ಬಿಜೆಪಿಯ ಜನಪರ ಯೋಜನೆಗಳಿಗೆ ಕಾಂಗ್ರೆಸ್‌ನಿಂದ ಕೊಕ್ಕೆ: ಮಾಜಿ ಶಾಸಕ ದಢೇಸೂಗೂರು

KannadaprabhaNewsNetwork |  
Published : Aug 31, 2024, 01:32 AM IST
ಕಾರಟಗಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಮಾತನಾಡಿದರು. | Kannada Prabha

ಸಾರಾಂಶ

ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರ್ವ ಸಮಾಜದ ಜನರ ಒಳಿತಿಗಾಗಿ ಕೆಲಸ ಮಾಡಿದ್ದೇವೆ. ಸಮಸ್ಯೆ ಹೊತ್ತುಕೊಂಡು ಬರುವ ಜನರಿಗೆ ಹಿಂದೆ ಮುಂದೆ ನೋಡದೇ ಸಹಾಯ ಮಾಡಿ ಮನವಿಗೆ ಸ್ಪಂದಿಸುತ್ತಿದ್ದೇವು ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಕಾರಟಗಿ: ಕೇಂದ್ರದ ಎನ್‌ಡಿಎ ಸರಕಾರ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಹಿಂದೆ ಬಿಜೆಪಿ ಸರಕಾರ ಪ್ರತಿಯೊಬ್ಬ ಸಣ್ಣ ಸಣ್ಣ ವ್ಯಾಪಾರಿಗಳು, ನಿರುದ್ಯೋಗಿಗಳು ಸ್ವಾವಲಂಬಿಯಾಗಿ ಬದುಕುವಂಥ ವಿಶ್ವಕರ್ಮ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಿತ್ತು. ಬಿಜೆಪಿ ಜಾರಿ ತಂದ ಹಲವು ಜನಪರ ಯೋಜನೆಗಳಿಗೆ ಕಾಂಗ್ರೆಸ್ ಸರಕಾರ ಕೊಕ್ಕೆ ಹಾಕಿದೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಆರೋಪಿದರು.

ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ. ಸಾಮಾನ್ಯ ಕಾರ್ಯಕರ್ತರೂ ಪಕ್ಷದ ಸಂಘಟನೆಗೆ ಸಕ್ರಿಯವಾಗಿ ತೊಡಗುವುದು ಬಿಜೆಪಿಯಲ್ಲಿ ಮಾತ್ರ. ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರ್ವ ಸಮಾಜದ ಜನರ ಒಳಿತಿಗಾಗಿ ಕೆಲಸ ಮಾಡಿದ್ದೇವೆ. ಸಮಸ್ಯೆ ಹೊತ್ತುಕೊಂಡು ಬರುವ ಜನರಿಗೆ ಹಿಂದೆ ಮುಂದೆ ನೋಡದೇ ಸಹಾಯ ಮಾಡಿ ಮನವಿಗೆ ಸ್ಪಂದಿಸುತ್ತಿದ್ದೇವು. ಆದರೆ, ಕನಕಗಿರಿ ಕ್ಷೇತ್ರದಲ್ಲಿ ಸಚಿವ ಶಿವರಾಜ್ ತಂಗಡಗಿ ಬಗ್ಗೆ ಜನರಲ್ಲಿ ಭ್ರಮನಿರಸ ಪ್ರಾರಂಭವಾಗಿದೆ ಎಂದರು.

ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಉತ್ತಮ ವ್ಯಕ್ತಿಗಳಿಗೆ ಬಿಜೆಪಿ ಸದಸ್ಯತ್ವ ನೀಡಬೇಕು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಸದಸ್ಯತ್ವ ಪಡೆಯಲು ಮುಂದೆ ಬರುತ್ತಿದ್ದಾರೆ. ದೇಶ, ಧರ್ಮ ಮತ್ತು ಭಾರತೀಯ ಸಂಸ್ಕೃತಿ ರಕ್ಷಣೆಯಲ್ಲಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡುವಲ್ಲಿ ಬಿಜೆಪಿ ಉತ್ತಮ ಕಾರ್ಯ ಮಾಡುತ್ತದೆ. ಪಕ್ಷದ ಸೂಚನೆಯಂತೆ ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ಸಕ್ರೀಯರಾಗಬೇಕು ಎಂದು ಕರೆ ನೀಡಿದರು.ಈ ವೇಳೆ ಪುರಸಭೆ ಸದಸ್ಯ ಆನಂದ, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಬಸವರಾಜ ಎತ್ತಿನಮನಿ, ರವಿಸಿಂಗ್ ಯರಡೋಣಾ, ಮಂಜುನಾಥ ಹೊಸ್ಕೆರ, ಶಿವಶರಣಪ್ಪ ಶಿವಪೂಜಿ, ದೇವರಾಜ ನಾಯಕ, ಸುರೇಶ ರಾಠೋಡ್, ಲಿಂಗಪ್ಪ ಗೌರಿಪುರ, ವಿರೂಪಾಕ್ಷಿ ತಿಮ್ಮಾಪುರ, ಈಶಪ್ಪ ಮುಸ್ಟೂರು, ಸತ್ಯನಾರಾಯಣ ದೇಸಾಯಿ, ವೀರೇಂದ್ರ ದಿವಟರ್, ಹುಲಿಗೆಮ್ಮ ನಾಯಕ, ಸೇರಿ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು. ಪಂಪಪತಿ ಜಂತಕಲ್ಲ ನಿರ್ವಹಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ