬಾಗಿಲ, ಇಂದ್ರವ್ವ ಹರಿಜನ, ದಾಕ್ಷಾಯಿಣವ್ವ ಪರಪ್ಪನವರ, ರಮಿಜಾ ಹುಲಿ, ಗಾಯಿತ್ರಿ ಮರಿಲಿಂಗಣ್ಣನವರ, ಫಾತಿಮಾ ನರೇಗಲ್, ಮುಖಂಡರಾದ ಕಲವೀರಪ್ಪ ಪವಾಡಿ, ಎಂ.ಎ. ನೆಗಳೂರ, ಚಮನಸಾಬ ಪಠಾಣ, ಮಹಬಳೇಶ್ವರ ಸವಣೂರ, ಶಾಂತಪ್ಪ ಶೀಲವಂತರ, ಸುರೇಶ ತಹಶೀಲ್ದಾರ್, ಸುಲೇಮಾನ ಮುಲ್ಲಾ, ಗುತ್ತೆಪ್ಪ ಹರಿಜನ, ಮಹ್ಮದಗೌಸ್ ಆಡೂರ, ಸುರೇಶ ಮಾಚಾಪುರ, ಬಸವರಾಜ ಬಾರ್ಕಿ, ರೇವಣಪ್ಪ ಬಾರ್ಕಿ, ಗುಡ್ಡಪ್ಪ ಪಾಣಿಗಟ್ಟಿ, ಶೇಕಪ್ಪ ಕರಡಿ, ತಿರಕಪ್ಪ ಗೋದಿ ಮೊದಲಾದವರು ಈ ಸಂದರ್ಭದಲ್ಲಿದ್ದರು.ಇಂದು ಹಸಿರು ಮಾರ್ಗ ಗಿಡ ನೆಡುವ ಕಾರ್ಯಕ್ರಮ

ರಾಣಿಬೆನ್ನೂರು: ಸ್ಥಳೀಯ ನಗರಸಭೆ, ಮುತ್ತೂಟ್ ಫೈನಾನ್ಸ್, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುತ್ತೂಟ್ ಹಸಿರು ಮಾರ್ಗ ಶೀರ್ಷಿಕೆಯಡಿ 300 ಗಿಡಗಳನ್ನು ನೆಡುವ ಕಾರ್ಯಕ್ರಮ ಜೂ. 9ರಂದು ಬೆಳಗ್ಗೆ 10ಕ್ಕೆ ನಗರದ ದೊಡ್ಡಕೆರೆ ಆವರಣದಲ್ಲಿ ಆಯೋಜಿಸಲಾಗಿದೆ.ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆ ವಹಿಸುವರು. ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರೇಶ ಮೋಟಗಿ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ, ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ, ಜಿಲ್ಲಾ ಜೈವಿಕ ಇಂಧನ ಯೋಜನೆ ಸಂಯೋಜಕಿ ಡಾ. ಪ್ರಿಯ ಪಿ., ದಾವಣಗೆರೆ ಮುತ್ತೂಟ್ ಫೈನಾನ್ಸ್ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ನೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಫ್. ಅಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ