ಅಭಿವೃದ್ಧಿ ಮರೆತ ರಾಜ್ಯ ಕಾಂಗ್ರೆಸ್‌: ಬಿಜೆಪಿ

KannadaprabhaNewsNetwork |  
Published : Feb 12, 2024, 01:34 AM IST
ಫೋಟೋ- 11ಜಿಬಿ1 ಮತ್ತು 11ಜಿಬಿ2 ಮತ್ತು 11ಜಿಬಿ3 | Kannada Prabha

ಸಾರಾಂಶ

ಕಲಬುರಗಿ ದಕ್ಷಿಣದಲ್ಲಿ ಅಲ್ಲಂಪ್ರಭು ಶಾಸಕರೋ, ಅವರ ಮಕ್ಕಳು ಶಾಸಕರೋ ಗೊಂದಲವಿದೆ. ಬಂಧುಗಳಿಗೆ ತಂದು ಕೆಲಸ ಮಾಡಿಸುತ್ತಿದ್ದಾರೆಂದು ದೂರಿದರು. ಅಭಿವೃದ್ಧಿ ಕಾರ್ಯ ಮಾಡಲಾಗದೇ ಇದ್ದರೆ ರಾಜೀನಾಮೆ ಕೊಡಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 9 ತಿಂಗಳಾದರೂ ಸ್ವಜನ ಪಕ್ಷಪಾತ, ವರ್ಗಾವಣೆಯಲ್ಲೇ ಮಗ್ನವಾಗಿದೆ. ಪರ್ಸೆಂಟೇಜ್‌ ದಂಧೆಯಲ್ಲಿ ಮುಳುಗಿ ಅಭಿವೃದ್ಧಿಯನ್ನೇ ಮರೆತಿದೆ ಎಂದು ದೂರಿರುವ ಬಿಜೆಪಿ, ಪ್ರಗತಿ ಮರೆತ ಕಾಂಗ್ರೆಸ್ಸಿಗರೇ ಮತದಾರರಿಗೆ ಉತ್ತರಿಸಿ ಎಂದು ಬಿಜೆಪಿ ಕಲಬುರಗಿಯಲ್ಲಿ ಅಭಿಯಾನ ನಡೆಸಿತು.

ನವ ಮಾಸವಾಯ್ತು ನೀವು ಗೆದ್ದುಬಂದು, ಅದೇನು ಅಭಿವೃದ್ಧಿ ಮಾಡಿದ್ದೀರೆಂದು ಜನರಿಗೆ ಹೇಳಿರೆಂದು ಬಿಜೆಪಿಯವರು ನಡೆಸಿದ ಅಭಿಯಾನದಲ್ಲಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಕಚೇರಿ, ಮನೆಗಳಿಗೆ ಹೋಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಉತ್ತರ ಕ್ಷೇತ್ರದ ಶಾಸಕಿ ಕನೀಜಾ ಫಾತಿಮಾ ಅವರಿಗೆ ಅವರ ಆಪ್ತ ಸಹಾಯಕನ ಮೂಲಕ ಮನವಿ ಸಲ್ಲಿಸಿದ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಉತ್ತರ ಮತಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ರಸ್ತೆ, ಚರಂಡಿ, ಕುಡಿವ ನೀರು, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಪ್ರಗತಿ ಮಾಡಲು ಆಗದಿದ್ರೆ ರಾಜೀನಾಮೆ ಕೊಡಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, 9 ತಿಂಗಳಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಹ ದಕ್ಷಿಣ ಕ್ಷೇತ್ರದಲ್ಲಿ ಶಾಸಕರು ಯಾವುದೇ ಒಂದು ರುಪಾಯಿ ಅಭಿವೃದ್ಧಿ ಹೊಸ ಕಾಮಗಾರಿ ಕೈಗೊಂಡಿಲ್ಲ. ತಮ್ಮ ಮಾಡಬೇಕಾದ ಕೆಲಸ ಮಾಡದೇ ಕೇಂದ್ರದ ವಿರುದ್ಧ ಇಲ್ಲದ ಆರೋಪ ಮುಂದೆ ಮಾಡಿಕೊಂಡು ಯಾವ ಮುಖ ಇಟ್ಟುಕೊಂಡು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದೀರಿ? ಎಂದು ಖಾರವಾಗಿ ಅಲ್ಲಮಪ್ರಭು ಪಾಟೀಲ್ ಅವರಿಗೆ ಪ್ರಶ್ನಿಸಿದರು.

ದಕ್ಷಿಣದಲ್ಲಿ ಅಲ್ಲಂಪ್ರಭು ಶಾಸಕರೋ, ಅವರ ಮಕ್ಕಳು ಶಾಸಕರೋ ಗೊಂದಲವಿದೆ. ಬಂಧುಗಳಿಗೆ ತಂದು ಕೆಲಸ ಮಾಡಿಸುತ್ತಿದ್ದಾರೆಂದು ದೂರಿದರು. ಅಭಿವೃದ್ಧಿ ಕಾರ್ಯ ಮಾಡಲಾಗದೇ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಎಂಎಲ್‌ಸಿ ಅಮರನಾಥ್ ಪಾಟೀಲ್, ಮಹಾಪೌರ ವಿಶಾಲ್ ದರ್ಗಿ, ಉಪ ಮಹಾಪೌರ ಶಿವಾನಂದ್ ಪಿಸ್ತಿ, ಪಾಲಿಕೆ ಸದಸ್ಯರು ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!