ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ ಇನ್‌ಕ್ಯುಬೇಶನ್ ಹಾಗೂ ಇನ್ನೊವೇಶನ್ ಸೆಂಟರ್ ಬೆಳಗಾವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೆಡಟೆಕ್ ಹ್ಯಾಕಥಾನ್-2024 ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆ ದೇಶಾದ್ಯಂತ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳ ಸಂಪರ್ಕ ಹೊಂದಿರುವುದರಿಂದ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತದೆ. ವಿಶೇಷವಾಗಿ ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಈ ಭಾಗದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳ ಮೂಲಕ ಬಯೋಮೆಡಿಕಲ್ ಎಂಜಿನಿಯರಿಂಗ್ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ನಾವೀನ್ಯತೆ ಮತ್ತು ವಿವಿಧ ಸಂಸ್ಥೆಗಳ ಸಹಯೋಗದದೊಂದಿಗೆ ಒಳ್ಳೆಯ ಪರಿಸರ ವ್ಯವಸ್ಥೆ ರೂಪಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ತಂತ್ರಜ್ಞಾನದಲ್ಲಿ ಕರ್ನಾಟಕ ಒಳ್ಳೆಯ ಪರಿಸರ ವ್ಯವಸ್ಥೆ ಹೊಂದಿದ್ದು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ ಅಪ್‌ಗಳು ಮತ್ತು ಆರೋಗ್ಯ ಪೂರೈಕೆದಾರರ ಅಗಾಧವಾದ ಜಾಲ ಹೊಂದಿದೆ. ರಾಜ್ಯದ ನೀತಿಗಳು ಮತ್ತು ಕ್ರಮಗಳು ನಾವೀನ್ಯತೆಗೆ ಅನುಕೂಲಕರವಾದ ವಾತಾವರಣ ಹೊಂದಿರುವುದರಿಂದ ಮೆಡ್‌ಟೆಕ್ ಅಭಿವೃದ್ಧಿಯ ಕೇಂದ್ರವಾಗಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಲಭಿಸುತ್ತಿವೆ ಎಂದು ಹೇಳಿದರು.ಕರ್ನಾಟಕದ ಆರೋಗ್ಯ ಮತ್ತು ಮೆಡ್‌ಟೆಕ್ ಪರಿಸರ ವ್ಯವಸ್ಥೆ ಕ್ರಿಯಾತ್ಮಕ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ಉಪಕರಣಗಳ ವಲಯದಲ್ಲಿನ ಒಟ್ಟು ಉತ್ಪಾದನೆಯ ಶೇ.25ರಷ್ಟನ್ನು ರಾಜ್ಯ ಹೊಂದಿದ್ದು, 350ಕ್ಕೂ ಅಧಿಕ ವೈದ್ಯಕೀಯ ಸಾಧನಗಳ ತಯಾರಿಕೆ ಮತ್ತು ಪೂರೈಕೆಯ ನೆಲೆಯಾಗಿದೆ ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಅಥವಾ ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣಕ್ಕೆ ಸಕಲ ರೂಪರೇಷೆಯನ್ನು ಅಂತಿಮಗೊಳಿಸಿ ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಈ ಭಾಗದಲ್ಲಿ ಅನೇಕ ವೈದ್ಯಕೀಯ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯಗಳಿದ್ದು, ಅವುಗಳ ಮೂಲಕ ವೈದ್ಯಕೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ಸ್ವಾಲಂಬನೆ ಸಾಧಿಸಬೇಕಾಗಿದೆ ಎಂದವರು ಹೇಳಿದರು.
ದೆಹಲಿ ಐಐಟಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಿಖಿಲ ಅಗರವಾಲ ಮಾತನಾಡಿ, ಭಾರತದಲ್ಲಿ ಸ್ಟಾರ್ಟ್ ಅಪ್ 2016ರಲ್ಲಿ ವೇಗ ಪಡೆದುಕೊಂಡಿದೆ. ಭಾರತದಲ್ಲಿ 131 ಯನಿಕಾರ್ನ್‌ಗಳಿವೆ. ನಂತರ ಸಾವಿರ ಯುನಿಕಾರ್ನ್, ಮಿಲಿಯನ್ ಸ್ಟಾರ್ಟ್ ಅಪ್‌ಗಳು ಆರಂಭವಾಗಲಿವೆ. ದೇಶದ ಶೇ.80ರಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ದೇಶಗಳಿಗೆ ತೆರಳುತ್ತಾರೆ. ಹಲವು ಬಿಲ್ ಗೇಟ್ಸ್ ರನ್ನು ತಯಾರಿಸುವ ತಾಕತ್ತು ಭಾರತಕ್ಕಿದೆ. ಅದನ್ನು ಯುವಕರು ಅರಿಯಬೇಕು. ಭಾರತ ಶೇ.80ರಷ್ಟು ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲಿ ಶೆ.95ರಷ್ಟು ಸಲಕರಣೆಗಳು ವೈದ್ಯಕೀಯ ಸಲಕರಣೆಗಳಾಗಿವೆ. ಆದ್ದರಿಂದ ಅದು ತಪ್ಪಲು ವೈದ್ಯಕೀಯ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಉದ್ದಿಮೆಗಳು ಬರಬೇಕು ಎಂದು ಪ್ರತಿಪಾದಿಸಿದರು.