ನಾಗೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜಕೀಯ ಅಸ್ವಿತ್ವಕ್ಕಾಗಿ ಬಿಜೆಪಿ ಲಿಂಗಸುಗೂರಿಂದ ಪಾದಯಾತ್ರೆ ರಾಜಕೀಯ ಮಾಡಿದೆ. ಇದಕ್ಕೆ ಭಾರತ ಜೋಡೊ ಯಾತ್ರೆ ನಡೆಸಿ ಠಕ್ಕರ್ ಕೊಡಲಾಗುವುದೆಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ನಾಗೇಂದ್ರ ರವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ರಾಜಕೀಯ ಅಸ್ವಿತ್ವಕ್ಕಾಗಿ ಬಿಜೆಪಿ ಲಿಂಗಸುಗೂರಿಂದ ಪಾದಯಾತ್ರೆ ರಾಜಕೀಯ ಮಾಡಿದೆ. ಇದಕ್ಕೆ ಭಾರತ ಜೋಡೊ ಯಾತ್ರೆ ನಡೆಸಿ ಠಕ್ಕರ್ ಕೊಡಲಾಗುವುದೆಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಡಿಸಿಸಿ ಅಧ್ಯಕ್ಷರಿಗೆ ಸನ್ಮಾನ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಜನರು ಕಾಂಗ್ರೆಸ್ಗೆ ಅಧಿಕಾರ ನೀಡಿದಾಗ ಸಾಮಾನ್ಯರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಿದೆ. ಇತ್ತೀಚೆಗೆ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ಹಣ ನೀಡಿ ಬಡವರ ಸಬಲೀಕರಣಕ್ಕೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಇತಿಹಾಸದಲ್ಲಿ ಕಂಡು ಕೇಳರಿಯದ ಬರಗಾಲ ಬಂದಿದೆ. ಇಂತಹ ದುಷ್ಕಾಲದಲ್ಲಿ ರೈತರ ನೆರವಿಗೆ ಬರಬೇಕಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸು ನೀಡಿಲ್ಲ. ಬಿಜೆಪಿ ಕೇಂದ್ರ ಸಚಿವರು, ಸಂಸದರು, ಶಾಕರು ಗಮನ ಹರಿಸುತ್ತಿಲ್ಲ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಹೂಲಗೇರಿ ಅಭ್ಯರ್ಥಿ: ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಿ.ಎಸ್ ಹೂಲಗೇರಿ ಅಭ್ಯರ್ಥಿಯಾಗಿದ್ದಾರೆ. ಜಿ.ಪಂ, ತಾ.ಪಂ ಸೇರಿ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಹೂಲಗೇರಿಯವರನ್ನು ಶಾಸಕರನ್ನಾಗಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಉಸ್ತುವಾರಿ ಬಸನಗೌಡ ಬಾದರ್ಲಿ ಕರೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜ್, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ, ಶಿವಶಂಕರಗೌಡ, ಡಾ.ಶಿವಬಸ್ಸಪ್ಪ, ಅಮರಗುಂಡಪ್ಪ ಮೇಟಿ, ಸಿದ್ದನಗೌಡ ಪಾಟೀಲ್ ಕಸಬಾ ಲಿಂಗಸು ಗೂರು, ಖಾದರ್ ಪಾಶ, ಗ್ಯಾರಂಟಿ ಯೋಜನೆ ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ರಾಜಾ ಶ್ರೀನಿವಾಸ ನಾಯಕ ಕೋಠಾ, ವಿಶ್ವಕ್ರಾಂತಿ ಗೆಜ್ಜಲಗಟ್ಟಾ, ಮುದಕಪ್ಪ ವಕೀಲ, ಎಸ್.ಆರ್ ರಸೂಲ್, ಮನೋಃರೆಡ್ಡಿ ಮುನ್ನೂರು, ಗಂಗಮ್ಮ ಕಟ್ಟಿಮನಿ, ವಿಜಯಲಕ್ಷ್ಮೀ ದೇಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಸೊಪ್ಪಿನಮಠ, ಅಹ್ಮದ್ ಬಾಬಾ, ಮೌನೇಶ ಪೂಜಾರಿ, ಗದ್ದೆನಗೌಡ, ಅಮ್ಜದ್ ಸೇಠ್, ಮಹಾಂತೇಶ ಸೇರಿದಂತೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.